ವಸಂತ ಸಾಲಿಯಾನ್ ಕಾಪಿನಡ್ಕ, ಶ್ರೀಧರ ಗೌಡ ಕೆಂಗುಡೇಲು ರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ತಾಲೂಕಿನ ನಾಲ್ವರಿಗೆ 2019 ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಗೊಂಡಿದೆ.
ವಿವಿಧ ಕಾರಣಗಳಿಂದ ಘೋಷಣೆಗೆ ಉಳಿದುಕೊಂಡಿದ್ದ 2019 ನೇ ಸಾಲಿನ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಇದೀಗ ಸರಕಾರ ಪ್ರಕಟಿಸಿದೆ.

ಬೆಳ್ತಂಗಡಿ ತಾಲೂಕಿನ ತೆಂಕಕರಂದೂರು ನಿವಾಸಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸ್ಥಾಪಕಾಧ್ಯಕ್ಷ ವಸಂತ ಸಾಲಿಯಾನ್ ಕಾಪಿನಡ್ಕ (ತಾಲೂಕು ಜನಜಾಗೃತಿ ಕಾರ್ಯಕ್ರಮ ಅನುಷ್ಠಾನ), ಎಂಡೋ ಸಲ್ಫಾನ್ ಪೀಡಿತರ ಪರ ಹೋರಾಟಗಾರ ಕೊಕ್ಕಡ ಗ್ರಾಮದ ಕೆಂಗುಡೇಲು ನಿವಾಸಿ ಶ್ರೀಧರ ಗೌಡ,   ಯುವ ಕೀಡಾಪಟು ಪವರ್ ಲಿಪ್ಟಿಂಗ್ ರಿತ್ವಿಕ್ ಅಲೆವೂರು,  ಸಮಾಜ ಸೇವಾ ಸಂಘಟನೆ ಸೇವಾ ಭಾರತಿ ಅಯ್ಕೆಯಾಗಿದ್ದಾರೆ.
ಸಂಸ್ಥೆಗಳನ್ನು ಗುರುತಿಸುವ ನಿಟ್ಟಿನಲ್ಲಿ ಆಯ್ಕೆ ಮಂಡಳಿ ಕೈಗೊಂಡ ತೀರ್ಮಾನದಂತೆ ಜನಪರ ಕಾರ್ಯಕ್ರಮ ಅನುಷ್ಠಾನಿಸುತ್ತಿರುವ ಕನ್ಯಾಡಿಯ ಸೇವಾಭಾರತಿ ಸಂಸ್ಥೆ ಜಿಲ್ಲಾ ರಾಜ್ಯೋತ್ಸವ ಗೌರವಕ್ಕೆ ಆಯ್ಕೆಯಾಗಿದೆ.
ನಾಳೆ ಪ್ರಶಸ್ತಿ ಪ್ರದಾನ
ನಾಳೆ ಜ. 26 ರಂದು ಜಿಲ್ಲಾ ಕೇಂದ್ರದಲ್ಲಿ ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಈ ಆಯ್ಕೆಗೊಂಡಿರುವ ಮಹನೀಯರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.