ಅಳದಂಗಡಿ ತೋಟಗಾರಿಕಾ ಉತ್ಪಾದನಾ ಕಂಪೆನಿಯಿಂದ ತರಕಾರಿ ಕೃಷಿ

ಬೆಳ್ತಂಗಡಿ: ಅಳದಂಗಡಿ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿಯ ವತಿಯಿಂದ ಬೆಳ್ತಂಗಡಿ ಕೋರ್ಟು ರಸ್ತೆ ಸುದೆಮುಗೆರು ಎಂಬಲ್ಲಿ ತರಕಾರಿ ಕೃಷಿಗಾಗಿ ಬೀಜ ಬಿತ್ತುವ ಕಾರ್ಯಕ್ರಮ‌ ಕೃಷಿ ತಜ್ಞರ ಸಮ್ಮುಖ ಜ.10 ನಡೆಯಿತು.

ಪಾಳು ಬಿದ್ದಿರುವ ಅಥವಾ ಕೃಷಿ ಚಟುವಟಿಕೆ ಜನ ಇಲ್ಲದೆ ಹಾಗೆ ಬಿಟ್ಟುಬಿಟ್ಟಿರುವ ಖಾಲಿ ಕೃಷಿ ಯೋಗ್ಯ ಭೂಮಿಯಲ್ಲಿ ತರಕಾರಿ ಕೃಷಿ ಮಾಡುವರೇ ರೈತ ಉತ್ಪಾದನಾ ಕಂಪೆನಿ ತೀರ್ಮಾನಿಸಿ ಈ ಯೋಜನೆಗೆ ಚಾಲನೆ ನೀಡಲಾಯಿತು. ಕೃಷಿ ಪ್ರಶಸ್ತಿ ಪುರಸ್ಕೃತರ ಪ್ರಭಾಕರ ಮಯ್ಯ ಅವರ ಮಾರ್ಗದರ್ಶನದಲ್ಲಿ ನಡೆಯುವ ಈ ಕಾರ್ಯಕ್ರಮವು ಕಂಪೆನಿಯ ಅದ್ಯಕ್ಷ ಹರಿದಾಸ್ ಎಸ್.ಎಮ್. ರವರ ನೇತೃತ್ವದಲ್ಲಿ ಇಂದು ಉದ್ಘಾಟನೆ ಗೊಂಡಿತು.

ಮುಂದಕ್ಕೆ ಅವಕಾಶ ಇರುವ ಭೂಮಿಯನ್ನು ಇದೇ ರೀತಿ ಬಳಸಿಕೊಂಡು ಉತ್ಪಾದನೆ ಆಗುವ ಪಕ್ಕಾ ಸಾವಯವ ತರಕಾರಿಗಳನ್ನು ಸ್ಥಳೀಯವಾಗಿ ಮಾರಾಟ ವ್ಯವಸ್ಥೆ ಕೈಗೊಂಡು‌ಅದರಿಂದ ವ್ಯಾಪಾರ ವೃದ್ಧಿಸಲು ಕ್ರಮ‌ ಕೈಗೊಳ್ಳುವ ಇರಾದೆ‌ಕಂಪೆನಿಗೆ ಇದೆ ಎಂದು ಹರಿದಾಸ್ ತಿಳಿಸಿದರು. ತೋಟಗಾರಿಕಾ ಇಲಾಖೆಯ ಸಂಜೀವ ಸಹಿತ ಸಿಬ್ಬಂದಿಗಳು, ಕೃಷಿ ಆಸಕ್ತರು ಭಾಗಿಯಾಗಿದ್ದರು. ನ್ಯಾಯವಾದಿ ಸುಕನ್ಯಾ ಉಪಸ್ಥಿತರಿದ್ದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.