ಯಕ್ಷಗಾನ ಹಾಸ್ಯ ಪರಂಪರೆ ಪ್ರಾತ್ಯಕ್ಷಿಕೆ ಮತ್ತು ದಾಖಲೀಕರಣ ಉದ್ಘಾಟನೆ

Advt_NewsUnder_1
Advt_NewsUnder_1

ಉಜಿರೆ: ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇದರ ವತಿಯಿಂದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆ ಸಂಯೋಜನೆಯಲ್ಲಿ ಕುರಿಯ ವಿಠಲ ಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನ ಉಜಿರೆ ಸಹಕಾರದಲ್ಲಿ ಯಕ್ಷಗಾನ ಹಾಸ್ಯ ಪರಂಪರೆ ಪ್ರಾತ್ಯಕ್ಷಿಕೆ ಮತ್ತು ದಾಖಲೀಕರಣ ಕಾರ್‍ಯಕ್ರಮ ಜ.11 ರಂದು ಉಜಿರೆ ಸಿದ್ಧವನ ಗುರುಕುಲದಲ್ಲಿ ಜರುಗಿತು.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ ವೀರೇಂದ್ರ ಹೆಗ್ಗಡೆ ದೀಪ ಬೆಳಗಿಸಿ ಉದ್ಘಾಟಿಸಿ ಹಾಸ್ಯಕ್ಕೆ ಯಕ್ಷಗಾನದಲ್ಲಿ ಹೆಚ್ಚು ಅವಕಾಶವಿದ್ದು ಹಾಸ್ಯಗಾರ ಕಲೆ, ನಟನೆಯಿಂದ ತನ್ನ ಭಾವವನ್ನು ವ್ಯಕ್ತಪಡಿಸಬಹುದು. ಎಲ್ಲಾ ಕಲಾವಿದರು. ಕಥೆ ಪ್ರೇಕ್ಷಕರು ವೇದಿಕೆಗೆ ಗೌರವವನ್ನು ತರಬೇಕು ಎಂದು ಸಲಹೆಯಿತ್ತರು.
ಅಧ್ಯಕ್ಷತೆಯನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಪೊ. ಎಂ.ಎ ಹೆಗ್ಗಡೆ ವಹಿಸಿದ್ದರು. ವೇದಿಕೆಯಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ರಿಜಿಸ್ಟರ್ ಎಸ್.ಹೆಚ್ ಶಿವರುದ್ರಪ್ಪ ಉಜಿರೆ ಕಾಲೇಜು ಪ್ರಾಂಶುಪಾಲ ಪೊ. ಎಂ. ಸತೀಶ್ಚಂದ್ರ, ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯೆ ಆರತಿ ಪಟ್ರಮೆ, ಕುರಿಯ ವಿಠಲ ಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನದ ಸಂಚಾಲಕ ಉಜಿರೆ ಅಶೋಕ್ ಭಟ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.