ಸ.ಹಿ.ಪ್ರಾ.ಶಾಲೆ ಕೊಕ್ಕಡ ಇದರ ಶತಮಾನೋತ್ಸವ ಕಾರ್ಯಕ್ರಮವು ಜ.21 ರಂದು ಜರುಗಲಿದ್ದು, ಆಮಂತ್ರಣ ಪತ್ರಿಕೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಸುಬ್ರಹ್ಮಣ್ಯ ಯಡಪಡಿತ್ತಾಯ ರವರಿಗೆ ಜ.11 ರಂದು ನೀಡಲಾಯಿತು.
ಈ ಸಂದರ್ಭದಲ್ಲಿ ಶತಮಾನೋತ್ಸವ ಸಮಿತಿ ಅಧ್ಯಕ್ಷ ವಿಶ್ವನಾಥ ಕೊಲ್ಲಾಜೆ, ಉಪಾಧ್ಯಕ್ಷ ರತ್ನಾಕರ ಪಾಂಗಣ್ಣಾಯ, ಕೊಕ್ಕಡ ತಾ.ಪಂ ಸದಸ್ಯ ಲಕ್ಷ್ಮೀ ನಾರಾಯಣ, ಜೊತೆ ಕಾರ್ಯದರ್ಶಿ ಉಮ್ಮರ್ ಬೈಲಂಗಡಿ, ಸದಸ್ಯ ಅಣ್ಣಪ್ಪ ಕಾಶಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಣೇಶ್ ಕೊಕ್ಕಡ ಉಪಸ್ಥಿತರಿದ್ದರು.