ಜ.18-19 ಬಳಂಜದಲ್ಲಿ ಅದ್ದೂರಿಯಾಗಿ ಜಲ್ಲಾ ಮಟ್ಟದ ಯುವಜನ ಮೇಳ

ಬೆಳ್ತಂಗಡಿ: ಜಿಲ್ಲಾಡಳಿತ ಮಂಗಳೂರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದ.ಕ ಜಿಲ್ಲಾ ಪಂಚಾಯತ್, ತಾ.ಪಂ ಬೆಳ್ತಂಗಡಿ, ಗ್ರಾ.ಪಂ ಬಳಂಜ, ದ.ಕ ಜಿಲ್ಲಾ ಯುವ ಜನ ಒಕ್ಕೂಟ, ತಾ ಯುವಜನ ಒಕ್ಕೂಟ ಬೆಳ್ತಂಗಡಿ, ಶ್ರೀ.ಕ್ಷೆ.ಧ.ಗ್ರಾ ಯೋಜನೆ ಧರ್ಮಸ್ಥಳ, ಶ್ರೀ ಉಮಾಮಹೇಶ್ವರ ಯುವಕ ಮಂಡಲ ಬಳಂಜ ಇವುಗಳ ಆಶ್ರಯದಲ್ಲಿ ಜಿಲ್ಲಾ ಯುವಜನ ಮೇಳ ಆಚರಣಾ ಸಮಿತಿ ಬಳಂಜ ಇವರ ನೇತೃತ್ವದಲ್ಲಿ ಜ.18 ಮತ್ತು 19ರಂದು ಬಳಂಜ ಶಾಲೆಯಲ್ಲಿ ಜಿಲ್ಲಾ ಮಟ್ಟದ ಯುವಜನ ಮೇಳ ಬಳಂಜ 2020 ನಡೆಯಲಿದೆ ಎಂದು ಯುವಜನಮೇಳ ಸಮಿತಿಯ ಗೌರವಾಧ್ಯಕ್ಷ ಹರೀಶ್ ಪೂಂಜಾ ಹೇಳಿದರು.


ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸಾಂಸ್ಕ್ರತಿಕ, ಧಾರ್ಮಿಕ, ರಾಜಕೀಯ,ಕ್ರೀಡೆ, ಶೈಕ್ಷಣಿಕ, ಸಾಮಾಜಿಕ ಹೀಗೆ ಎಲ್ಲ ಕ್ಷೇತ್ರದಲ್ಲೂ ಹೆಸರುವಾಸಿಯಾದ ಬಳಂಜದ ಪುಣ್ಯಭೂಮಿಯಲ್ಲಿ ಜಿಲ್ಲಾ ಯುವಜನ ಆಚರಣಾ ಸಮಿತಿಯ ನೇತೃತ್ವದಲ್ಲಿ ನಡೆಯಲಿರುವ ಈ ವ?ದ ಯುವಜನ ಮೇಳವನ್ನು ಕರ್ನಾಟಕ ಸರ್ಕಾರದ ಉಪಮುಖ್ಯಮಂತ್ರಿ ಡಾ. ಅಶ್ವತ್ ನಾರಯಣ್ ಉದ್ಘಾಟಿಸಲಿದ್ದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಮುಜರಾಯಿ, ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮೆರವಣಿಗೆ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೊಡು, ವಿಧಾನಪರಿಷತ್ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ, ಸಂಸದ ನಳೀನ್ ಕುಮಾರ್ ಕಟೀಲ್, ಜಿಲ್ಲೆ ವಿಧಾನ ಸಭಾ ಶಾಸಕರುಗಳು, ವಿಧಾನಪರುಷತ್ತು ಶಾಸಕರುಗಳು, ಜಿ.ಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ದ.ಕ.ಜಿ.ಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಗಟ್ಟಿ, ತಾ.ಪಂ ಅಧ್ಯಕ್ಷೆ ದಿವ್ಯಜ್ಯೋತಿ, ಜಿ.ಪಂ ಸದಸ್ಯ ಶೇಖರ್ ಕುಕ್ಕೇಡಿ, ತಾ.ಪಂ ಸದಸ್ಯೆ ವಿನೂಷಾ ಪ್ರಕಾಶ್, ಬಳಂಜ ಗ್ರಾ,ಪಂ ಅಧ್ಯಕ್ಷೆ ದೇವಕಿ ಕೊರಗಪ್ಪ ನಾಯ್ಕ, ಸದಸ್ಯರುಗಳಾದ ಯಶೋಧರ ಶೆಟ್ಟಿ, ಯಶೋಧರ ದೇವಾಡಿಗ, ರೇವತಿ, ಚಂದ್ರಶೇಖರ ಪಿ.ಕೆ, ಮೊದಲಾದವರು ಉಪಸ್ಥಿತರಿರಲಿದ್ದಾರೆ ಎಂದರು.
