ಸ್ವಚ್ಛತಾ ಅಭಿಯಾನದ 14ನೇ ಸಾಪ್ತಾಹಿಕ ಕಾರ್ಯಕ್ರಮ

Advt_NewsUnder_1
Advt_NewsUnder_1
Advt_NewsUnder_1

ದೇಹ ಮನಸು ಪರಿಸರ ಮನೆ ಇವುಗಳನ್ನು ಪ್ರತಿದಿನ ನಮ್ಮ ಆತ್ಮ ಶುದ್ಧಿಯಿಂದ ಸ್ವಚ್ಛವಾಗಿ ಇರಿಸಬೇಕು ಇದರಿಂದ ನಮ್ಮ ಜೀವನವು ಸ್ವಚ್ಛಂದವಾಗಿಯೂ, ಸಂತೋಷದಾಯಕ ವಾಗಿಯೂ ಇರಲು ಸಾಧ್ಯ ಎಳೆಯ ವಯಸ್ಸಿನಿಂದಲೇ ಈ ಕ್ರಮಗಳನ್ನು ಅಳವಡಿಸಿಕೊಂಡು ಮುನ್ನಡೆದರೆ ಸ್ವಚ್ಛ ಸುಂದರ ಹಾಗೂ ಉತ್ತಮವಾದ ಚಾರಿತ್ರ್ಯ ಮೈಗೂಡುತ್ತದೆ ಇದನ್ನು ನಾವು ಪ್ರತಿಯೊಬ್ಬರೂ ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳೋಣ ಇಂದು ನಿವೃತ್ತ ಕಂದಾಯ ಅಧಿಕಾರಿ ಪದ್ಮಕುಮಾರ್ ಅವರು ಹೇಳಿದರು ಅವರು. ಬೆಳ್ತಂಗಡಿ ಪಟ್ಟಣ ಪಂಚಾಯತು ವತಿಯಿಂದ ಸಂಘ-ಸಂಸ್ಥೆಗಳು ಹಾಗೂ ಸ್ಥಳೀಯ ನಾಗರಿಕರ ಸಹಕಾರದಿಂದ ಸತತವಾಗಿ ಪ್ರತಿ ಗುರುವಾರ ಬೆಳ್ತಂಗಡಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗುತ್ತಿರುವ ಸ್ವಚ್ಛತಾ ಅಭಿಯಾನದ 14ನೇ ಸಾಪ್ತಾಹಿಕ ಕಾರ್ಯಕ್ರಮದ ಕೊನೆಯಲ್ಲಿ ತಮ್ಮ ಅನಿಸಿಕೆಯನ್ನು ಹಂಚಿಕೊಂಡು ಮಾತನಾಡಿದರು.


ಸರಕಾರಿ ವಸತಿ ಶಾಲೆ ಮುಗುಳಿ ಇದರ ಮುಖ್ಯೋಪಾಧ್ಯಾಯರು ತಮ್ಮ 40 ವಿದ್ಯಾರ್ಥಿ ವಿದ್ಯಾರ್ಥಿನಿಯರ ತಂಡ ದೊಂದಿಗೆ ಸ್ವಚ್ಛತಾ ಅಭಿಯಾನದಲ್ಲಿ ಕೈಜೋಡಿಸಿ ರೆಂಕೆದ ಗುತ್ತು ಶಾಲೆಯ ವರೆಗಿನ ಸುಮಾರು ಒಂದು ಕಿಲೋಮೀಟರ್ ನಷ್ಟು ರಸ್ತೆಬದಿಯಲ್ಲಿ ಸ್ವಚ್ಛತೆಯ ಕಾರ್ಯವನ್ನು ಮಾಡಿ ಮುಂದೆಯೂ ತಮ್ಮ ಸಂಪೂರ್ಣ ಸಹಕಾರವನ್ನು ನೀಡಲು ಬದ್ಧರು ಎಂದು ಹೇಳಿದರು. ಪಟ್ಟಣ ಪಂಚಾಯಿತಿ ಸದಸ್ಯರಾದ  ತುಳಸಿ ಗೌರಿ ಸಿಬ್ಬಂದಿಗಳಾದ ವೆಂಕಟರಮಣ ಶರ್ಮ ಮಹಾವೀರ ಆರಿಗ ಶಮೀಮ, ವಿಜಯಕುಮಾರ್ ದಿವ್ಯಶ್ರೀ ವಸಂತಿ ವಿಶಾಲಾಕ್ಷಿ ಲಕ್ಷ್ಮೀನಾರಾಯಣ ಜಯ ಕುಮಾರ್ ಕರುಣಾಕರ ಅಂಗನವಾಡಿ ಕಾರ್ಯಕರ್ತೆ ಪದ್ಮಾವತಿ, ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಸ್ಥಳೀಯ ನಾಗರಿಕರು ಸ್ವಚ್ಛತಾ ಸೇನಾನಿ ಜಯರಾಮಾಚಾರಿ
ಸೇರಿದಂತೆ ಹಲವಾರು ಸ್ಥಳೀಯರು ಅಭಿಯಾನದ ಯಶಸ್ವಿಗೆ ಸಹಕರಿಸಿದರು. ಮುಖ್ಯ ಅಧಿಕರಿ ಸುಧಾಕರ್ ಎಂ ಎಚ್ ಅವರು ಮಾತನಾಡಿ ಕಳೆದ ಮೂರು ತಿಂಗಳಿನಿಂದ ಅಭಿಯಾನವು ಬೆಳ್ತಂಗಡಿ ನಗರ ವ್ಯಾಪ್ತಿಯ ಎಲ್ಲಾ ವಾರ್ಡ್ ವ್ಯಾಪ್ತಿಯಲ್ಲಿ ಯಶಸ್ವಿಯಾಗಿ ಪೂರ್ಣಗೊಂಡು ಎಲ್ಲಾ ಕಡೆಗಳಲ್ಲೂ ಸ್ವಚ್ಛತೆಯ ಜಾಗೃತಿ ಮೂಡಿದ್ದು ಪ್ರತಿ ಮನೆ ಪ್ರತಿ ರಸ್ತೆ ನಗರ ಜಿಲ್ಲೆ ರಾಜ್ಯ ದೇಶದಲ್ಲಿ ಇದೇ ರೀತಿಯ ಇದೇ ರೀತಿ ಜಾಗೃತಿ ಮೂಡಿ ಬರಲಿ ಆ ಮೂಲಕ ಸ್ವಚ್ಛ ಸಮಾಜದ ನಿರ್ಮಾಣವಾಗಲಿ ಎಂದು ಹಾರೈಸಿ ಪ್ರತಿಯೊಬ್ಬರಿಗೂ ಕೃತಜ್ಞತೆ ಅರ್ಪಣೆ ಮಾಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.