ಪೆರೋಡಿತ್ತಾಯಕಟ್ಟೆ : ಶಾಲಾ ವಾರ್ಷಿಕೋತ್ಸವ

Advt_NewsUnder_1
Advt_NewsUnder_1
Advt_NewsUnder_1

ತೆಂಕಕಾರಂದೂರು : ದ.ಕ.ಜಿ.ಪಂ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಪೆರೋಡಿತ್ತಾಯಕಟ್ಟೆ ಶಾಲಾ ವಾರ್ಷಿಕೋತ್ಸವವು ಜ-11 ರಂದು ವಿಜೃಂಭಣೆಯಿಂದ ನಡೆಯಿತು.
ವಾರ್ಷಿಕೋತ್ಸವದ ಉದ್ಘಾಟನೆಯನ್ನು ಶಾಸಕ ಹರೀಶ್ ಪೂಂಜ ನೇರವೇರಿಸಿ ಶುಭಹಾರೈಸಿದರು. ಧ್ವಜಾರೋಹಣವನ್ನು ಬೆಳ್ತಂಗಡಿ ತಾಲೂಕು ಜನಜಾಗೃತಿ ವೇದಿಕೆ ಸ್ಥಾಪಕಾಧ್ಯಕ್ಷ ಕೆ. ವಸಂತ ಸಾಲ್ಯಾನ್ ನೇರೆವೇರಿಸಿದರು.
ಈ ಸಂದರ್ಭದಲ್ಲಿ ಬಳಂಜ ಗ್ರಾ. ಪಂ ಅಧ್ಯಕ್ಷೆ ದೇವಕಿ ಕೊರಗಪ್ಪ ನಾಯ್ಕ,
ಅಳದಂಗಡಿ ಜಿ.ಪಂ ಸದಸ್ಯ ಶೇಖರ ಕುಕ್ಕೇಡಿ, ಬಳಂಜ ಗ್ರಾ.ಪಂ ಸದಸ್ಯರಾದ ಗುರುರಾಜ ಹೆಗ್ಡೆ, ಶಬ್ರೀನಾ ಶರೀಫ್, ಹೇಮಂತ್ ಗುಂಡೇರಿ, ಜಯಶ್ರೀ, ಸಿ.ಆರ್.ಪಿ ಸೇವಂತಿ ಬಿ, ತೆಂಕಕಾರಂದೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ. ಕೃಷ್ಣ ಸಂಪಿಗೆತ್ತಾಯ, ಪೆರೋಡಿತ್ತಾಯಕಟ್ಟೆ ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಜ| ಅಬ್ಬಾಸ್ ಬ್ಯಾರಿ, ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಹೆಗ್ಡೆ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ಶೆಟ್ಟಿ ಆಲಿಮಾರ್, ಮುಖ್ಯೋಪಾಧ್ಯಾಯಿನಿ ಪದ್ಮಾವತಿ ಎನ್, ಎಸ್.ಡಿ.ಎಂ.ಸಿ ಅಧ್ಯಕ್ಷ ನೇಮು ಸಫಲ್ಯ, ಶಾಲಾ ನಾಯಕ ಬಿ. ಮಹಮ್ಮದ್ ಇಮ್ರಾನ್, ಶಾಲಾ ನಾಯಕಿ ತಾಸೀರಾ, ವಾರ್ಷಿಕೋತ್ಸವ ಸಮಿತಿ ಕಾರ್ಯದರ್ಶಿ ದೇವುದಾಸ್ ನಾಯಕ್ ಉಪಸ್ಥಿತರಿದ್ದರು. ಬಳಿಕ ಶಾಲಾ ಮಕ್ಕಳಿಂದ, ಊರವರಿಂದ ವಿವಿಧ ಮನೋರಂಜನಾಕಾರ್ಯಕ್ರಮ ಜರುಗಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.