ಅಡಿಕೆ ಕೊಯ್ಲು; ಬೊರ್ಡೋ ದ್ರಾವಣ ಸಿಂಪಡಣೆಗೆ ಹೈಟೆಕ್ ಧೋಟಿ ಆವಿಷ್ಕಾರ-ಪ್ರಾತ್ಯಕ್ಷಿಕೆ

ಧರ್ಮಸ್ಥಳ: ಹಾಸನದ ಬಾಲ ಸುಬ್ರಹ್ಮಣ್ಯ ಅವರು ನೂತನವಾಗಿ ಅವಿಷ್ಕಾರ ಮಾಡಿದ ಅಡಿಕೆ ಕೊಯ್ಲು ಹೈಟೆಕ್ ಧೋಟಿ ಹಾಗೂ ಅಡಿಕೆ ತೋಟಕ್ಕೆ ಬೋರ್ಡೋ ದ್ರಾವಣ ಸಿಂಪಡಿಕೆ ಮಾಡುವ ಉಪಕರಣದ ಪ್ರಾತ್ಯಕ್ಷಿತೆ ಜ.೩ ರಂದು ಧರ್ಮಸ್ಥಳ ಸಮೀಪದ ಹರಪ್ಪಾಡಿ ತೋಟದಲ್ಲಿ ಜರುಗಿತು.

ಆವಿಷ್ಕಾರ ಮಾಡಿದ ಬಾಲಸುಬ್ರಹ್ಮಣ್ಯ ಅವರು ಮಾಹಿತಿ ನೀಡಿ ಅಡಿಕೆ ಕೋಯ್ಲು ಧೋಟಿಯನ್ನು ಸಾಮಾನ್ಯ ಕೂಲಿ ಕಾರ್ಮಿಕನು ಬಳಸಬಹುದು. ಯಾವುದೇ ಎತ್ತರಕ್ಕೆ ಬೇಕಾದರೂ ೮ ರಿಂದ ೮೦ ಅಡಿಯವರೆಗಿನ ಅಡಿಕೆಯನ್ನು ಕೊಯ್ಲು ಬಲ್ಲ ಉಪಕರಣ ಮಾಡಿದ್ದೇನೆ. ಈ ಯಂತ್ರದಲ್ಲಿ ಮರ ಹತ್ತುವ ಅಗತ್ಯವಿಲ್ಲ, ನೆಲದಿಂದಲೇ ಅಡಿಕೆಯನ್ನು ಕೊಯ್ಲು ಮಾಡಬಹುದು ಎಂದು ಮಾಹಿತಿ ನೀಡಿದರು.


ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಪ್ರಾತ್ಯಕ್ಷಿತೆಯನ್ನು ವೀಕ್ಷಿಸಿ ಮಾತನಾಡಿ ಸಂಶೋಧನೆಗಳಿಗೆ ಪ್ರೋತ್ಸಾಹ ಕೊಡಬೇಕು. ಬಾಲಸುಬ್ರಹ್ಮಣ್ಯ ಮಾಡಿದ ಅವಿಷ್ಕಾರ ಉತ್ತಮವಾಗಿದೆ. ಇದರಲ್ಲಿ ಖರ್ಚು ಕಡಿಮೆ, ಸಣ್ಣ ಕೃಷಿಕರಿಂದ ದೊಡ್ಡ ಕೃಷಿಕರಿಗೆ ಉಪಯೋಗವಾಗಬಹುದು ಇದನ್ನು ಎ.ಆರ್.ಡಿಎಫ್.ಗೆ ಶಿಫಾರಸ್ಸು ಮಾಡಿ ಕೃಷಿಕರಿಗೆ ಹೆಚ್ಚಿನ ಅನುಕೂಲ ಒದಗಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ಈ ಸಂದರ್ಭ ಡಿ. ಹರ್ಷೇಂದ್ರ ಕುಮಾರ್, ಧರ್ಮಸ್ಥಳ ಕೃಷಿ ವಿಭಾಗದ ಮೇಲ್ವಾಚಾರಕ ಬಾಲಕೃಷ್ಣ ಪೂಜಾರಿ, ಸ್ಥಳೀಯ ರೈತರು ಉಪಸ್ಥಿತರಿದ್ದರು. ಹೊಸ ಉಪಕರಣದಿಂದ ಅಡಿಕೆ ಹೊನೆ ಕೋಯ್ಲು ಮತ್ತು ಔಷದಿಯ ಸ್ಪ್ರೇಯ ಪ್ರಾತ್ಯಕ್ಷಿಕೆ ನೀಡಲಾಯಿತು.

ಹೆಚ್ಚಿನ ಮಾಹಿತಿಗಾಗಿ :9606142920,7259390487

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.