ಜ. 15ಕ್ಕೆ ವಸಂತ ಬಂಗೇರರ 75 ನೇ ಹುಟ್ಟುಹಬ್ಬ ಆಚರಣೆಯ ಸಂಭ್ರಮದ ಕಾರ್ಯಕ್ರಮ


ಬೆಳ್ತಂಗಡಿ: ತಾಲೂಕಿನಲ್ಲಿ 5 ಬಾರಿ ಶಾಸಕರಾಗಿ ಪ್ರಶ್ನಾತೀತ ನಾಯಕರಾಗಿ ಬಾಳಿ ಜನಪರ ಕಾಳಜಿಯೊಂದಿಗೆ ಸೇವಾ ಧುರೀಣರಾಗಿ ಬಾಳು ಸವೆಸಿದ ಮಾಜಿ ಶಾಸಕ ವಸಂತ ಬಂಗೇರ ಅವರ 75 ನೇ ಹುಟ್ಟುಹಬ್ಬದ ಪ್ರಯುಕ್ತ ವಸಂತ ಬಂಗೇರ ಅಭಿನಂದನಾ ಸಮಿತಿ ವತಿಯಿಂದ ಜ. 15 ರಂದು ಬೆಳ್ತಂಗಡಿ ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಸಭಾಂಗಣದಲ್ಲಿ ಸಂಭ್ರಮದ ಕಾರ್ಯಕ್ರಮ ಆಯೋಜಿಸಿಕೊಳ್ಳಲಾಗಿದೆ. ಪಕ್ಷ-ಧರ್ಮ-ಜಾತ್ಯಾತೀತವಾಗಿ ಈ ಕಾರ್ಯಕ್ರಮಕ್ಕೆ ಎಲ್ಲರನ್ನೂ ಆಹ್ವಾನಿಸುತ್ತಿದ್ದು ಇದೊಂದು ರಾಜಕೀಯ ರಹಿತವಾದ, ವಸಂತ ಬಂಗೇರರ ಅಭಿಮಾನಿಗಳು ಹಿತೈಷಿಗಳ ಕಾರ್ಯಕ್ರಮ. ಎಲ್ಲರನ್ನೂ ಈ ಕಾರ್ಯಕ್ರಮಕ್ಕೆ ಮುಕ್ತವಾಗಿ ಆಹ್ವಾನಿಸುತ್ತಿರುವುದಾಗಿ ಸಮಿತಿ ಅಧ್ಯಕ್ಷ ಜಯರಾಮ ಶೆಟ್ಟಿ, ಪ್ರ. ಸಂಚಾಲಕ ದೇವಿಪ್ರಸಾದ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀ ಪಾದಂಗಳವರು ಆಶೀರ್ವಚನ ನೀಡಲಿದ್ದಾರೆ. ವಿಮುಕ್ತಿ ಸಂಸ್ಥೆ ನಿರ್ದೇಶಕ ಫಾ. ವಿನೋದ್ ಮಸ್ಕರೇನ್ಹಸ್, ಖ್ಯಾತ ವಾಗ್ನಿ ಹಾಜಿ ಅಬ್ದುಲ್ ಅಝೀಝ್ ದಾರಿಮಿ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಭೋಜರಾಜ ಹೆಗ್ಡೆ ಪಡಂಗಡಿ ಅತಿಥಿಗಳಾಗಿ ಭಾಗಿಯಾಗಲಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಅರವಿಂದ ಚೊಕ್ಕಾಡಿ ಅಭಿನಂದನಾ ಭಾಷಣ ಮಾಡಲಿದ್ದಾರೆ ಎಂದರು.

ಸಂಘ ಸಂಸ್ಥೆ, ವೈಯುಕ್ತಿಕ ಅಭಿನಂದನೆಗೆ ಅವಕಾಶ:
ಈ ಸಮಾರಂಭದಲ್ಲಿ ವಿವಿಧ ಸಂಘ ಸಂಸ್ಥೆಗಳಿಗೆ ಮತ್ತು ವೈಯುಕ್ತಿಕವಾಗಿ ಅವರನ್ನು ಅಭಿನಂದಿಸುವವರಿಗೆ ವೇದಿಕೆಯಿಂದ ಅವಕಾಶ ಕಲ್ಪಿಸಿಕೊಡಲಾಗುವುದು. ಈ ಸನ್ಮಾನದ ವೇಳೆ ಪ್ರಸಿದ್ಧ ಕಲಾವಿದರಿಂದ ಸುಗಮಸಂಗೀತ ನಿನಾದ ಹಮ್ಮಿಕೊಳ್ಳಲಾಗಿದೆ.ಅಂದಾಜು ೫ ಸಾವಿರಕ್ಕೂ ಮಿಕ್ಕಿ ಜನ ಸೇರುವ ನಿರೀಕ್ಷೆ ಇದ್ದು ಎಲ್ಲರಿಗೂ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿದೆ ಎಂದರು.

ಪತ್ರಿಕಾ ಗೋಷ್ಠಿಯಲ್ಲಿ ಸಮಿತಿ ಪ್ರ. ಕಾರ್ಯದರ್ಶಿ, ಉಪಾಧ್ಯಕ್ಷ ಎಂ.ಜಿ ಶೆಟ್ಟಿ ಉಜಿರೆ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.