ಖೇಲೋ ಇಂಡಿಯಾ: ಕರ್ನಾಟಕ ತಂಡಕ್ಕೆ ಎಸ್‌ಡಿಎಂ ಕಾಲೇಜಿನ ಇಬ್ಬರು ಆಯ್ಕೆ

Advt_NewsUnder_1
Advt_NewsUnder_1
Advt_NewsUnder_1

ಉಜಿರೆ: ಭಾರತ ಸರಕಾರದ ಖೇಲೋ ಇಂಡಿಯಾದಡಿ ಕರ್ನಾಟಕ ರಾಜ್ಯ ತಂಡಕ್ಕೆ ಉಜಿರೆ ಎಸ್‌ಡಿಎಂ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
17ರ ವಯೋಮಾನದ ಬಾಲಕರ ಕಬಡ್ಡಿ ತಂಡಕ್ಕೆ ಎಸ್‌ಡಿಎಂ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಪ್ರಜ್ವಲ್, 21 ರ ವಯೋಮಾನದ ವಿಭಾಗಕ್ಕೆ ಕಾಲೇಜಿನ ಪದವಿ ವಿಭಾಗದ ವಿದ್ಯಾರ್ಥಿನಿ ಮಾನಸ ಕೆ.ವಿ ಆಯ್ಕೆಯಾಗಿದ್ದಾರೆ.
ಪ್ರಜ್ವಲ್ ಅವರು ಶಿವಮೊಗ್ಗ ಜಿಲ್ಲಾ ಹೊಸನಗರ ತಾಲೂಕು ರಿಪ್ಪನ್‌ಪೇಟೆ ಶ್ರೀಧರ ಮತ್ತು ಶೋಭಾ ದಂಪತಿ ಪುತ್ರರಾಗಿದ್ದು, ಕಳೆದ ಬಾರಿ ಹೈಸ್ಕೂಲ್ ವಿಭಾಗದಲ್ಲಿ ರಾಜ್ಯಮಟ್ಟದಲ್ಲಿ ಆಟ ಆಡಿದ ಅನುಭವಿ ಆಟಗಾರರಾಗಿದ್ದಾರೆ.


ಮಾನಸ ಕೆ.ವಿ ಅವರು ಹಾಸನ ಜಿಲ್ಲೆಯ ಸರಕಾರಿ ಹೈಸ್ಕೂಲ್ ಹಂಡಿಲಿ ನಿವಾಸಿ ವೆಂಕಟೇಶ್ ಅವರು ಪುತ್ರಿಯಾಗಿದ್ದು, ಈಗಾಗಲೇ ಅವರು ಕಬಡ್ಡಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮೆರೆದಿದ್ದಾರೆ. ಮಂಗಳೂರು ವಿ.ವಿ ದಕ್ಷಿಣ ವಲ ಅಂತ್ ವಿವಿ ಕಬಡ್ಡಿ ಪಂದ್ಯಾಟದಲ್ಲಿ ಭಾಗವಹಿಸಿ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಆಯ್ಕೆಯಾಗಿರುವ ಪ್ರಜ್ವಲ್ ಅವರು ದ.ಕ ಜಿಲ್ಲೆಯಿಂದ ಆಯ್ಕೆಯಾಗಿರುವ ಏಕೈಕ ಅಭ್ಯರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
ಪಂದ್ಯಾಟವು ಅಸ್ಸಾಂನ ಗುವಾಹಟಿಯಲ್ಲಿ ನಡೆಯಲಿದೆ. ಇವರಿಗೆ  ಎಸ್ ಡಿ ಎಮ್ ಕಬಡ್ಡಿ ಕೋಚ್ ಕೃಷ್ಣಾನಂದ  ರಾವ್ ಮುಂಡಾಜೆ ಇವರು ತರಬೇತಿ ನೀಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.