HomePage_Banner_
HomePage_Banner_

ಗಡಿಪಾರಾಗಿದ್ದ ವ್ಯಕ್ತಿಯಿಂದ ಮತ್ತೊಂದು ಕೊಲೆ‌: ಆರೋಪಿ ಬಂಧನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಗುರುವಾಯನಕೆರೆ: ಇಲ್ಲಿಯ  ಶಕ್ತಿನಗರದ ಬಳಿ ರತ್ನನಗಿರಿ ನಿವಾಸಿ  ಅಣ್ಣು ಎಂಬವರಿಂದ  ಗರ್ಡಾಡಿ ನಿವಾಸಿ ನಾರಾಯಣ ಯಾನೆ  ರಮೇಶ್ ( 40.ವ ) ಎಂಬವರ ಕೊಲೆಯಾದ ಘಟನೆ ಇಂದು ಜ.24 ರಂದು ರಾತ್ರಿ ನಡೆದಿದೆ. ಶುಕ್ರವಾರ ರಾತ್ರಿ 9.30 ಸುಮಾರಿಗೆ ಮಾರಕ ಅಸ್ತ್ರದಿಂದ ಕಡಿದು ಕೊಲೆ ಮಾಡಲಾಗಿದೆ.  ಪೂರ್ವ ದ್ವೇಷ ಹಿನ್ನೆಲೆಯಿಂದ ಕೊಲೆ ನಡೆಸಿರಬಹುದು ಎಂದು ಪೊಲೀಸರು ಪ್ರಾರಂಭಿಕ ಶಂಕೆ ವ್ಯಕ್ತಪಡಿಸಿದ್ದಾರೆ.ಆರೋಪಿಯಾಗಿರುವ ಅಣ್ಣು ಅವರು ಕಳೆದ ಹಲವಾರು ವರ್ಷಗಳಿಂದ ಅನೇಕ ಪ್ರಕರಣಗಳಲ್ಲಿ ಭಾಗಿಯಾಗಿ ಕೇಸು ಎದುರಿಸುತ್ತಿದ್ದಾರೆ. ಹಲವು ಬಾರಿ ಸೆರೆವಾಸವನ್ನೂ ಅನುಭವಿಸಿದ್ದಾರೆಂದು ಪ್ರಾಥಮಿಕ ಮಾಹಿತಿ ಲಭಿಸಿದೆ. ಪೊಲೀಸರು ತಕ್ಷಣ ಆರೋಪಿಯನ್ನು ಬಂಧಿಸಿ ತೀವ್ರ ತನಿಖೆಗೆ ಒಳಪಡಿಸುತ್ತಿದ್ದಾರೆ.

🔷 ಗಡಿಪಾರು ಮಾಡಲಾಗಿತ್ತು

ಸದ್ರಿ ಪ್ರಕರಣದ ಆರೋಪಿ ಅಣ್ಣು ಅವರನ್ನು ಹಲವು ಕೃತ್ಯಗಳಲ್ಲಿ ಭಾಗಿಯಾಗಿರುವ ಹಿನ್ನೆಲೆಯಲ್ಲಿ ಹಿಂದೊಮ್ಮೆ ಬೆಳ್ತಂಗಡಿ ತಾಲೂಕಿನಿಂದ ಗಡಿಪಾರು ಮಾಡಲಾಗಿತ್ತು. ಆದರೆ ಮತ್ತೆ ಮರಳಿದ್ದ ಅಣ್ಣು ಇದೀಗ ಇನ್ನೊಂದು ಬರ್ಭರ ಕೊಲೆಗೆ ಬಂಧಿಯಾಗುವಂತಾಗಿದೆ

ಮೃತರು ಪತ್ನಿ, ಮೂವರು ಮಕ್ಕಳು, ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.