ನ್ಯಾಯತರ್ಪು : ಇಲ್ಲಿಯ ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜ.24 ರಿಂದ 30 ರ ತನಕ ನಡೆಯುವ ವರ್ಷಾವಧಿ ಜಾತ್ರೆಯ ಆಮಂತ್ರಣ ಪತ್ರ ಬಿಡುಗಡೆಯನ್ನು ಜ.10 ರಂದು ಪೂರ್ವಾಹ್ನ ಧನು ಪೂಜೆ ಸಂದರ್ಭದಲ್ಲಿ ಉದ್ಯಮಿ ವೆಂಕಟರಮಣ ಪೈ ಗೇರುಕಟ್ಟೆ ಬಿಡುಗಡೆ ಮಾಡಿದರು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವಸಂತ ಮಜಲು ಗೇರುಕಟ್ಟೆ ಡಾ.ಅನಂತ ಭಟ್ ಅವರಿಗೆ ಮೊದಲ ಆಮಂತ್ರಣ ಪತ್ರ ನೀಡಿದರು.
ಈ ಸಂದರ್ಭದಲ್ಲಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಯಾದವ ಗೌಡ ಮುದ್ದುಂಜ,ಪ್ರಧಾನ ಅರ್ಚಕ ವೆ.ಮೂ.ರಾಘವೇಂದ್ರ ಅಸ್ರಣ್ಣ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಜನಾರ್ದನ ಪೂಜಾರಿ ಗೇರುಕಟ್ಟೆ, ಕೆ.ಎನ್.ಅನಂದ ಶೆಟ್ಟಿ ಪಣೆಜಾಲು,ದಿನೇಶ್ ಗೌಡ ಕಲಾಯಿತೊಟ್ಟು,ಅಂಬಾ ಬಿ.ಅಳ್ವ,ವಿಜಯ ಹೆಚ್.ಪ್ರಸಾದ್,ಭಾರತಿ ವಿ.ವಂಜಾರೆ,ಅ.ಸ.ಪ್ರ.ಕಾರ್ಯದರ್ಶಿ ರಾಜೇಶ್ ಪೆಂರ್ಬುಡ, ಬೆಳ್ತಂಗಡಿ “ಸುದ್ದಿ ಪತ್ರಿಕೆ”ಮುಖ್ಯ ವರದಿಗಾರ ರಾದ ಬಿ.ಎಸ್.ಕುಲಾಲ್. ನಾಳ ಭಜನ ಮಂಡಳಿ ಅಧ್ಯಕ್ಷ ಉಮೇಶ್ ಶೆಟ್ಟಿ ಸಂಬೋಳ್ಯ, ಶ್ರೀ ದುರ್ಗಾ ಮಾತೃ ಮಂಡಳಿ ಅಧ್ಯಕ್ಷೆ ರೀತಾ ನಾಳ,ವ್ಯವಸ್ಥಾಪಕ ಗಿರೀಶ್ ಶೆಟ್ಟಿ ಗೇರುಕಟ್ಟೆ,ಪೂವಪ್ಪ ಶೆಟ್ಟಿ ಬಿಳಿಬೈಲು, ಅಶೋಕ ಆಚಾರ್ಯ ಗಂಪದಡ್ಡ ಉಪಸ್ಥಿತರಿದ್ದರು.
ವ್ಯವಸ್ಥಾಪನ ಸಮಿತಿ,ಅಭಿವೃದ್ಧಿ ಸಮಿತಿ, ಜಾತ್ರೋತ್ಸವ ಸಮಿತಿ,ರಾಜಕೇಶರಿ ಗೋವಿಂದೂರು ಹಾಗೂ ಭಜನಾ ಮಂಡಳಿ ಪದಾಧಿಕಾರಿಗಳು ಮತ್ತು ನ್ಯಾಯತರ್ಪು,ಕಳಿಯ ಮತ್ತು ಓಡಿಲ್ನಾಳ ಗ್ರಾಮದ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
\