ತಾಲೂಕು ಕೇಂದ್ರದಲ್ಲಿ ಗಣರಾಜ್ಯೋತ್ಸವ, ಸನ್ಮಾನ

ಬೆಳ್ತಂಗಡಿ: ಇಲ್ಲಿನ ಮಿನಿ ವಿಧಾನ ಸೌಧದ ಬಳಿ ತಾಲೂಕು ಆಡಳಿತದಿಂದ ಗಣರಾಜ್ಯೋತ್ಸವ ಆಚರಣೆ ನಡೆಯಿತು.

ತಹಶಿಲ್ದಾರ ಗಣಪತಿ ಶಾಸ್ರ್ತಿ ಧ್ವಜವಂದನೆ ಸ್ವೀಕರಿಸಿ.
ಶಾಸಕ ಹರೀಶ್ ಪೂಂಜ ಅಧ್ಯಕ್ಷತೆ ವಹಿಸಿದ್ದರು‌.

ತಾ.ಪಂ‌ ಅಧ್ಯಕ್ಷೆ ದಿವ್ಯಜ್ಯೋತಿ, ತಾ‌ಪಂ‌ ಇಒ ಜಯರಾಮ ಕೆ.ಇ, ಗೃಹರಕ್ಷಕ ದಳದ ಜಯಾನಂದ ಲಾಯಿಲ, ನಿವೃತ ಸೇನಾನಿ ಎಂ. ಆರ್ ಜೈನ್ ಮೊದಲಾದವರು ಉಪಸ್ಥಿತರಿದ್ದರು.

ಸನ್ಮಾನ:
ಈ ಸಮಾರಂಭದಲ್ಲಿ, ಇತ್ತೀಚೆಗೆ ಗುರುವಾಯನಕೆರೆ ಎಟಿಎಂ ಕೇಂದ್ರದ ಲ್ಲಿ ಸಿಕ್ಕಿದ ಎಂಟು ಲಕ್ಷ ರೂ. ಗಳ ಮೌಲ್ಯದ ಚಿನ್ನಾಭರಣ ಇದ್ದ ಬ್ಯಾಗನ್ನು ಪ್ರಾಮಾಣಿಕವಾಗಿ ಮರಳಿಸಿದ ಗೃಹ ರಕ್ಷಕ ಸಿಬ್ಬಂದಿ ಕರುಣಾಕರ ಅವರಿಗೆ ಸನ್ಮಾನ ನಡೆಯಿತು.
ಕ್ರೀಡೆಯಲ್ಲಿ ಸಾಧನೆ ಮೆರೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ದಾಯಕವಾಗಿ ಸನ್ಮಾನ ನಡೆಯಿತು.
ವಾಣಿ ವಿದ್ಯಾ ಸಂಸ್ಥೆಯ ಶಿಕ್ಷಕಿ ಮೀನಾಕ್ಷಿ ಎಂ ಗೌಡ ಉಪನ್ಯಾಸ ನಡೆಸಿಕೊಟ್ಟರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.