ಜ.24 ರಿಂದ 31ರ ತನಕ ನಾಳ ದುರ್ಗಾಪರಮೇಶ್ವರಿ ವರ್ಷಾವಧಿ ಜಾತ್ರೆ

ನಾಳ: ಇಲ್ಲಿಯ ನ್ಯಾಯತರ್ಪು ಗ್ರಾಮದ ನಾಳ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೆ ಜ.24ರಿಂದ 31ರ ತನಕ ನಡೆಯುತ್ತದೆ.
ಜ.24 ರಂದು ಗ್ರಾಮಸ್ಥರ ರಿಂದ ಹೊರೆ ಕಾಣಿಕೆ ಸಮರ್ಪಣೆ, ಧ್ವಜಾರೋಹಣ, ಮಹಾ ಪೂಜೆ, ನಿತ್ಯ ಬಲಿ, ಅನ್ನಸಂತರ್ಪಣೆ. ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ. ಜ.25 ರಂದು ಉಷಕಾಲ ಪೂಜೆ, ಮಹಾ ಪೂಜೆ, ರಾತ್ರಿ ಕೆರೆಕಟ್ಟೆ ಪೂಜೆ,ನಿತ್ಯ ಬಲಿ ಹಾಗೂ “ಅಜ್ಜಿಗ್ ಏರ್ಲಾ ಇಜ್ಜಿ” ತುಳು ನಾಟಕ, ಜ 26 ರಂದು ಉಷಾಕಾಲ ಪೂಜೆ ಮಹಾ ಪೂಜೆ, ನಿತ್ಯ ಬಲಿ, ರಾತ್ರಿ ಚಂದ್ರ ಮಂಡಲ ಉತ್ಸವ ರಥಬೀದಿ ಕಟ್ಟೆ ಪೂಜೆ ಮತ್ತು ವೈವಿಧ್ಯಮಯ ಪ್ರದರ್ಶನ, ಜ.27 ರಂದು ದರ್ಶನ ಬಲಿ, ಶ್ರೀ ಪಿಲಿ ಚಾಮುಂಡಿ ಮತ್ತು ಕೊಡಮಣಿತ್ತಾಯಿ ದೈವಗಳ ಭಂಡಾರ ಇಳಿಯುವುದು, ಕೊಡಮಾಣಿತ್ತಾಯಿ ದೈವದ ಗಗ್ಗರ ಸೇವೆ, ಧಾರ್ಮಿಕ ಸಭಾ ಕಾರ್ಯಕ್ರಮ, ತೇರ ಬಾಕಿಮಾರು ಗದ್ದೆಯಲ್ಲಿ ಆಕರ್ಷಣೆಯ ಸುಡು ಮದ್ದು ಪ್ರದರ್ಶನ ಮತ್ತು ಮಹಾರಥೋತ್ಸವ, ಜ.28 ರಂದು ಸುಲಗ್ನದಲ್ಲಿ ಕವಾಟೋದ್ಘಾಟನೆ, ಮಹಾ ಪೂಜೆ, ತುಲಾ ಭಾರ ವಿಶೇಷ ಸೇವೆಗಳು, ಜ.29 ರಂದು ಪೂರ್ವಾಹ್ನ ಸಂಪ್ರೋಕ್ಷಣೆ, ಕಲಶಾಭಿಷೇಕ ಭಜನಾ ವರ್ಧಂತಿ ಮತ್ತು ಮಹಾ ರಂಗ ಪೂಜೆ ಜ.30 ರಂದು ರಾತ್ರಿ ಸ್ಥಳೀಯ ಕಲಾವಿದರಿಂದ “ಗುತ್ತುದ ಇಲ್ಲ್”ತುಳು ಸಾಮಾಜಿಕ ನಾಟಕ, ಜ.31ರಿಂದ ಹಳೆಯಂಗಡಿ ಮೇಳದವರಿಂದ ಯಕ್ಷಗಾನ ಬಯಲಾಟ “ನೂತನ ಪ್ರಸಂಗ” ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.