ಮೇಲಂತಬೆಟ್ಟು: ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Advt_NewsUnder_1
Advt_NewsUnder_1
Advt_NewsUnder_1

ಮೇಲಂತಬೆಟ್ಟು: ಫೆ.24 ರಿಂದ 26ರವರೆಗೆ ಶ್ರೀ ಕೊಡಮಣಿತ್ತಾಯ ದೈವಸ್ಥಾನ ಶ್ರೀ ವನದುರ್ಗಾ ದೇವಸ್ಥಾನ ನಲ್ಕೆತ್ಯಾರು ಶ್ರೀಬ್ರಹ್ಮ ಬೈದರ್ಕಳ ಊರ ಗರೋಡಿ ನವೀಕೃತ ದೇಗುಲಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆಯನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರದಲ್ಲಿ ಜ.13 ರಂದು ಬಿಡುಗಡೆಗೊಳಿಸಿ ಕಾರ್ಯಕ್ರಮದಲ್ಲಿ ನಾನು ಭಾಗವಹಿಸುತ್ತೇನೆ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೆ.ಎಸ್ ಯೋಗೀಶ್ ಕುಮಾರ್ ನಡಕ್ಕರ, ಪ್ರಧಾನ ಕಾರ್ಯದರ್ಶಿ ಭಗೀರಥ ಜಿ. ಗುಂಪೋಳಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ.ಶೈಲೇಶ್ ಕುಮಾರ್ ಕುರ್ತೋಡಿ, ಕಾರ್ಯದರ್ಶಿ ಮೋಹನ್ ಕುಮಾರ್ ಬಟ್ಯರಡ್ಡ, ಬ್ರಹ್ಮಕಲಶೋತ್ಸವ ವ್ಯವಸ್ಥಾಪನ ಸಮಿತಿಯ ಸುರೇಶ್ ಶೆಟ್ಟಿ ಮಾಪಲಾಡಿ, ಕಿಶೋರ್ ಕುಮಾರ್ ಕುರ್ತೋಡಿ, ಚಂದ್ರರಾಜ್ ನೂಜೇಲು, ನೇಮೋತ್ಸವ ಸಮಿತಿ ಸಹ ಸಂಚಾಲಕ ಉಮೇಶ್ ಮಡಿವಾಳ, ಶ್ರೀ.ಕ್ಷೇ.ಧ. ಗ್ರಾ. ಯೋಜನೆ ಮೇಲ್ವಿಚಾರಕ ರಾಜೇಶ್ ಹಾಗೂ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.