HomePage_Banner_
HomePage_Banner_
HomePage_Banner_

ಬೆಳಾಲು; ಅವಿವಾಹಿತ ಯುವತಿ ಝುಹುರಾ ಮೃತದೇಹ ಕೆರೆಯಲ್ಲಿ ಪತ್ತೆ

Advt_NewsUnder_1

ಬೆಳಾಲು ಗ್ರಾಮದ ನಲ್ಕೆತ್ಯಾರು ಎಂಬಲ್ಲಿನ ಉಮರಬ್ಬ ಮತ್ತು ಆಮಿನಾ ದಂಪತಿಗಳ ಪುತ್ರಿ ಫಾತಿಮತ್‌ ಝುಹುರಾ ಯಾನೆ ಶಾಕಿರಾ (18ವ) ಅವರ ಮೃತದೇಹ ಸಂದೇಹಾಸ್ಪದ ರೀತಿಯಲ್ಲಿ ಮನೆಯ ಪಕ್ಕದ ಕೆರೆಯಲ್ಲಿ ಶನಿವಾರ ಸಂಜೆ ಪತ್ತೆಯಾಗಿದೆ.

ಮಧ್ಯಾಹ್ನ  ಎರಡು ಮುಕ್ಕಾಲು ಗಂಟೆಯ ವೇಳೆಗೆ ಎಂದಿನಂತೆ ಮನೆಯ ಪಕ್ಕದ ಪ್ರದೇಶಕ್ಕೆ ಆಡು ಕರೆತರಲೆಂದು ಹೋಗಿದ್ದ ಅವಿವಾಹಿತ ಯುವತಿ ಸುಮಾರು ಹೊತ್ತು ಮನೆಗೆ ವಾಪಾಸಾಗದ ಹಿನ್ನೆಲೆಯಲ್ಲಿ ಹುಡುಕಾಡಿದಾಗ ಕೊನೆಗೆ ಕೆರೆಯಲ್ಲಿ ಮೃತದೇಹ ಪತ್ತೆಯಾಗಿದೆ.

ಆದರೆ ಮೃತದೇಹದ ಮೈಮೇಲೆ ಗಾಯಗಳಾಗಿದ್ದು ಸಂಶಯಕ್ಕೆ ಎಡೆ ಮಾಡಿದೆ.
ಮೃತದೇಹದ ಕಣ್ಣು, ಕಿವಿ ಯಿಂದ‌ ರಕ್ತ ಸೋರುತ್ತಿದೆ. ಕಿವಿ  ಜಜ್ಜಿದ ರೀತಿಯಲ್ಲಿ ಗಂಭೀರ ಗಾಯವಾಗಿದೆ. ತಲೆಯ ಹಿಂಭಾಗಕ್ಕೂ ಏಟು ಬಿದ್ದಿದೆ ಎಂದು ಹೇಳಲಾಗುತ್ತಿದ್ದು, ಧರ್ಮಸ್ಥಳ ಠಾಣೆಗೆ ದೂರು ನೀಡಲಾಗಿದೆ.

ಜನರ ಹುಡುಕಾಟದ ವೇಳೆ ಕೆರೆಯಲ್ಲಿ ಇದ್ದ ಮೃತದೇಹವನ್ನು ತಕ್ಷಣ ತೆಗೆದು ಉಜಿರೆ ಬೆನಕ ಆಸ್ಪತ್ರೆಗೆ ತರಲಾಯಿತಾದರೂ ಅದಾಗಲೇ ಪ್ರಾಣಪಕ್ಷಿ ಹಾರಿಹೋಗಿತ್ತು.
ಇದೀಗ ಮೃತದೇಹ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿದೆ.

ಘಟನ ಬಗ್ಗೆ ಸಂದೇಹವಿರುವುದಾಗಿ ಮನೆಯವರು ದೂರು ನೀಡಿದ್ದರಿಂದ ಮಹಜರು ಪ್ರಕ್ರಿಯೆ ರವಿವಾರಕ್ಕೆ ಮುಂದೂಡಿದೆ. ಮಂಗಳೂರು ದೇರಳಕಟ್ಟೆ ಆಸ್ಪತ್ರೆಯ ಫೊರೆನ್ಸಿಕ್ ಲೇಬೊರೇಟರಿಯಲ್ಲಿ ನಡೆಸುವ ಸಾಧ್ಯತೆ ಇದೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.