ಬೆಳ್ತಂಗಡಿ ನಗರದಲ್ಲಿ ರಾಷ್ಟ್ರ ಸೇವಿಕಾ ಸಮಿತಿಯಿಂದ ಗಣವೇಶಧಾರಿ ಮಹಿಳೆಯರಿಂದ ಪಥ ಸಂಚಲನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1


ಬೆಳ್ತಂಗಡಿ: ರಾಷ್ಟ್ರ ಸೇವಿಕಾ ಸಮಿತಿ ಬೆಳ್ತಂಗಡಿ ತಾಲೂಕು ವತಿಯಿಂದ ಮಕರ ಸಂಕ್ರಮಣ ಪ್ರಯುಕ್ತ ಗಣವೇಷಧಾರಿ ಸೇವಿಕೆಯರಿಂದ ಆಕರ್ಷಕ ಪಥ ಸಂಚಲನ
ಜ. 12 ರಂದು ಬೆಳ್ತಂಗಡಿ ನಗರದಲ್ಲಿ ನಡೆಯಿತು.


ಬಳಿಕ ಮಾರಿಗುಡಿ ಮೈದಾನದಲ್ಲಿ ನಡೆದ ಸಮಾವೇಶದ ಅಧ್ಯಕ್ಷತೆಯನ್ನು ನ್ಯಾಯವಾದಿ ಸ್ವರ್ಣಲತಾ ವಹಿಸಿದ್ದರು.
ರಾಷ್ಟ್ರ ಸೇವಿಕಾ ಸಮಿತಿ ಕರ್ನಾಟಕ ದಕ್ಷಿಣ ಪ್ರಾಂತ ಇದರ ಪ್ರಾಂತ ಪ್ರಚಾರ ಪ್ರಮುಖ್ ಮಯೂರಲಕ್ಷ್ಮೀ ಬೌದ್ಧಿಕ್ ನಡೆಸಿಕೊಟ್ಟರು.
ರಾಷ್ಟ್ರ ಸೇವಿಕಾ ಸಮಿತಿಯ ತಾಲೂಕು ಕಾರ್ಯವಾಹಿಕಾ ವೇದಾವತಿ ಉಪಸ್ಥಿತರಿದ್ದರು.


ಪಥ ಸಂಚಲನದಲ್ಲಿ ಸಮವಸ್ತ್ರಧಾರಿಗಳಾಗಿರುವ ಸಾವಿರಕ್ಕೂ ಅಧಿಕ ಮಹಿಳೆಯರು, ವಿದ್ಯಾರ್ಥಿನಿಯರು, ಮಕ್ಕಳು ಶಿಸ್ತುಬದ್ಧ ಹೆಜ್ಜೆ ಹಾಕಿದರು.
ಶಾಸಕ ಹರೀಶ್ ಪೂಂಜ, ಬಿಜೆಪಿ ವಿಭಾಗೀಯ ಸಹಪ್ರಭಾರಿ ಪ್ರತಾಪಸಿಂಹ ನಾಯಕ್, ಜಿ.ಪಂ ಸದಸ್ಯ ಕೊರಗಪ್ಪ ನಾಯ್ಕ, ಮಂಜುನಾಥ ಶೆಟ್ಟಿ ಕಲ್ಮಂಜ, ರಾಜೇಶ್ ಶೆಟ್ಟಿ ಗುರುವಾಯನಕೆರೆ, ರಾಜೇಶ್ ಶೆಟ್ಟಿ ಲಾಯಿಲ, ದಿನೇಶ್ ಗೌಡ, ಹರೀಶ್ ಮೋರ್ತಾಜೆ ಮೊದಲಾದ ಪ್ರಮುಖರು ಭಾಗಿಯಾಗಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.