ಜ.೧೯ರಂದು ಸಂಜೆ ಸಮಾರೋಪ ಸಮಾರಂಭ ನಡೆಯಲಿದ್ದು ಅಳದಂಗಡಿ ಅರಮನೆ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್ ಅಜಿಲ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ.ಮೋಹನ್ ಆಳ್ವಾ, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ| ಬಿ ಯಶೋವರ್ಮ, ಸಂಪಾದಕ ಜೋಗಿ, ಚಿತ್ರನಟ ಅರವಿಂದ್ ರಾವ್, ಕಿರುತೆರೆ ಹಾಗೂ ಚಿತ್ರನಟ ರೋಹಿತ್ ನಾಗೇಶ್, ಬೆಳ್ತಂಗಡಿ ಪತ್ರಕರ್ತರ ಸಂಘದ ಅಧ್ಯಕ್ಷ ಆರ್.ಎನ್ ಪೂವಣಿ, ಬಳಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ ಶೀತಲ್ ಪಡಿವಾಳ್ ಮೊದಲಾದವರು ಉಪಸ್ಥಿತರಿರಲಿದ್ದಾರೆ ಎಂದರು.
ಯುವಜನಮೇಳದಲ್ಲಿ ಕಾಪಿನಡ್ಕದಿಂದ ಬಳಂಜ ಶಾಲೆಯವರೆಗೆ ಸಂಸ್ಕೃತಿ ಬಿಂಬಿಸುವ ಅದ್ಧೂರಿ ಮೆರವಣಿಗೆಯಲ್ಲಿ ವಿವಿಧ ಕ್ಷೇತ್ರದ ಗಣ್ಯರು, ಸಾಧಕರ ಆಗಮನ, ಜನಪದ ಸಂಸ್ಕ್ರತಿಯ ಅನಾವರಣ, ಭಾವಗೀತೆ, ಜನಪದ ನೃತ್ಯ, ಕೋಲಾಟ, ಏಕಪಾತ್ರಭಿನಯ ಹೀಗೆ ಯುವಕ, ಯುವತಿಯರಿಗೆ ನಡೆಯುವ 20 ಸ್ಪರ್ಧೆಗಳು, ಕಿರುತೆರೆ ಹಾಗೂ ಸಿನಿಮಾ ನಟ ನಟಿಯರ ಸಮಾಗಮ, ಜ.19ರಂದು ರಾತ್ರಿ 8.30 ರಿಂದ ಆಳ್ವಾಸ್ ಕಲೋತ್ಸವ ನಡೆಯಲಿದೆ. ಯುವಜನಮೇಳದಲ್ಲಿ ಭಾಗವಹಿಸುವ ಯುವಕ ಯುವತಿ ಮಂಡಲಗಳಿಗೆ ಪ್ರೋತ್ಸಾಹಕ ಧನವಾಗಿ ೫ ಸಾವಿರ ರೂಪಾಯಿ, ಆಯೋಜಕರ ಕಡೆಯಿಂದ ಅತ್ಯುತ್ತಮ ಯುವಕ ಯುವತಿ ಮಂಡಲ ಪ್ರಶಸ್ತಿ ಲಭಿಸಲಿದೆ ಎಂದರು.
