ಬಂದಾರು ಪಂಚಾಯತ್ ತೆರಿಗೆ ಪರಿಷ್ಕರಣೆ ವಿವಾದ ಹೈಕೋರ್ಟ್‍ನಲ್ಲಿ ವಿಚಾರಣೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

– ಪಂಚಾಯತ್ ಸುಳ್ಳು ಮಾಹಿತಿ ನೀಡಿದೆ: ದೂರುದಾರ ಪರ ನ್ಯಾಯವಾದಿ
– ನಿಯಮಾನುಸಾರ ಕೈಗೊಂಡ ಪರಿಷ್ಕರಣೆ ಕೋರ್ಟ್ ಪುರಸ್ಕರಿದೆ: ಪಂಚಾಯತ್ ಪರ ನ್ಯಾಯವಾದಿ

ಬಂದಾರು: ಇಲ್ಲಿನ ಪಂಚಾಯತ್‌ನ ತೆರಿಗೆ ಪರಿಷ್ಕರಣೆ ವಿಚಾರವಾಗಿ ಪಂಚಾಯತ್ ಆಡಳಿತ ಮತ್ತು ಗ್ರಾಮಸ್ಥರ ನಡುವೆ ಏರ್ಪಟ್ಟಿದ್ದ ಜಟಾಪಟಿ ರಾಜ್ಯ ಹೈಕೋರ್ಟ್ ಮೆಟ್ಟಿಲೇರಿದ ವಿಚಾರ ಹಳೆಯ ಕಥೆಯಾದರೆ ಇದೀಗ ಪಂಚಾಯತ್‌ನಿಂದ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಸಾರ್ವಜನಿಕರ ಪರ ವಕೀಲ ಪಂಚಾಯತ್ ಅಧ್ಯಕ್ಷ, ಪಿಡಿಒಗೆ ನೋಟೀಸು ಜಾರಿ ಮಾಡಿದ್ದಾರೆ.
ಗ್ರಾ.ಪಂ ವತಿಯಿಂದ 2016 ರಲ್ಲಿ ತೆರಿಗೆ ಪರಿಷ್ಕರಣೆ ಮಾಡಿ ಹಿಂದೆ ಇದ್ದ ತೆರಿಗೆ 147 ಇದ್ದುದು 590 ಎಂಬಂತೆ ಮೂರು ಪಟ್ಟು ಅಧಿಕವಾಗಿತ್ತು. ಇದನ್ನು ಗ್ರಾಮಸ್ಥರು ಮುಂದಿನ ಗ್ರಾಮ ಸಭೆಯಲ್ಲಿ ಒಕ್ಕೊರಲಿನಿಂದ ವಿರೋಧಿಸಿ ಶೇ. ೫೦ ರಷ್ಟು ಮಾತ್ರ ಜಾಸ್ತಿ ಮಾಡುವಂತೆ ನಿರ್ಣಯಕೈಗೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಆದರೂ ಈ ಕ್ರಮ ಮುಂದುವರಿದಿರುವುದರಿಂದ ಗ್ರಾಮಸ್ಥರು ಬೆಳ್ತಂಗಡಿ ತಾ.ಪಂ ಮತ್ತು ಜಿ.ಪಂ ಪ್ರಾಧಿಕಾರಕ್ಕೆ ದಾವೆ ಹೂಡಿದ್ದರು. ಆದರೆ ಅಲ್ಲಿ ನಡೆದ ವಿಚಾರಣೆ ವೇಳೆ, ಈ ಪರಿಷ್ಕರಣೆ ನಿಯಮಬದ್ಧವಾಗಿದೆ. ಎಲ್ಲ ಮನೆಗಳಿಗೆ ಭೇಟಿ ನೀಡಿ ಅಳತೆ ಮಾಡಿ ತೆರಿಗೆ ನಮೂದಿಸಲಾಗಿದೆ ಎಂದು ದಾವೆ ವಜಾಗೊಂಡಿತ್ತು. ಇದನ್ನು