ನಾರಾವಿ ಕೆ. ಕರಿಯ ಶೆಟ್ಟಿ ನಿಧನ

Advt_NewsUnder_1
Advt_NewsUnder_1
Advt_NewsUnder_1

ನಾರಾವಿ ಪೇಟೆಯಲ್ಲಿ ವ್ಯಾಪಾರಿಯಾಗಿದ್ದು ಸಾರ್ವಜನಿಕ ಸೇವೆಯಲ್ಲಿ ಗುರುತಿಸಿಕೊಂಡಿದ್ದ ಕೆ ಕರಿಯ ಶೆಟ್ಟಿ(75ವ)ಯವರು ಜ.10  ರಂದು ಕಾರ್ಕಳದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಅಂಡಿಂಜೆ ಪಂಚಾಯತ್‌ನ ಮಂಡಲ ಪ್ರಧಾನರಾಗಿದ್ದ ಇವರು ಕೊಕ್ರಾಡಿ ಸರಕಾರಿ ಪ್ರೌಢಶಾಲೆಯ ಸ್ಥಾಪನೆಯ ಮೂಲಕ ಕಾರಣಕರ್ತ, ನಾರಾವಿ ಸೂರ್ಯ ನಾರಾಯಣ ದೇವಸ್ಥಾನದ 11 ವರ್ಷಗಳ ಕಾಲ ಮೊಕ್ತೇಸರರಾಗಿ ಸೇವೆ ಸಲ್ಲಿಸಿದರು. ನಾರಾವಿ ಕೊಡಮಣಿತ್ತಾಯ ದೈವಸ್ಥಾನದ ನವೀಕರಣ ಮತ್ತು ಬ್ರಹ್ಮಕಲಶೋತ್ಸವದಲ್ಲಿ ಪ್ರಮುಖರಾಗಿದ್ದು, ಬೆಳ್ತಂಗಡಿ ತಾಲೂಕು ಬಂಟರ ಸಂಘದ ಅಧ್ಯಕ್ಷರಾಗಿ ಗುರುವಾಯನಕೆರೆಯಲ್ಲಿ ಬಂಟರ ಭವನವನ್ನು ಸ್ಥಾಪಿಸಿದರು.
ಮೃತರು  ಪುತ್ರಿಯರಾದ ಮಲ್ಲಿಕಾ, ಮಧುರ, ಮೈತ್ರಿ, ಹಾಗೂ ಒರ್ವ ಪುತ್ರ ಮನೋಹರ್ , ಸಹೋದರಿ ರತ್ನ ಹಾಗೂ  ಬಂಧು-ವರ್ಗದವರನ್ನು ಅಗಲಿದ್ದಾರೆ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.