ಸ್ಪರ್ಧೆಗಳು:
ಯುವಜನಮೇಳದಲ್ಲಿ ಭಾವಗೀತೆ ವೈಯುಕ್ತಿಕ (3ನಿಮಿಷ), ಲಾವಣಿ ವೈಯುಕ್ತಿಕ (4ನಿಮಿಷ), ರಂಗಗೀತೆ ವೈಯುಕ್ತಿಕ (3ನಿಮಿಷ), ಏಕಪಾತ್ರಾಭಿನಯ ವೈಯುಕ್ತಿಕ (5ನಿಮಿಷ), ತುಳು ಪಾಡ್ದಾನ ವೈಯುಕ್ತಿಕ (3ನಿಮಿಷ), ತುಳು ಭಾವಗೀತೆ ವೈಯುಕ್ತಿಕ (3ನಿಮಿಷ), ಗೀಗಿಪದ 5ಜನ (4ನಿಮಿಷ), ಜಾನಪದ ಗೀತೆ 6ಜನ (4ನಿಮಿಷ), ಜಾನಪದ ನೃತ್ಯ 6ಜನ (4ನಿಮಿಷ), ತುಳು ಜಾನಪದ ನೃತ್ಯ ಗುಂಪು (10ನಿಮಿಷ), ಕೋಲಾಟ 12ಜನ (10ನಿಮಿಷ), ಭಜನೆ 8ಜನ (6ನಿಮಿಷ), ಮೊದಲಾದ ವಿವಿಧ ಸ್ಪರ್ಧೆಗಳು ನಡೆಯಲಿದೆ.
ಯುವಕರಿಗೆ ವೀರಗಾಸೆ 12ಜನ (10ನಿಮಿಷ), ಡೊಳ್ಳುಕುಣಿತ 12ಜನ (1೦ನಿಮಿಷ),ದೊಡ್ಡಾಟ 15ಜನ (45ನಿಮಿಷ), ಸಣ್ಣಾಟ 12ಜನ (30ನಿಮಿಷ), ಯಕ್ಷಗಾನ 15ಜನ (45ನಿಮಿಷ),ಚರ್ಮವಾದ್ಯ ಮೇಳ 6ಜನ (10ನಿಮಿಷ),ಸ್ಪರ್ಧೆಗಳು ನಡೆಯಲಿದೆ.
ಯುವತಿಯರಿಗೆ ರಾಗಿ ಬೀಸುವ ಪದ 2ಜನ (3ನಿಮಿಷ),ಶೋಭಾನೆ ಪದ 4ಜನ (5ನಿಮಿಷ)ಸ್ಪರ್ಧೆಗಳು ನಡೆಯಲಿದೆ ಎಂದರು.
ಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ವಿನೂಬಳಂಜ ಅಟ್ಲಾಜೆ, ಕಾರ್ಯಾಧ್ಯಕ್ಷ ಸಂತೋಷ್ ಕುಮಾರ್ ಕಾಪಿನಡ್ಕ, ಪ್ರಧಾನ ಕಾರ್ಯದರ್ಶಿ ಸಂತೋಷ್ ಪಿ ಕೋಟ್ಯಾನ್ ಬಳಂಜ, ಕೋಶಾಧಿಕಾರಿ ರಾಕೇಶ್ ಹೆಗ್ಡೆ ಬಳಂಜ, ಉಪಾಧ್ಯಕ್ಷ ವಿಶ್ವನಾತ ಹೊಳ್ಳ ಮಜ್ಜೆನಿಬೈಲು, ಪ್ರಚಾರ ಸಮಿತಿ ಸಂಚಾಲಕ ಮನೋಹರ್ ಬಳಂಜ, ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.