HomePage_Banner_
HomePage_Banner_

ಸಾಮಾಜಿಕ ಜಾಲತಾಣದಲ್ಲಿ ಅಪಮಾನ ಸಂದೇಶ, ಧರ್ಮಸ್ಥಳ ಠಾಣೆಗೆ ದೂರು; ಆರೋಪಿಯಿಂದ ಮುಚ್ಚಳಿಕೆ

ಧರ್ಮಸ್ಥಳ: ಕೌಟುಂಬಿಕ ಘಟನೆಯ ಧ್ವೇಷದಿಂದ ವ್ಯಕ್ತಿಯ ಮೇಲೆ ಇಲ್ಲ ಸಲ್ಲದ ಆಪಾದನೆ ಎಸಗಿ ಸಮಾಜದಲ್ಲಿ ಅಪಮಾನವಾಗು ರೀತಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಬಿತ್ತರಿಸಿದ ವ್ಯಕ್ತಿಯ ವಿರುದ್ಧ ಧರ್ಮಸ್ಥಳ ಠಾಣೆಗೆ ದೂರು ನೀಡಲಾಗಿದೆ. ಮೂಲತಃ ಚಾರ್ಮಾಡಿ ನಿವಾಸಿಯಾಗಿದ್ದು ಪ್ರಸ್ತುತ ಸೋಮಂತಡ್ಕದಲ್ಲಿ ನೆಲೆಸಿರುವ ಅಬ್ದುಲ್ ರಶೀದ್ ಅವರಿಗೆ ಮಾನಹಾನಿ ಮಾಡಿ ಧರ್ಮಸ್ಥಳ ಕನ್ಯಾಡಿಯ ಝೈನುದ್ದೀನ್ ಅವರು ಈ ಸಂದೇಶ ಹಾಕಿದ್ದಾಗಿದೆ.
ಈ ಬಗ್ಗೆ ಅಬ್ದುಲ್ ರಶೀದ್ ಅವರು ನೀಡಿದ ದೂರಿನಂತೆ ಝೈನುದ್ದೀನ್ ಅವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ ಪೊಲೀಸರು ಅವರಿಂದ ಮುಚ್ಚಳಿಕೆ ಬರೆಸಿಕೊಂಡು ಎಚ್ಚರಿಕೆ ನೀಡಿ ಕಳಿಸಿಕೊಟ್ಟಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.