HomePage_Banner_
HomePage_Banner_
HomePage_Banner_

ಪುದುವೆಟ್ಟು : 30 ಲಕ್ಷ ರೂ ಮೌಲ್ಯದ ಆನೆ ದಂತ ಸೇರಿ ಇಬ್ಬರ ವಶ

Advt_NewsUnder_1
ಬೆಳ್ತಂಗಡಿ: ಖಚಿತ ಮಾಹಿತಿ ಮೇರೆಗೆ ಪುತ್ತೂರು ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳು ದಾಳಿ ನಡೆಸಿ ಆನೆ ದಂತ ಸಾಗಿಸುತ್ತಿದ್ದಆರೋಪಿಗಳ ಸಹಿತ ಎರಡು ದಂತ ವಶ ಪಡಿಸಿದ ಘಟನೆ ಜ.7 ರ  ರಾತ್ರಿ ನಡೆದಿದೆ.

ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ಪುದುವೆಟ್ಟು ಎಂಬಲ್ಲಿ ಕಾರ್ಯಚರಣೆ ನಡೆಸಿ, ಎರಡು ಅನೆ ದಂತ ಮತ್ತು ಆಮ್ನಿ ಕಾರಿನ ಜೊತೆಗೆ ಇಬ್ಬರು ಅರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಮಡಿಕೇರಿಯ ಹೆರವನಾಡು ಗ್ರಾಮದ ಅಪ್ಪಂಗಳ ನಿವಾಸಿ ದಿನೇಶ ಪಿ.ಕೆ. (33) ಹಾಗೂ ಸಕಲೇಶಪುರ ತಾಲೂಕಿನ ನಡಹಳ್ಳಿ ಗ್ರಾಮ ಕುಂಬರಡಿ ನಿವಾಸಿ ಕುಮಾರ.ವಿ (37) ಬಂಧಿತ ಆರೋಪಿಗಳು.

ಮಂಗಳವಾರ ಸಂಜೆ ಬಂದ ಖಚಿತ ಮಾಹಿತಿ‌ ಮೇರೆಗೆ ಪುತ್ತೂರು ಅರಣ್ಯ ಸಂಚಾರಿ ದಳದ ಸಿಬಂದಿ ಸುಂದರ್ ಶೆಟ್ಟಿ, ವಿಜಯ ಸುವರ್ಣ, ಉದಯ, ರಾಧಕೃಷ್ಣಾರವರು ದಾಳಿ ನಡೆಸಿ ಅಂದಾಜು ಮೌಲ್ಯ 30 ಲಕ್ಷ ರೂ. ಮೌಲ್ಯದ 2 ಆನೆದಂತಗಳೊಂದಿಗೆ ಅರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ.

ಪುದುವೆಟ್ಟು, ನೆರಿಯಾ, ದಿಡುಪೆ, ಚಾರ್ಮಾಡಿ ಪರಿಸರದಲ್ಲಿ ಆನೆಗಳ ಓಡಾಟ ಹೆಚ್ಚಿರುವ ನಡುವೆಯೇ ಆನೆದಂತ ಚೋರರ ಸೆರೆಯಾಗಿರುವುದಿರಿಂದ ಮತ್ತಷ್ಟು ಅನುಮಾನಕ್ಕೆ ಆಸ್ಪದ ನೀಡಿದೆ. ಆರೋಪಿಗಳನ್ನು ನ್ಯಾಯಲಕ್ಕೆ ಹಾಜರುಪಡಿಸಲಾಗಿದೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.