ಮಂಗಳೂರು ಬಾಂಬ್ ಷಡ್ಯಂತ್ರವನ್ನು ಬಯಲಿಗೆಳೆಯಲು ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ರಾಜಿನಾಮೆ ನೀಡಲು ಆಗ್ರಹಿಸಿ ಎಸ್ ಡಿ ಪಿ ಐ ಬೆಳ್ತಂಗಡಿ ವತಿಯಿಂದ ಪ್ರತಿಭಟನೆ

ಬೆಳ್ತಂಗಡಿ:ಮಂಗಳೂರಿನ ಬಾಂಬ್ ಪ್ರಕರಣವನ್ನು ಬಯಲಿಗೆಳೆಯದೆ ಪ್ರಕರಣವನ್ನು ಸರಕಾರ, ಪೋಲೀಸರು ಮತ್ತು ಕೆಲ ಮಾಧ್ಯಮಗಳು ಮುಚ್ಚುಹಾಕಲು ಪ್ರಯತ್ನಿಸುತ್ತಿರುವುದರ ವಿರುದ್ಧ ಮತ್ತು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ರಾಜಿನಾಮೆಗೆ ಒತ್ತಾಯಿಸಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ ಡಿ ಪಿ ಐ)ಬೆಳ್ತಂಗಡಿ ವಿಧಾನಸಭಾ ವತಿಯಿಂದ ಇಂದು ತಾಲೂಕಿನ ಮಿನಿವಿಧಾನಸೌಧ ದ ಎದುರುಗಡೆ ಬೃಹತ್ ಪ್ರತಿಭಟನೆ   ಜ.23 ರಂದು  ನಡೆಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಸ್ ಡಿ ಪಿ ಐ ದ.ಕ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಮಾತನಾಡಿ “ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದನ್ನು ಕೇಳಿದಾಗ ತುಂಬಾ ಆಘಾತವಾಯಿತು.ಪ್ರತಿಯೊಂದನ್ನೂ ಎಳೆ ಎಳೆಯಾಗಿ ಸೂಕ್ಷ್ಮದಿಂದ ಪರೀಕ್ಷಿಸುವ ನಗರ ವಿಮಾನ ನಿಲ್ದಾಣದಲ್ಲಿ ಒಂದು ಬ್ಯಾಗ್ ನಲ್ಲಿ ಬಾಂಬ್ ಅನ್ನು ಹೇಗೆ ಆದಿತ್ಯರಾವ್ ಎಂಬುವವನು ಒಳಗೆ ಕೊಂಡು ಹೋದ?ನಿಜಕ್ಕೂ ಇದು ಅಲ್ಲಿನ ಪೋಲೀಸ್ ವ್ಯವಸ್ಥೆ ಮತ್ತು ರಕ್ಷಣಾ ವ್ಯವಸ್ಥೆಯ ಬೇಜವಾಬ್ದಾರಿತನ ಹಾಗೂ ನಿರ್ಲಕ್ಷ್ಯತನ.ಕೋಮುಗೆ ಅನುಗುಣವಾಗಿ ಆರೋಪಿಯ ಲೇಬಲ್ ಬದಲಾಗುತ್ತಿದೆ.ಒಬ್ಬ ಬಿ ಇ ಇಂಜಿನಿಯರ್ ಹಾಗೂ ಪಠ್ಯೇತರ ಚಟುವಟಿಕೆಯಲ್ಲಿ ,ವಿವಿದ ಆಯಾಮಗಳಲ್ಲಿ ಕೆಲಸ ಮಾಡಿದ ಭಯೋತ್ಪಾದಕ ಆದಿತ್ಯ ಕೆಲ ಮಾಧ್ಯಮದವರಿಗೆ ಮಾನಸಿಕ ಅಸ್ವಸ್ಥನಾದ. ಇತ್ತ ಕಡೆಯಲ್ಲಿ ರಾಜ್ಯವನ್ನು ಆಳುವ ಬಸವರಾಜ್ ಬೊಮ್ಮಾಯಿ ,ಪ್ರಹ್ಲಾದ್ ಜೋಷಿ ಮುಂತಾದ ರಾಜಕಾರಣಿಗಳು ತನಿಖೆಗೆ ಮೊದಲೇ ಇದು ಮೊನ್ನೆ ಮಂಗಳೂರಿನಲ್ಲಿ ಮಾಡಿದ ಪ್ರತಿಭಟನಾಕಾರರು ಮಾಡಿರುವ ಕೃತ್ಯವಾಗಿರಬಹುದು ಹಾಗೂ ಇನ್ನಿತರ ಇಲ್ಲಸಲ್ಲದ ಬೇಜವಾಬ್ದಾರಿತನದ ಮಾತುಗಳನ್ನು ಆಡುತ್ತಿದ್ದಾರೆ.ಇದನ್ನೆಲ್ಲಾ ಗಮನಿಸುವಾಗ ಪ್ರಕರಣದ ದಿಕ್ಕನ್ನು ಬದಲಾಯಿಸುವ ಕುತಂತ್ರ ಎಂದು ಅರಿವಾಗುತ್ತಿದೆ.ಪ್ತಕರಣದ ವಿರುದ್ಧ ತೀವ್ರ ಕ್ರಮ ಕೈಗೊಳ್ಳಬೇಕು” ಎಂದು ಎಚ್ಚರಿಸಿದರು.

ಪ್ರತಿಭಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಎಸ್ ಡಿ ಪಿ ಐ ಬೆಳ್ತಂಗಡಿ ವಿಧಾನಸಭಾ ಅಧ್ಯಕ್ಷ ನವಾಝ್ ಶರೀಫ್ ಮಾತನಾಡಿ “ಪ್ರಕರಣವನ್ನು ಕುಲಂಕುಷ ತನಿಖೆ ಮಾಡಿ ಇದರ ಹಿಂದಿರುವ ಜಾಲವನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿ
ಸದಸ್ಯ ಅಕ್ಬರ್ ಬೆಳ್ತಂಗಡಿ , ಗ್ರಾಮ ಪಂಚಾಯತ್ ಸದಸ್ಯ ಶುಕೂರ್ ಕುಪ್ಪೆಟ್ಟಿ, ರಿಯಾಜ್ ಮದ್ದಡ್ಕ ,ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬೆಳ್ತಂಗಡಿ ಜಿಲ್ಲಾ ಅಧ್ಯಕ್ಷ ಮುಸ್ತಫಾ ಜಿ ಕೆ ಮತ್ತಿತರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ನಿಝಾಮ್ ಗೇರುಕಟ್ಟೆ ಸ್ವಾಗತಿಸಿ ನಿರೂಪಿಸಿದರು.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.