ಕುಂಭಶ್ರೀ ಆಂಗ್ಲ ಮಾಧ್ಯಮ ವಸತಿ ಶಾಲೆ, ಕಾಲೇಜು ಇದರ ವತಿಯಿಂದ ಮಾತಾ ಪಿತಾ ಗುರುದೇವೋಭವ ವಿಶೇಷ ಕಾರ್ಯಕ್ರಮ

ಕುಂಭಶ್ರೀ ಆಂಗ್ಲ ಮಾಧ್ಯಮ ವಸತಿ ಶಾಲೆ, ಕಾಲೇಜು ಇದರ ವತಿಯಿಂದ ಮಾತಾ ಪಿತಾ ಗುರುದೇವೋಭವ ವಿಶೇಷ ಕಾರ್ಯಕ್ರಮ ಜ.‌6 ರಂದು ವೇಣೂರು ರಸ್ತೆಯ ಕಾಲೇಜಿನ ಕ್ಯಾಂಪಸ್ ನಲ್ಲಿ ನಡೆಯಿತು.

ಕಾರ್ಯಕ್ರಮ ದ ಹೃದಯಸ್ಪರ್ಶಿ ಮಾತುಗಳನ್ನು ಬೆಳ್ತಂಗಡಿಯ ನ್ಯಾಯವಾದಿ, ನೋಟರಿ ಪಬ್ಲಿಕ್ ಮುರಳಿ ಬಲಿಪ ನಡೆಸಿಕೊಟ್ಟರು.

ಮುಖ್ಯ ಅತಿಥಿಗಳಾಗಿ ತಹಶಿಲ್ದಾರ ಗಣಪತಿ ಶಾಸ್ತ್ರಿ, ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಕುಕ್ಕೇಡಿ ಗ್ರಾ.ಪಂ ಅಧ್ಯಕ್ಷೆ ತೇಜಾಕ್ಷಿ, ಉಪಾಧ್ಯಕ್ಷೆ ಅಶೋಕ್ ಪಾಣೂರು, ಜಿ.ಪಂ ಸದಸ್ಯರುಗಳಾದ  ಧರಣೇಂದ್ರ ಕುಮಾರ್, ಶೇಖರ್ ಕುಕ್ಕೇಡಿ, ಪತ್ರಕರ್ತ ಪದ್ಮನಾಭ ಕುಲಾಲ್, ಸಿವಿಲ್‌ ಇಂಜಿನಿಯರ್,‌ಮೂಲ್ಯರ ಯಾನೆ ಕುಂಬಾರ ಸೇವಾ ಸಂಘದ ಅಧ್ಯಕ್ಷ ಹರೀಶ್ ಕಾರಿಂಜ, ಛಾಯಾಗ್ರಾಹಕರ ಸಂಘದ ಅಧ್ಯಕ್ಷ‌ ಸುರೇಶ್ ಗೌಡ ಕೌಡಂಗೆ, ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಎಸ್ ಜಯರಾಮ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರವೀಣ್ ಪೂಜಾರಿ ಮಾಡ, ಕಲಾವಿದ ಅನೀಶ್ ಅಮೀನ್, ಮೊದಲಾದವರು ಉಪಸ್ಥಿತರಿದ್ದರು.

ಶಾಲಾ ಸಂಚಾಲಕ ಗಿರೀಶ ಕೆ.‌ಎಚ್, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಉಷಾ ಜಿ, ಪದವಿ ಪೂರ್ವ ಕಾಲೇಜು ವಿಭಾಗದ ಪ್ರಾಂಶುಪಾಲ ರಕ್ಷಿತ್ ಕುಲಾಲ್, ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಶೋಭಾ ಎಲ್ ಎನ್ ರಾವ್, ಕುಂಭಶ್ರೀ ಮಹಿಳಾ ಮಂಡಲ ಅಧ್ಯಕ್ಷೆ ಮಲ್ಲಿಕಾ ಹೆಗ್ಡೆ, ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಅಕ್ಷತಾ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಹರೀಶ್ ಕುಮಾರ್ ಪೊಕ್ಕಿ, ಪದವಿ ಪೂರ್ವ ಅಭಿವೃದ್ಧಿ ಸಮಿತಿ ಅಧ್ಯಕ್ಷ ಲೋಕೇಶ್ , ಗ್ರಾ. ಯೋ. ಮೇಲ್ವಿಚಾರಕ ಯೋಗೀಶ್, ವೇಣೂರು ಮಹಿಳಾ ಮಂಡಳಿ ಅಧ್ಯಕ್ಷೆ ಶೈಲಜಾ ಎಸ್ ಭಟ್ ಕಾಮೆಟ್ಟು, ಕುಂಡದಬೆಟ್ಟು ಮಂಜುಶ್ರೀ ಭಜನಾ ಮಂಡಳಿ ಅಧ್ಯಕ್ಷ ಭರಥ ರಾಜ್ ಕೆ, ಗೋಳಿಯಂಗಡಿ ಕುಲಾಲ ಸಂಘದ ಅಧ್ಯಕ್ಷ ಹರೀಶ್ ಕುಲಾಲ್, ವೇಣೂರು ಭಂಡಾರಿ ಸಮಾಜ ಸೇವಾ ಸಂಘದ ಸುಧೀರ್, ನವೋದಯ ಸಹಕಾರಿ ಬ್ಯಾಂಕ್ ವ್ಯವಸ್ಥಾಪಕ ನಿತೀಶ್ ಹೆಚ್, ಕುಕ್ಕೇಡಿ- ನಿಟ್ಟಡೆ ಬ್ರಹ್ಮ ಶ್ರೀ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷ ಸದಾನಂದ ಪೂಜಾರಿ,  ಕುಕ್ಕೇಡಿ- ನಿಟ್ಟಡೆ ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಪ್ರಶಾಂತ್ ಕೆ ಉಪಸ್ಥಿತರಿದ್ದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.