ಜ.28 ರಿಂದ ಫೆ.1 ತೆಂಕಕಾರಂದೂರು ಶ್ರೀ ವಿಷ್ಣು ಮೂರ್ತಿ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ

ತೆಂಕಕಾರಂದೂರು: ಇತಿಹಾಸ ಪ್ರಸಿದ್ಧ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ತೆಂಕಕಾರಂದೂರಿನಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವವು ಜ.28 ರಿಂದ ಫೆ.1ರ ವರೆಗೆ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ತಂತ್ರಿಗಳಾದ ವೇದಮೂರ್ತಿ ಶ್ರೀ ನಡ್ವಂತಾಡಿ ಬಾಲಕೃಷ್ಣ ಪಾಂಗಣ್ಣಯರವರ ನೇತೃತ್ವದಲ್ಲಿ ನಡೆಯಲಿದೆ.
ಜ.28 ರಂದು ಬೆಳಿಗ್ಗೆ ಹೊರಕಾಣಿಕೆ, ಮೆರವಣಿಗೆ, ಉಗ್ರಾಣ ಮೂಹೂರ್ತ, ಅನ್ನಸಂತರ್ಪಣೆ, ರಾತ್ರಿ ರಂಗಪೂಜೆ, ಮಹಾಪೂಜೆ ನಡೆಯಲಿದೆ. ಜ.29 ರಂದು ಶ್ರೀ ವಿಷ್ಣುಮೂರ್ತಿ ದೇವರ ಮಹಾಪೂಜೆ, ರಾತ್ರಿ ರಂಗಪೂಜೆ, ಕೊಡಮಣಿತ್ತಾಯ, ಮೂಜಿಲ್ನಾಯ, ಕಲ್ಕುಡ- ಕಲ್ಲುರ್ಟಿ ದೈವಗಳಿಗೆ ಗಗ್ಗರ ಸೇವೆ ಜ.30ರಂದು ಬೆಳಿಗ್ಗೆ ನಾಗದೇವರ ಸನ್ನಿಧಿಯಲ್ಲಿ ಪಂಚಾಮೃತ ಅಭಿಷೇಕ, ಆಶ್ಲೇಷ ಬಲಿ ಪೂಜೆ, ರಾತ್ರಿ ೭ರಿಂದ ಧಾರ್ಮಿಕ ಸಭೆ ನಡೆಯಲಿದ್ದು ಶ್ಯಾಮ್ ಸುದರ್ಶನ್ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಎಸ್.ಕೆ.ಡಿ.ಆರ್.ಡಿ.ಪಿ. ಮಂಗಳೂರು ನಿರ್ದೇಶಕ ಸತೀಶ್ ಶೆಟ್ಟಿ ಅಲಿಮಾರ್, ಭಜನಾ ಮಂಡಳಿ ಅಶ್ವಥ್ ಭಾಗವಹಿಸಲಿದ್ದಾರೆ. ರಾತ್ರಿ 8 ರಿಂದ ಯಕ್ಷಗಾನ, ನಾಟ್ಯ, ಹಾಸ್ಯ ವೈಭವ ಜರುಗಲಿದೆ ವಿಶೇಷವಾಗಿ ತುಳುವ ಮಾಣಿಕ್ಯ ಅರವಿಂದ ಬೋಳಾರ್, ಭಾಗವತ ಗಿರೀಶ್ ರೈ ಕಕ್ಯಪದವು, ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಜ.31 ರಂದು ಬೆಳಿಗ್ಗೆ ವೈದಿಕ ವಿಧಿವಿಧಾನಗಳು ಪ್ರಾರಂಭ ರಾತ್ರಿ ರಂಗಪೂಜೆ, ವಸಂತಕಟ್ಟೆ ಪೂಜೆ ನಡೆಯಲಿದೆ ಫೆ. 1 ರಂದು ಬೆಳಿಗ್ಗೆ ವೈದಿಕಾ ವಿಧಿ ವಿಧಾನಗಳು ಪ್ರಾರಂಭ, ರಾತ್ರಿ ನಿತ್ಯ ಪೂಜೆ, ಉತ್ಸವ ಬಲಿ ಜರುಗಲಿದೆ. ಫೆ.2 ರಂದು ಪ್ರಸಾದ ವಿತರಣೆ ನಡೆಯಲಿದೆ ಎಂದು ಜಾತ್ರಾ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ಕಾಪಿನಡ್ಕ ಹಾಗೂ ದೇವಸ್ಥಾನ ಆಡಳಿತ ಮೊಕ್ತೇಶರ ಕೆ.ಕೃಷ್ಣ ಸಂಪಿಗೆತ್ತಾಯ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.