ಅಳದಂಗಡಿ ಸತ್ಯದೇವತೆ: ಬೆಳ್ಳಿ ಸೀರೆ ಅನಾವರಣ

ಅಳದಂಗಡಿ: ಅಳದಂಗಡಿ ಶ್ರೀ ಸೋಮನಾಥೇಶ್ವರಿ ದೇವರ ವಾರ್ಷಿಕ ಜಾತ್ರಾ ಮಹೋತ್ಸವದ ಶುಭ ಸಂದರ್ಭದಲ್ಲಿ ಜ.23ರಂದು ಶ್ರೀ ಸತ್ಯದೇವತೆ ಕಲ್ಲುರ್ಟಿ ಸನ್ನಿಧಿಯಲ್ಲಿ ಶ್ರೀ ಸತ್ಯದೇವತೆಗೆ ಭಕ್ತರಿಂದ ಬೆಳ್ಳಿ ಸೀರೆ ಸಮರ್ಪಣೆಯಾಗಲಿದೆ.
ಇದರಂಗವಾಗಿ ಶ್ರೀ ಸತ್ಯದೇವತಾ ದೈವಸ್ಥಾನದಲ್ಲಿ ಜ.19ರಂದು ಬೆಳ್ತಂಗಡಿ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಕೆ ನಾಗೇಶ್ ಮೂರ್ತಿ ಹಾಗೂ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಸತೀಶ್ ಕೆ.ಜಿಯವರು ಬೆಳ್ಳಿ ಸೀರೆಯನ್ನು ಅನಾವರಣಗೊಳಿಸಿದರು. ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲ, ಶ್ರೀ ಸತ್ಯದೇವತಾ ದೈವಸ್ಥಾನದ ಆಡಳಿತದಾರ ಶಿವಪ್ರಸಾದ ಅಜಿಲ, ಉದ್ಯಮಿ ಅಶ್ವಥ್ ಹೆಗ್ಡೆ, ವಕೀಲರಾದ ಸ್ವರ್ಣಲತಾ. ಕೃಷ್ಣ ಶೆಣೈ, ಅಳದಂಗಡಿ ಗ್ರಾ.ಪಂ ಮಾಜಿ ಅಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು ಹಾಗೂ ಕ್ಷೇತ್ರದ ಭಕ್ತರು ಉಪಸ್ಥಿತರಿದ್ದರು. ಜ.೨೩ರಂದು ಈ ಸೀರೆಯನ್ನು ಅಳದಂಗಡಿ ಅರಮನೆಯಿಂದ ಮೆರವಣಿಗೆಯಲ್ಲಿ ತಂದು ದೇವಿಗೆ ಅರ್ಪಿಸುವ ಕಾರ್ಯಕ್ರಮ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.