ಉಜಿರೆ ಬೆನಕ ಆಸ್ಪತ್ರೆಗೆ “ಎನ್. ಯೆ. ಬಿ. ಎಚ್” ಮಾನ್ಯತಾ ಪತ್ರ ಹಸ್ತಾಂತರ

Advt_NewsUnder_1
Advt_NewsUnder_1
Advt_NewsUnder_1

ಉಜಿರೆ; ಭಾರತ ಸರ್ಕಾರದ ಗುಣಮಟ್ಟ ನಿಯಂತ್ರಣ ಮಂಡಳಿಯ ಘಟಕ ಸಂಸ್ಥೆಯಾಗಿ ಸ್ಥಾಪಿತವಾದ ಆಸ್ಪತ್ರೆಗಳ ರಾಷ್ಟ್ರೀಯ ಮಾನ್ಯತೆ ಮಂಡಳಿಯ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುವಲ್ಲಿ ಗ್ರಾಮೀಣ ಪ್ರದೇಶದಲ್ಲಿರುವ ಬೆನಕ ಆಸ್ಪತ್ರೆಯು ಮಾಡಿರುವ ಪ್ರಯತ್ನಗಳು ಗಣನೀಯ. ಈ ಪ್ರಮಾಣ ಪತ್ರವನ್ನು ಪಡೆದ ಬೆಳ್ತಂಗಡಿ ತಾಲೂಕಿನ ಮೊದಲ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಕೆಲವೇ ಆಸ್ಪತ್ರೆಗಳಲ್ಲಿ ಉಜಿರೆ ಬೆನಕ ಆಸ್ಪತ್ರೆ ಪಾತ್ರವಾಗಿದೆ. ಆರೋಗ್ಯ ಸೇವೆಯಲ್ಲಿ ಬೆನಕ ಒಂದು ಮಾದರಿ ಸಂಸ್ಥೆ ಎಂದು ರಾಷ್ಟ್ರೀಯ ಮಾನ್ಯತೆ ಪಡೆದ ಸಂಸ್ಥೆಗಳ ಅಧ್ಯಕ್ಷ ಡಾಕ್ಟರ್ ಅಲೆಗ್ಸಾಂಡರ್ ಹೇಳಿದರು.

ಬೆನಕ ಆಸ್ಪತ್ರೆಯ ಆವರಣದಲ್ಲಿ ಜನವರಿ 10 ರಂದು ನಡೆದ ಮಾನ್ಯತಾ ಪತ್ರ ಹಸ್ತಾಂತರಿಸಿ ಅವರು ಮಾತನಾಡುತ್ತಿದ್ದರು.

ಬೆನಕ ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾಕ್ಟರ್ ಗೋಪಾಲಕೃಷ್ಣ ಅವರು ಈ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡುತ್ತಾ,

ಇಪ್ಪತ್ತು ವರ್ಷಗಳ ಹಿಂದೆ ಯಾವುದೇ ಮಹತ್ವಾಕಾಂಕ್ಷೆ ಯಿಲ್ಲದೆ ಸಣ್ಣಪುಟ್ಟ ಕಾಯಿಲೆಗಳಿಗೆ ಉಪಶಮನ ನೀಡುವ ಉದ್ದೇಶದಿಂದ ಆಸ್ಪತ್ರೆಯನ್ನು ಆರಂಭಿಸಲಾಯಿತು. ಇಂದು ಆಸ್ಪತ್ರೆ ಸುಮಾರು 80 ಹಾಸಿಗೆ ಗಳುಳ್ಳ ಸುಸಜ್ಜಿತ ಶಸ್ತ್ರ ಚಿಕಿತ್ಸಾ ಕೊಠಡಿ ಗಳೊಂದಿಗೆ ಬೆಳೆದುನಿಂತಿದೆ. ಮಾತ್ರವಲ್ಲ ಭಾರತ ಸರ್ಕಾರದ ರಾಷ್ಟ್ರೀಯ ಮಾನ್ಯತಾ ಸಂಸ್ಥೆಯಿಂದ ಮೌಲ್ಯಮಾಪನಕ್ಕೆ ಒಳಪಡಿಸಿ “ಎನ್. ಯೆ. ಬಿ. ಎಚ್” ಪ್ರಮಾಣೀಕರಿಸಿದ ಆಸ್ಪತ್ರೆಯಾಗಿ ಮೂಡಿಬಂದಿರುವುದು ಬಹಳ ಹೆಮ್ಮೆ ತಂದಿದೆ ಎಂದರು.


ಕಾರ್ಯಕ್ರಮದಲ್ಲಿ ಖ್ಯಾತ ಹೃದಯ ತಜ್ಞ ಡಾಕ್ಟರ್ ಪದ್ಮನಾಭ ಕಾಮತ್ ಹಾಗೂ ಬೆನಕ ಆಸ್ಪತ್ರೆಯ ಸಂಯೋಜಕ ದೇವಸ್ಯ ವರ್ಗಿಸ್ ಅವರನ್ನು ಸನ್ಮಾನಿಸಲಾಯಿತು.

ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಎಸ್ ಜಿ ಭಟ್ ಸ್ವಾಗತಿಸಿ ಡಾಕ್ಟರ್ ಭಾರತಿ ಗೋಪಾಲಕೃಷ್ಣ ವಂದಿಸಿದರು.

Dr. ಅಂಕಿತ ಜಿ. ಕೆ ಭಟ್, ಡಾಕ್ಟರ್ ರೋಹಿತ್ ಜಿ.ಕೆ ಭಟ್ ಅತಿಥಿಗಳನ್ನು ಪರಿಚಯಿಸಿದರು. ಕಾರ್ಯಕ್ರಮದಲ್ಲಿ ಆರಂಭದಲ್ಲಿ ಹಾಗೂ ಕೊನೆಗೆ ಆಸ್ಪತ್ರೆಯ ಸಿಬ್ಬಂದಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನಗೊಂಡಿತು. ಚಿತ್ರ ಶೈಲೇಶ್, ಪ್ರಜ್ಞಾ, ಡಾಕ್ಟರ್ ಜಯಕುಮಾರ ಶೆಟ್ಟಿ ನಿರೂಪಿಸಿದರು.

ನಿರಂತರ ಸುಧಾರಣೆಯನ್ನು ಉತ್ತೇಜಿಸುವ ರೊಂದಿಗೆ ಗುಣಮಟ್ಟದ ಆರೈಕೆಗೆ ಬದ್ಧತೆಯನ್ನು ಪ್ರದರ್ಶಿಸುವಲ್ಲಿ ಆಸ್ಪತ್ರೆಯನ್ನು ಶಕ್ತಗೊಳಿಸುತ್ತದೆ.
ಆಸ್ಪತ್ರೆ ಒದಗಿಸುವ ಸೇವೆಗಳಲ್ಲಿ ಸಮುದಾಯದ ವಿಶ್ವಾಸವನ್ನು ಹೆಚ್ಚಿಸುತ್ತದೆ. ಗುಣಾತ್ಮಕ ಆರೋಗ್ಯ ಸೇವೆಯನ್ನು ಜನರಿಗೆ ಒದಗಿಸುವಲ್ಲಿ ಆಸ್ಪತ್ರೆಗಳನ್ನು ಮೌಲ್ಯಮಾಪನಕ್ಕೆ ಒಳಪಡಿಸುವುದು ಸಮಜ್ಮುಖಿ ಹಾಗೂ ಅನುಕರಣೀಯ ಉಪಕ್ರಮ.
@ ಡಾಕ್ಟರ್ ಅಲೆಕ್ಸಾಂಡರ್ ಥಾಮಸ್.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.