ಅನ್ಯ ಕೋಮಿನ ಜೋಡಿ ವಶಕ್ಕೆ ಪಡೆದು ಪೊಲೀಸರಿಗೊಪ್ಪಿಸಿದ ನಾಗರಿಕರು

ಬೆಳ್ತಂಗಡಿ: ಇಲ್ಲಿಯ ಮುಂಡಾಜೆ ಬಳಿ ಕಾರೊಂದರಲ್ಲಿ ಅನುಮಾನಾಸ್ಪಾದವಾಗಿ ಗೋಚರಿಸಿದ ಜೋಡಿಗಳನ್ನು ಬಜರಂಗದಳ ಕಾರ್ಯಕರ್ತರು ಮತ್ತು ಊರವರು ಹಿಡಿದು ಪೊಲೀಸರಿಗೋಪ್ಪಿಸಿದ ಘಟನೆ ಜ.6ರಂದು ನಡೆದಿದೆ.
ಪ್ರಾರಂಭದಲ್ಲಿ ಇಬ್ಬರು ಮುಸ್ಲಿಂ ಯುವಕರು ಇಬ್ಬರು ಹಿಂದೂ ಯುವತಿಯರನ್ನು ಕರೆತಂದಿದ್ದಾರೆ ಎಂದು ವದಂತಿ ಹಬ್ಬತ್ತಾದರೂ, ಬಳಿಕ ವಿಚಾರಣೆ ವೇಳೆ ಒಬ್ಬಾಕೆ ರಾಯಚೂರಿನ ಮುಸ್ಲಿಂ ಯುವತಿಯೆಂದೂ ಮತ್ತೊಬ್ಬಾಕೆ ಸಾಗರದ ಹಿಂದು ಯುವತಿಯೆಂದು ತಿಳಿದುಬಂತು. ಜೊತೆಗೆ ಆಗಮಿಸಿದವರು ಮೂಡಿಗೆರೆಯ ಮುಸ್ಲಿಂ ಯುವಕರೆಂದು ತಿಳಿಯಿತು.

ಪೊಲೀಸ್ ಮಾಹಿತಿ ಪ್ರಕಾರ ಬೆಂಗಳೂರಿನಲ್ಲಿ ಒಂದೆ ಕಡೆ ಉದ್ಯೋಗಿಗಳಾಗಿರುವ ಇವರು ತಮ್ಮ ಜೊತೆ ಕೆಲಸ ಮಾಡುತ್ತಾ ಮೋಸ ಮಾಡಿ ಬಂದಿರುವ ಇನ್ನೊಬ್ಬ ಉದ್ಯೋಗಿಯನ್ನು ಹುಡುಕಿಕೊಂಡು ಕಕ್ಕಿಂಜೆಗೆ ಬಂದವರು ಅಲ್ಲಿಂದ ಮುಂಡಾಜೆ ಕಡೆಗೆ ಆಗಮಿಸಿದ್ದರು. ಇದನ್ನು ಗಮನಿಸಿದ ಸ್ಥಳೀಯರು ಇವರನ್ನು ವಿಚಾರಿಸಿದ್ದು, ಮುಸ್ಲಿಂ ಹುಡುಗರ ಜೊತೆ ಆಗಮಿಸಿದ ಹಿಂದೂ ಹುಡುಗಿಯನ್ನು ಮತ್ತು ಯುವಕರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ವಿಷಯ ತಿಳಿದ ಧರ್ಮಸ್ಥಳ ಪೊಲೀಸರು ಸ್ಥಳಕ್ಕಾಗಮಿಸಿ ಈ ನಾಲ್ವರನ್ನೂ ವಶಕ್ಕೆ ಪಡೆದುಕೊಂಡು ಬಳಿಕ ಬೆಳ್ತಂಗಡಿ ಠಾಣೆಗೆ ಹಾಜರುಪಡಿಸಿದ್ದಾರೆ. ಅಲ್ಲಿ ವಿಚಾರಣೆ ನಡೆಸಿದ ಪೊಲೀಸರು ಯುವಕ ಯುವತಿಯರ ಪೋಷಕರನ್ನು ಕರೆಸಿ ಬುದ್ದಿವಾದ ಹೇಳಿ ಕಳುಹಿಸಿದ್ದಾರೆನ್ನಲಾಗಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.