ಜ.17 ರಿಂದ ಫೆ.3ರವರೆಗೆ ಶ್ರೀ ರಾಮಕ್ಷೇತ್ರ  ಪೀಠಾದೀಶ ಬ್ರಹ್ಮಾನಂದ  ಶ್ರೀ  ಉತ್ತರ ಭಾರತ ತೀರ್ಥಯಾತ್ರೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ದಕ್ಷಿಣದ ಅಯೋಧ್ಯೆ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶರಾದ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಜನವರಿ ತಿಂಗಳ  ಜ.17ರಿಂದ ಫೆಬ್ರವರಿ ತಿಂಗಳ  3 ರ ವರೆಗಿನ ಉತ್ತರ ಕರ್ನಾಟಕ, ಮಹಾರಾಷ್ಟ್ರ, ಗುಜರಾತ್ ಹಾಗೂ ರಾಜಸ್ಥಾನಗಳ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಆಶೀರ್ವಚನ ನೀಡಲಿದ್ದಾರೆ .
ಜ.17 ಸಿದ್ಧಾರೂಢ ಮಠಕ್ಕೆ ಬೇಟಿ ಹಾಗೂ ವಾಸ್ತವ್ಯ.
ಜ. 19 ಪುಣೆ ಬಿಲ್ಲವ ಸಂಘದ ವತಿಯಿಂದ ಜಿಲ್ಲಾ ಮಟ್ಟದ ಆಟೋಟ ಸ್ಪರ್ದೆ ಉದ್ಘಾಟನೆ ಹಾಗೂ ಸ್ವಾಮೀಜಿಯವರಿಂದ ಆಶೀರ್ವಚನ.
ಜ. 20 ನಾಸಿಕ್ ಭಕ್ತವೃಂದದವರಿಂದ ಗುರು ಪೂಜೆ ಹಾಗೂ ಸ್ವಾಮೀಜಿಯವರ ಆಶೀರ್ವಚನ.
ಜ. 21. ರಾಜಸ್ಥಾನದ ರಾಜಸ್‌ಮಂಡ್ ಭಕ್ತವೃಂದಕ್ಕೆ ಆಶೀರ್ವಚನ.
ಜ. 22.ಗುಜರಾತ್ ಸಮಾಜ ತುಳು, ಕನ್ನಡ ಸಂಘದವರಿಂದ 5 ಕುಂಡದ ಗಾಯತ್ರಿ ಯಜ್ಞ ಹಾಗೂ ಸ್ವಾಮೀಜಿಯವರಿಂದ ಆಶೀರ್ವಚನ.
ಜ. 23 ಮುಂಬೈ ವಜ್ರೇಶ್ವರಿ ಗಣೇಶಪುರಿ ದರ್ಶನ ಹಾಗೂ ವಾಸ್ತವ್ಯ
ಜ.24.ಮುಂಬೈ ಬಿಲ್ಲವ ಸಂಘದ ವತಿಯಿಂದ ಸ್ವಾಮೀಜಿಯವರಿಗೆ ಗುರುವಂದನೆ ಹಾಗೂ ಸ್ವಾಮೀಜಿಯವರಿಂದ ಆಶೀರ್ವಚನ.
ಜ. 25 ಬೆಳಗಾಂ ಭಕ್ತವೃಂದದವರಿಂದ ಸ್ವಾಮೀಜಿಯವರಿಗೆ ಗುರುವಂದನೆ ಹಾಗೂ ಸ್ವಾಮೀಜಿಯವರಿಂದ ಆಶೀರ್ವಚನ.
ಜ. 26 ಹುಬ್ಬಳ್ಳಿ ಭಾಗದ ಭಕ್ತವೃಂದದವರಿಂದ ಸ್ವಾಮೀಜಿಯವರಿಗೆ ಗುರುವಂದನೆ ಹಾಗೂ ಸ್ವಾಮೀಜಿಯವರಿಂದ ಆಶೀರ್ವಚನ.
ಜ. 27. ಯಲ್ಲಾಪುರ, ಮುಂಡಗೋಡು ಭಾಗದ ಭಕ್ತವೃಂದದವರಿಂದ ಸ್ವಾಮೀಜಿಯವರಿಗೆ ಗುರುವಂದನೆ ಹಾಗೂ ಸ್ವಾಮೀಜಿಯವರಿಂದ ಆಶೀರ್ವಚನ.
ಜ. 29. ಹೊನ್ನಾವರ ಉಪ್ಪೋಣಿ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಶತಚಂಡಿ ಯಾಗದಲ್ಲಿ ಭಾಗವಹಿಸಿ ಸ್ವಾಮೀಜಿಯವರಿಂದ ಆಶೀರ್ವಚನ.
ಜ. 30 ಭಟ್ಕಳ ತಾಲೂಕಿನ ಮುರ್ಡೇಶ್ವರ ಮಠದ ಹಿತ್ತಲು ಎಂಬಲ್ಲಿ ಜಟ್ಟಗ ಸ್ಥಾಪನೆ ಹಾಗೂ ಬ್ರಹ್ಮಕಲಶೋತ್ಸವ ಹಾಗೂ ಸ್ವಾಮೀಜಿಯವರಿಂದ ಆಶೀರ್ವಚನ.
ಜ. 31.ಭಟ್ಕಳ್‌ನ ಆಸರಕೇರಿ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನದಲ್ಲಿ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ.
ಫೆ. 01 ಭಟ್ಕಳ್‌ನ ಆಸರಕೇರಿ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನದಲ್ಲಿ ವಾರ್ಷಿಕ ರಥಸಪ್ತಮಿ ಕಾರ್ಯಕ್ರಮದಲ್ಲಿ ಸ್ವಾಮೀಜಿಯವರಿಂದ ಆಶೀರ್ವಚನ.
ಫೆ 02.ಇಡ್ಯ, ಸುರತ್ಕಲ್ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಹಾಗೂ ಸ್ವಾಮೀಜಿಯವರಿಂದ ಆಶೀರ್ವಚನ.
ಫೆ. 03 ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಹಾಗೂ ಸ್ವಾಮೀಜಿಯವರಿಂದ ಆಶೀರ್ವಚನ.
ಈ ಮೇಲಿನ ದಿವಸಗಳಲ್ಲಿ ಸ್ವಾಮೀಜಿಯವರು ಕ್ಷೇತ್ರದಲ್ಲಿ ಉಪಸ್ಥಿತರಿರುವುದಿಲ್ಲ ಎಂಬುದಾಗಿ ಕ್ಷೇತ್ರದ ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.