ಕುಂಬಾರರ ಅವಹೇಳನ : ಕ್ರಮಕ್ಕೆ ಒತ್ತಾಯ

ಬೆಳ್ತಂಗಡಿ : ಮಂಗಳೂರಿನಲ್ಲಿ ಜ-15 ರಂದುನಡೆದ ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆಯಲ್ಲಿ ಕುಂಬಾರ ಸಮುದಾಯದ ಅವಹೇಳನದ ಫಲಕ ಪ್ರದರ್ಶನ ಮಾಡಿದವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರ ಸಂಘದ ಪದಾಧಿಕಾರಿಗಳು ಗುರುವಾರ ಬೆಳ್ತಂಗಡಿ ಠಾಣೆಗೆ ಮನವಿ ನೀಡಿದರು.
ಪ್ರತಿಭಟನಾ ಸಭೆಯಲ್ಲಿ ವೃತ್ತಿ ಆಧಾರಿತ, ಕುಂಬಾರ ಸಮುದಾಯಕ್ಕೆ ಅವಮಾನವಾಗುವಂತೆ ಗಾದೆ ಮಾತನ್ನು ತಿರುಚಿ ಕುಂಬಾರನಿಗೆ ವರ್ಷ- ಹರ್ಷನಿಗೆ ನಿಮಿಷ ಎಂಬ ಬರವಣಿಗೆಯುಳ್ಳ ಪೋಸ್ಟರ್‌ನ್ನು ಪ್ರದರ್ಶಿಸಿ, ಸಮುದಾಯವನ್ನು ಅಪಮಾನಿಸಲಾಗಿದೆ. ಪ್ರತಿಭಟನೆ ಮಾಡಿದ ಸಂಘಟಕರ ಹಾಗೂ ಭಿತ್ತಿಪತ್ರ(ಪೋಸ್ಟರ್) ಪ್ರದರ್ಶಿಸಿದವರನ್ನು ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅವರಿಗೆ ಬೆಳ್ತಂಗಡಿ ಪೋಲಿಸ್ ಠಾಣಾಧಿಕಾರಿ ಮೂಲಕ ಮನವಿ ನೀಡಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಹರೀಶ್ ಕಾರಿಂಜ, ಕಾರ್ಯದರ್ಶೀ ಸಂತೋಷ್ ಭಾರ್ಗವಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.