ನಾಳ ಶ್ರೀ ಕ್ಷೇತ್ರಕ್ಕೆ ಕರಿಂಜೆ ಶ್ರೀ ಶ್ರೀ ಮುಕ್ತಾನಂದ ಸ್ವಾಮೀಜಿ ಭೇಟಿ

ನಾಳ : ಇಲ್ಲಿಯ ನ್ಯಾಯತರ್ಪು ಗ್ರಾಮದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಮೂಡಬಿದ್ರೆ ಕರಿಂಜೆ ಕ್ಷೇತ್ರದ ಮಠಾಧಿಪತಿಗಳಾದ ಶ್ರೀ ಶ್ರೀ ಮುಕ್ತನಂದ ಸ್ವಾಮೀಜಿಯವರು ಜ. 19 ರಂದು ಸಂಜೆ ಭೇಟಿ ನೀಡಿದರು.
ಕರಿಂಜೆ ಶ್ರೀ ಕ್ಷೇತ್ರದಲ್ಲಿ ಫೆಬ್ರವರಿ 9 ರಿಂದ 18. ರವರೆಗೆ ನಡೆಯಲಿರುವ ಅಷ್ಟಬಂಧ ಬ್ರಹ್ಮ ಕಲಶೋತ್ಸವ ಹಾಗೂ ನಾಗಮಂಡಲೋತ್ಸವ ಆಮಂತ್ರಣ ಪತ್ರಿಕೆಯನ್ನು ನೀಡಿ ನಮ್ಮ ಗ್ರಾಮಸ್ಥರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದರು. ಹಾಗೂ ಭಕ್ತಾದಿಗಳಿಗೆ ಆಶೀರ್ವದಿಸಿ, ವಿಶೇಷ ಕಾರ್ಯಕ್ರಮವನ್ನು ಭಾಗವಹಿಸುವ ಮೂಲಕ ಯಶಸ್ವಿಗೆ ಸಹಕರಿಸುವಂತೆ ಹೇಳಿದರು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವಸಂತ ಮಜಲು,ಪ್ರದಾನ ಅರ್ಚಕರಾದ ವೇ.ಮೂ.ರಾಘವೇಂದ್ರ ಅಸ್ರಣ್ಣರವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಕಾರ್ಯ ದಲ್ಲಿ ಭಾಗವಹಿಸಿ ಸಹಕರಿಸುವುದಾಗಿ ಹೇಳಿದರು.

ಅಭಿವೃದ್ಧಿ ಸಮಿತಿ ಅಧ್ಯಕ್ಷ ಯಾದವ ಗೌಡ ಮುದ್ದುಂಜ,ವ್ಯವಸ್ಥಾಪನ ಸಮಿತಿ ಸದಸ್ಯೆ ಅಂಬಾ ಬಿ ಅಳ್ವ, ಭಜನಾ ಮಂಡಳಿ ಅಧ್ಯಕ್ಷ ಉಮೇಶ ಶೆಟ್ಟಿ, ಪೂವಪ್ಪ ಶೆಟ್ಟಿ ಬಿಳಿಬೈಲು,ಅಶೋಕ ಆಚಾರ್ಯ ಗಂಪದಕೋಡಿ,ಉಮನಾಥ ಶೆಟ್ಟಿ, ದೇವಸ್ಥಾನದ ವ್ಯವಸ್ಥಾಪಕ ಗಿರೀಶ್ ಶೆಟ್ಟಿ, ಶ್ರೀ ದುರ್ಗ ಮಾತೃ ಮಂಡಳಿ ಅಧ್ಯಕ್ಷೆ ರೀತಾ,ಸೇವಾ ಪ್ರತಿನಿಧಿ ವಿನೋದ ಮತ್ತು
ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.ಅಭಿವೃದ್ಧಿ ಸಮಿತಿ ಪ್ರದಾನ ಕಾರ್ಯದರ್ಶಿ ರಾಜೇಶ್ ಪೆಂರ್ಬುಡ ಸ್ವಾಗತಿಸಿ,ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.