HomePage_Banner_
HomePage_Banner_

ಧರ್ಮಸ್ಥಳ ಗ್ರಾ. ಪಂ.ಗೆ ಸಮಗ್ರ ಆಡಳಿತ ಪ್ರಶಸ್ತಿ

ಧರ್ಮಸ್ಥಳ: ಗ್ರಾಮೀಣಾಭಿವೃದ್ಧಿ ,ಮತ್ತು ಪಂಚಾಯತ್ ರಾಜ್ ಇಲಾಖೆ ಸ್ಥಳೀಯ ಆಡಳಿತ ಧರ್ಮಸ್ಥಳ ಗ್ರಾ.ಪಂ. 2019ನೇ ಸಾಲಿನ ಸಮಗ್ರ ಆಡಳಿತ ಪ್ರಶಸ್ತಿಗೆ ಪಾತ್ರವಾಯಿತು.
ಕೋಟತಟ್ಟು ಗ್ರಾ.ಪಂ. ಮತ್ತು ಡಾ| ಶಿವರಾಮ ಕಾರಂತ ಪ್ರತಿಷ್ಠಾನ ಇದರ ವತಿಯಿಂದ ಇದರ ಕೋಟಾದಲ್ಲಿ ನಡೆದ ಸ್ಥಳೀಯಾಡಳಿತ ಜನ ಪ್ರತಿನಿಧಿಗಳ ಕ್ರೀಡಾಕೂಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರ ಉಪಸ್ಥಿತಿಯಲ್ಲಿ ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಕೆ.ಎಸ್ ಈಶ್ವರಪ್ಪರವರು ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.
ಧರ್ಮಸ್ಥಳ ಗ್ರಾ.ಪಂ. ಅಧ್ಯಕ್ಷ ಚಂದನ್ ಪ್ರಸಾದ್ ಕಾಮತ್ , ಪಂ. ಅಭಿವೃದ್ಧಿ ಅಧಿಕಾರಿ ಉಮೇಶ್ .ಕೆ , ಸದಸ್ಯರುಗಳಾದ ಸುಧಾಕರ ಗೌಡ, ಅಬೂಬಕ್ಕರ್ ಸಿದ್ದಿಕ್, ಹರೀಶ್ ಸುವರ್ಣ, ಕಿರಣ್ ಕುಮಾರ್, ಹೊನ್ನಮ್ಮ, ಪ್ರೇಮ, ಲೆಕ್ಕ ಸಹಾಯಕ ದಿನೇಶ್. ಎಂ, ಸಿಬ್ಬಂದಿಗಳಾದ ಡಾ| ದೇವಿ ಪ್ರಸಾದ್ ಬೊಳ್ಮ, ವಂದನಾ ಬಲ್ಲಾಳ್, ದಿವಾಕರ, ವೀರಪ್ಪ, ಸುಲೈಮಾನ್ ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.