ಮಚ್ಚಿನ : ಸರಕಾರಿ ಕೆಲಸಕ್ಕೆ ಅಡ್ಡಿ; 9 ಮಂದಿ ಮೇಲೆ ಪ್ರಕರಣ ದಾಖಲು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ :  NRLM (ಕೇಂದ್ರ ಸರಕಾರ ಸಂಜೀವಿನಿ ಯೋಜನೆಯ) ಮಾಹಿತಿ ಸಂಗ್ರಹಿಸಲು ತೆರಳಿದ್ದ ಮಚ್ಚಿನ ಗ್ರಾ . ಪಂ ಅದ್ಯಕ್ಷೆ ಹಾಗೂ ಅಲ್ಲಿನ ಗುತ್ತಿಗೆ ನೌಕರರ ಮೇಲೆ 9 ಜನರ ತಂಡ ಕರ್ತವ್ಯಕ್ಕೆ ಅಡ್ಡಿ ಪಡಿಸಿ , ಅವಾಚ್ಯ ಶಬ್ದಗಳಿಂದ ನಿಂದಿಸಿ ,ಸಂಗ್ರಹಿಸಿದ ದತ್ತಾಂಶಗಳನ್ನು ನಾಶ ಪಡಿಸಿದ ಪ್ರಕರಣ ಜ 8 ರಂದು ಪುಂಜಾಲಕಟ್ಟೆ ಪೋಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಬೆಳ್ತಂಗಡಿ ತಾಲ್ಲೂಕಿನ ಮಚ್ಚಿನ ಗ್ರಾಮ ಪಂಚಾಯತ್ ನ ಅಧ್ಯಕ್ಷರಾಗಿರುವ ಹರ್ಷಲತಾ ಹಾಗೂ NRLM (ಕೇಂದ್ರ ಸರಕಾರ ಸಂಜೀವಿನಿ )ಯೋಜನೆಯ ಅಡಿಯಲ್ಲಿ ಮಾಹಿತಿ ಸಂಗ್ರಹಿಸಲು ಜಿಲ್ಲಾ ಪಂಚಾಯತ್ ವತಿಯಿಂದ ಗುತ್ತಿಗೆ ಆಧಾರದಲ್ಲಿ ನೇಮಕವಾಗಿರುವ ಜಾನಕಿ, ರೂಪ ಮತ್ತು ಪವಿತ್ರ ಎಂಬವರುಗಳೊಂದಿಗೆ ಮಚ್ಚಿನ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಲುಗುಡ್ಡೆ ಎಂಬಲ್ಲಿ ಮಾಹಿತಿ ಸಂಗ್ರಹಿಸುತ್ತಿದ್ದಾಗ ಈ ಕೃತ್ಯ ನಡೆದಿದೆ ಎಂದು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಹರ್ಷಲತಾ ರವರು ಈ ದೂರನ್ನು ನೀಡಿದ್ದು ಜ 7 ರಂದು ಮದ್ಯಾಹ್ನ 9 ಜನರ ತಂಡ ನಮ್ಮನ್ನು ತಡೆದು ತಡೆದು ನಿಲ್ಲಿಸಿ NRLM (ಕೇಂದ್ರ ಸರಕಾರ ಸಂಜೀವಿನಿ ) ಯೋಜನೆಗೆ ಸಂಬಂಧಿಸಿದ ಮಾಹಿತಿ ಸಂಗ್ರಹಣೆಗೆ ಅಡ್ಡಿಪಡಿಸಿರುವುದು ಮಾತ್ರವಲ್ಲದೆ ಸಂಗ್ರಹಿಸಿದ್ದ ದತ್ತಾಂಶಗಳನ್ನು ನಾಶಪಡಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿರುತ್ತಾರೆ ಎಂದು ತಿಳಿಸಿದ್ದಾರೆ . ಇರ್ಫಾನ್ ,ಕಲ್ಲಗುಡ್ಡೆ ಮನೆ, ಮಚ್ಚಿನ ಗ್ರಾಮ ಬೆಳ್ತಂಗಡಿ ಅಬ್ದುಲ್ ರಶೀದ್ ತಂದೆ ಹಮೀದ್, ರಫೀಕ್ ಬಂಗೇರಕಟ್ಟೆ, .ನಜೀರ್ ತಂದೆ ಇಬ್ರಾಹಿಂ, ರಜಾಕ್ ಬಿನ್ ಐಸಮ್ಮ, ಬದ್ರುದ್ದೀನ್ ಬಿನ್ ಐಸಮ್ಮ, .ಜುನೈದ್ ಬಿನ್ ಹಮೀದ್ ಸಾಲುಮರ, ಹಮಿದ್, ನವಾಜ್ ಹಾಗೂ ಇತರ ಕೆಲವರು ಈ ಕೃತ್ಯ ನಡೆಸಿರುವುದಾಗಿ ಅವರು ಆರೋಪಿಸಿದ್ದಾರೆ .

ಪುಂಜಾಲಕಟ್ಟೆ ಪೋಲೀಸ್ ಠಾಣೆಯಲ್ಲಿ ಕಲಂ:341. 504. 506.353 ಜೊತೆಗೆ 34 ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.