ಗ್ರಾ.ಪಂ.ಚುನಾವಣೆ ಸಾಮಾಜಿಕ ಜಾಲತಾಣಗಳಲ್ಲಿ ವದಂತಿ: ಆಯೋಗ ನಿರಾಕರಣೆ

Advt_NewsUnder_1
Advt_NewsUnder_1

ಬೆಳ್ತಂಗಡಿ: ಗ್ರಾಮ‌ ಪಂಚಾಯತುಗಳಿಗೆ ಚುನಾವಣಾ ದಿನಾಂಕ ಘೋಷಣೆಯಾಗಿದೆ ಎಂದು ವರದಿ ಪ್ರಕಟಿಸಿರುವ ಹಲವು ವೆಬ್ ಸೈಟ್ ಸಹಿತ ಸಾಮಾಜಿಕ ಜಾಲತಾಣಗಳು ಬೇಸ್ತು‌ ಬಿದ್ದಿದೆ.

ಗ್ರಾಮ‌ ಪಂಚಾಯತ್ ಚುನಾವಣೆಗೆ ದಿನಾಂಕ ಪ್ರಕಟವಾಗಿದೆ, ರಾಜ್ಯದಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ, ಗ್ರಾ.ಪಂ. ಚುನಾವಣೆಗೆ ಸ್ಪರ್ಧಿಸಲು ಎಸ್.ಎಸ್.ಎಲ್.ಸಿ. ವಿದ್ಯಾಭ್ಯಾಸ ಕಡ್ಡಾಯ ಎಂಬಿತ್ಯಾದಿ ಮಾಹಿತಿಯನ್ನು ವೆಬ್ ಸೈಟ್ ಗಳು ಪ್ರಕಟಿಸಿತ್ತು. ಅಲ್ಲದೆ, ಕರ್ನಾಟಕ ರಾಜ್ಯಪತ್ರದ ಪ್ರಕಟಣೆಯನ್ನೂ ಹೊರಡಿಸಲಾಗಿದೆ ಎಂದು‌ ಬಿಂಬಿಸಲಾಗಿತ್ತು. ಆದರೆ, ಇದನ್ನು ನಿರಾಕರಿಸಿರುವ ಚುನಾವಣಾ ಆಯೋಗವು ಇನ್ನೂ ಗ್ರಾ.ಪಂ. ಚುನಾವಣೆಗೆ ದಿನಾಂಕ ಘೋಷಿಸಿಲ್ಲ ಎಂದು ಸ್ಪಷ್ಟ ಪಡಿಸಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.