ಪ್ರಶ್ನಿಸಿ ಗ್ರಾಮಸ್ತರ ಪರವಾಗಿ ಸದಾನಂದ ಪೂಜಾರಿ ಇಚಿಲ್ತಾಡಿ, ಮೇದಪ್ಪ ಗೌಡ ಪುಂಡಿಪಿಲ, ರಾಮಯ್ಯ ಗೌಡ ಯಾನೆ ಪ್ರಭಾಕರ ಗೌಡ ಪುಂಡಿಪಿಲ, ಶ್ರೀನಿವಾಸ ಗೌಡ ಪರಪ್ಪಾದೆ ಮತ್ತು ಉದಯ ಭಟ್ ಕೊಲಬೆ ಇವರು ಇವರು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ವೇಳೆ ಗ್ರಾ.ಪಂ ಪರ ನ್ಯಾಯವಾದಿಗಳು, ಗ್ರಾ.ಪಂ ನಿಂದ ನಿಯಮಬದ್ಧವಾಗಿ ೨೦೧೬ ರ ನಿರ್ಣಯದಂತೆ ತೆರಿಗೆ ವಸೂಲಿ ಮಾಡುತ್ತಿದೆ ಎಂದು ಪ್ರಮಾಣಪತ್ರ ಸಲ್ಲಿಸಿದ್ದರು. ಇದರನ್ವಯ ಹೈಕೋರ್ಟ್‌ನಲ್ಲೂ ಪ್ರಕರಣ ತೀರ್ಪುಪಡೆದಿತ್ತು. ಆದರೆ ಗ್ರಾಮಸ್ಥರ ಪರ ವಕೀಲರು, ಸದ್ರಿ ಪಂಚಾಯತ್ ಹೈಕೋರ್ಟ್‌ಗೆ ಸಲ್ಲಿಸಿದ ಮಾಹಿತಿ ಸುಳ್ಳು. ಇದರಿಂದ ನ್ಯಾಯಾಂಗ ನಿಂದನೆಯಾಗಿದೆ ಎಂದು ಆಪಾದಿಸಿ ಇದೀಗ ಪಂಚಾಯತ್ ಪಿಡಿಒ ವಿರುದ್ಧ ಕೋರ್ಟ್‌ನೋಟೀಸು ನೀಡಿದ್ದಾರೆ.
—— 
ನನ್ನ ಕಕ್ಷಿದಾರರು ನೀಡಿದ ದೂರು ಅರ್ಜಿ ಪುರಸ್ಕರಿಸಿದ ಹೈಕೋರ್ಟ್ 2015-16 ನೇ ಸಾಲಿನಲ್ಲಿ 12.5.2016 ರಂದು ತೆಗೆದುಕೊಂಡ ನಿರ್ಣಯದ ಪ್ರಕಾರ ವಿಧಿಸಿದ ತೆರಿಗೆ ಹೆಚ್ಚುವರಿ ಎಂದು ಕಂಡುಬಂದಲ್ಲಿ ಅದನ್ನು ಕೂಡ ಪ್ರಶ್ನೆ ಮಾಡುವ ಅಧಿಕಾರವನ್ನು ನೀಡಿರುತ್ತದೆ. ಆದುದರಿಂದ ಪಂಚಾಯತ್ ತೆಗೆದುಕೊಂಡ 31.3.2017 ನಿರ್ಣಯಕ್ಕೆ ಯಾವುದೇ ಬೆಲೆ ಇಲ್ಲ. 2016-17 ರಲ್ಲಿ ಪಂಚಾಯತ್ ಪರಿಷ್ಕರಣೆ ಗೊಳಿಸಿದ ತೆರಿಗೆ ಸರಿಯಿಲ್ಲವೆಂಬ ವಾದಿಸಿದ್ದು, ಪಂಚಾಯತ್ ಸ್ವತಹ ಒಪ್ಪಿಕೊಂಡಿದೆ. ತಾವು ತೆಗೆದುಕೊಂಡ ನಿರ್ಣಯವು ಸರಿ ಇಲ್ಲವೆಂದು, ಪಂಚಾಯತ್ ತನ್ನ ವಕೀಲರ ಮೂಲಕ ಒಪ್ಪಿಕೊಂಡು ತೀವ್ರ ಮುಖಭಂಗ ಅನುಭವಿಸಿದೆ.
