ಅಖಿಲ ಭಾರತ ಮುಷ್ಕರಕ್ಕೆ ಅಂಗನವಾಡಿ ನೌಕರರ ಬೆಂಬಲ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಕೇಂದ್ರ ಕಾರ್ಮಿಕ ಸಂಘಟನೆಗಳು ಜಂಟಿಯಾಗಿ ಕೇಂದ್ರ ಸರಕಾರದ ಜನ ವಿರೋಧಿ, ಕಾರ್ಮಿಕ ವಿರೋಧಿ ನೀತಿಗಳ ವಿರುದ್ದ, ಖಾಸಗೀಕರಣ ನೀತಿಗಳಿಂದ ಸಾರ್ವಜನಿಕ ರಂಗಗಳ ನಾಶ ಮಾಡುವ ಸರಕಾರ ದೋರಣೆಯನ್ನು ಖಂಡಿಸಿ, ಕನಿಷ್ಟ ವೇತನ ಮಾಸಿಕ ರೂ.21,000 ಜಾರಿಗಾಗಿ ಬೆಲೆ ಏರಿಕೆ, ಖಾಸಗೀಕರಣಕ್ಕೆ ಕಡಿವಾಣ, ಉದ್ಯೋಗವಕಾಶ ಹೆಚ್ಚಳ ಜ.8 ರಂದು ನಡೆಸಲು ಉದ್ದೇಶಿಸಿದ ಅಖಿಲ ಭಾರತ ಮುಷ್ಕರವನ್ನು ಬೆಳ್ತಂಗಡಿ ತಾಲೂಕು ಅಂಗನವಾಡಿ ನೌಕರರು ಬೆಂಬಲಿಸಿ ಮುಷ್ಕರ ನಡೆಸಲಿದ್ದಾರೆ ಎಂದು ಸಂಘದ ಅಧ್ಯಕ್ಷೆ ಗಾಯತ್ರಿ ದೇವಿ ಹೇಳಿದರು.

ಅಂಗನವಾಡಿ ನೌಕರರಿಗೆ ಪ್ರತಿ ತಿಂಗಳು ನಿಯಮಿತವಾಗಿ ವೇತನ ಪಾವತಿ ಆಗಬೇಕು. ಮಾಸಿಕ ವೇತನ ರೂ 21,000 ನೀಡಬೇಕು, ಏರಿಕೆ ವೇತನ ಬಾಕಿಯನ್ನು ತಕ್ಷಣ ಪಾವತಿ ಮಾಡಬೇಕು, ನೂತನ ಡಿಜಿಟಲ್(ಆಪ್ ಅಳವಡಿಕೆ) ಪದ್ದತಿಯನ್ನು ಕೈಬಿಡಬೇಕು, ಮಿನಿ ಅಂಗನವಾಡಿಗಳನ್ನು ಮೇಲ್ದರ್ಜೆಗೆ ಏರಿಸಬೇಕು, ಅಂಗನವಾಡಿ ನೌಕರರಿಗೆ ಪಿ.ಎಫ್ ಜಾರಿಗೊಳಿಸಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಈ ಮುಷ್ಕರ ನಡೆಯಲಿದೆ ಎಂದರು.
ಪತ್ರಿಕಾ ಗೋಷ್ಟಿಯಲ್ಲಿ ಸಲಹೆಗಾರ ಬಿ.ಎಂ ಭಟ್, ಕೋಶಾಧಿಕಾರಿ ಸುಮಿತ್ರ, ಕಾರ್ಯದರ್ಶಿ ಕುಸುಮ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.