ಬೆಳ್ತಂಗಡಿ ಭೂ ಅಭಿವೃದ್ಧಿ ಬ್ಯಾಂಕ್ ಚುನಾವಣೆ ಬಿ.ಜೆ.ಪಿ ಬೆಂಬಲಿತ ಸಹಕಾರಿ ಭಾರತಿ 8 ಕಾಂಗ್ರೆಸ್ 5 ಸ್ಥಾನಗಳಲ್ಲಿ ಗೆಲುವು

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಇದರ ಆಡಳಿತ ಮಂಡಳಿಯ 13 ಸ್ಥಾನಗಳಿಗೆ ಜ.೩೫ರಂದು ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರಿ ಭಾರತಿ ಅಭ್ಯರ್ಥಿಗಳು ಎಂಟು ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸುವುದು ರೊಂದಿಗೆ ಬ್ಯಾಂಕಿನ ಆಡಳಿತ ವನ್ನು ತಮ್ಮ ವಶ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳು ಐದು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ . ‌ ಬಿಜೆಪಿ ಬೆಂಬಲಿತ ಸಹಕಾರಿ ಭಾರತೀಯ ವಿಜೇತರಾದವರ ವಿವರ: ಇಂದಬೆಟ್ಟು ಕ್ಷೇತ್ರದಿಂದ ವಾಮನಗೌಡ ನಾವೂರು ಕ್ಷೇತ್ರದಿಂದ ಶೀಲಾವತಿ ಪಡಂಗಡಿ ಕ್ಷೇತ್ರದಿಂದ ವಾಮನ ಬಾಳಿಗಾ ವೇಣೂರು ಕ್ಷೇತ್ರದಿಂದ ವಿಜಯ ಮಚ್ಚಿನ ಕ್ಷೇತ್ರದಿಂದ ಶ್ರೀಧರ , ಕಳೆಂಜ ಕ್ಷೇತ್ರದಿಂದ ಸಂತೋಷ್ ಕುಮಾರ್ ಹಾಗೂ ಅಳದಂಗಡಿ ಕ್ಷೇತ್ರದಿಂದ ಸೋಮನಾಥ ಬಂಗೇರ ಧರ್ಮಸ್ಥಳ ಕ್ಷೇತ್ರದಿಂದ ಕರಿಯ ನಾಯ್ಕ ಆಯ್ಕಯಾಗಿದ್ದಾರೆ. ಕಾಂಗ್ರೆಸ್ ಬೆಂಬಲಿತರಾಗಿ ಸ್ಪರ್ಧಿಸಿದ್ದ ಉಜಿರೆ ಕ್ಷೇತ್ರದಲ್ಲಿ ಲೋಕಯ್ಯ ಗೌಡ ಕಣಿಯೂರು ಕ್ಷೇತ್ರದಲ್ಲಿ ಎಂ ಈಶ್ವರ ಭಟ್ ಬೆಳ್ತಂಗಡಿ ಸಾಲೆತರ ಕ್ಷೇತ್ರದಲ್ಲಿ ಶಂಕರ ವಿಠಲ ಹಾಗೂ ಬೆಳ್ತಂಗಡಿ ಕ್ಷೇತ್ರದಲ್ಲಿ ದಿನೇಶ‌, ನಾರಾವಿ ಕ್ಷೇತ್ರದಲ್ಲಿ ‌ಶುಭಕರ ಪೂಜಾರಿ‌ ಆಯ್ಕೆಯಾದವರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.