ಎಸ್. ರಾಜಶೇಖರ್ ಭಟ್
ಹೈಕೋರ್ಟ್ ನ್ಯಾಯವಾದಿ.(ದೂರುದಾರರ ಪರ ನ್ಯಾಯವಾದಿ)
———–
2016-17 ನೇ ಸಾಲಿನ ಗ್ರಾಮ ಸಭೆಯಲ್ಲಿ 13-4.2016 ರಂತೆ ಮೆನೆತೆರಿಗೆ ಪರಿಷ್ಕರಣೆ ಮಾಡಲು ನಿಯಮಾನುಸಾರ ತೆಗೆದುಕೊಂಡ ತೀರ್ಮಾನದಂತೆ ಪ್ರತಿ ಮನೆಗೆ ಭೇಟಿ ನೀಡಿ ಅಳತೆ ಮಾಡಿ ಚದರ ಅಡಿಗೆ ನಿಗದಿತ ತೆರಿಗೆ ವಿಧಿಸಿದೆ. ಇದನ್ನು ವಿರೋಧಿಸಿ ಗ್ರಾಮಸ್ಥರು 2017 ರ ಗ್ರಾಮ ಸಭೆಯಲ್ಲಿ ಒತ್ತಾಯಪೂರ್ವಕ ನಿರ್ಣಯ ಕೈಗೊಂಡಿದ್ದರೂ, ಅದು ಸಾಮಾನ್ಯ ಸಭೆಯಲ್ಲಿ ಮಂಜೂರಾಗದೆ, ಹಿಂದೆ ವಿಧಿಸಿದ ನಿಯಮಾನುಸಾರದ ತೆರಿಗೆ ಪಡೆಯಲಾಗುತ್ತಿದೆ. ಈ ಬಗ್ಗೆ ಗ್ರಾಮಸ್ತರು ತಾ.ಪಂ ಮತ್ತು ಜಿ.ಪಂ ಪ್ರಾಧಿಕಾರದಲ್ಲಿ ಹೂಡಿದ ದಾವೆ ತಿರಸ್ಕೃತಗೊಂಡಿದೆ. ಅದನ್ನು ಹೈಕೋರ್ಟ್‌ನಲ್ಲಿ ಅವರು ಪ್ರಶ್ನೆಮಾಡಿದ್ದು, ಅಲ್ಲೂ ಕೂಡ ಪ್ರಕರಣ ಮುಕ್ತಾಯಗೊಂಡಿದೆ. ಇದೀಗ ಪಂಚಾಯತ್ ಪಿಡಿಒಗೆ ದೂರುದಾರರ ಪರ ನ್ಯಾಯವಾದಿಗಳು ನೋಟೀಸು ನೀಡಿದ್ದಾರೆ ಎಂದು ತಿಳಿದುಬಂದಿದ್ದು, ಅದು ಕೈ ಸೇರಿದರೆ ಸೂಕ್ತ ಉತ್ತರ ನೀಡಲಾಗುವುದು.
ಶೈಲೇಶ್ ಠೋಸರ್,
ತಾ.ಪಂ ಮತ್ತು ಗ್ರಾ.ಪಂಚಾಯತುಗಳ ಕಾನೂನು ಸಲಹೆಗಾರರು.
(ಪಂಚಾಯತ್‌ಪರ ನ್ಯಾಯವಾದಿ)

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.