ಉಪನ್ಯಾಸಕಿ ಈಗ ಹೈನೋದ್ಯಮಿ..! ದಿನಕ್ಕೆ 200 ಲೀ. ಹಾಲು ಉತ್ಪಾದಿಸುತ್ತಿರುವ ಅಳದಂಗಡಿಯ ಮೋನಿಕಾ ಡಿಸೋಜಾ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಶೈಕ್ಷಣಿಕವಾಗಿ ಬಿ.ಕಾಂ-ಬಿಇಡಿ- ಎಂ. ಕಾಂ ಪದವೀಧರೆಯಾಗಿದ್ದು, ಉದ್ಯೋಗದಲ್ಲಿ ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ 16 ವರ್ಷಗಳ ಕಾಲ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿರುವ ಅಳದಂಗಡಿ ಬಡಗಕಾರಂದೂರು ಗ್ರಾಮದ ಚರ್ಚ್ ಸನಿಹದ ನಿವಾಸಿನಿ ಮೋನಿಕಾ ಡಿಸೋಜಾ ಈಗ ಹುಟ್ಟೂರಿನಲ್ಲಿ ಮಾದರಿ ಹೈನೋದ್ಯಮಿ.

ಉಪನ್ಯಾಸಕಿ ವೃತ್ತಿ, ನಗರದ ಜಂಜಾಟದ ಕೃತಕ ಬದುಕನ್ನು ತೊರೆದು ಮತ್ತೆ ಊರಿಗೆ ಮರಳಿದ ಈಕೆ ಇದೀಗ ೪ ತಳಿಗಳ ಒಟ್ಟು 27 ಜಾನುವಾರುಗಳನ್ನು ಸಾಕುತ್ತಾ ದಿನಕ್ಕೆ 200 ಲೀ. ಹಾಲು ಉತ್ಪಾದನೆ ಮಾಡುತ್ತಿದ್ದಾರೆ. ಜಾನುವಾರುಗಳ ಜೊತೆಗೇ ಬೆರೆಯುತ್ತಾ ಸಂತೋಷ ಕಂಡುಕೊಳ್ಳುವುದರೊಂದಿಗೆ ಈಗ ಸ್ವ ಉದ್ಯಮದಿಂದ ಸಾಕಷ್ಟು ಆದಾಯ ಗಳಿಸಿಕೊಂಡು ತೃಪ್ತಿದಾಯಕ ಜೀವನ ನಡೆಸುತ್ತಿದ್ದಾರೆ. ಆಶ್ಚರ್ಯವಾದರೂ ಇದು ಸತ್ಯ.

ಉಜಿರೆ ಅನುಗ್ರಹ ವಿದ್ಯಾ ಸಂಸ್ಥೆಯಲ್ಲಿ ಯುಕೆಜಿಯಿಂದ 10 ನೇ ತರಗತಿವರೆಗೆ ಓದಿದ ಮೋನಿಕಾ, ಮಂಗಳೂರಿನಲ್ಲಿ ಸೈಂಟ್ ಆಗ್ನೇಸ್‌ನಲ್ಲಿ ಬಿಕಾಂ ಡಿಗ್ರಿ ಮುಗಿಸಿದ್ದಾರೆ. ಮೈಸೂರು ವಿ.ವಿ ಯಿಂದ ಬಿಇಡಿ, ಇಂದಿರಾಗಾಂಧಿ ಮುಕ್ತ ವಿ.ವಿ ಯಿಂದ ಎಂ.ಕಾಂ ಪದವಿ ಪಡೆದು 16 ವರ್ಷಗಳ ಕಾಲ ಬೆಂಗಳೂರಿನ ರಾಮಮೂರ್ತಿ ನಗರ ಸೈಂಟ್ ಆನ್ಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿ ಇದೀಗ ಕಳೆದ 2 ವರ್ಷಗಳಿಂದ ಮನೆಗೆ ಮರಳಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಹೈನುಗಾರಿಕೆ ಜೊತೆಗೆ ಮೋನಿಕಾ ಡಿಸೋಜಾ ತಮ್ಮ ಮನೆಯಲ್ಲಿ ವೀಳ್ಯದೆಲೆ, ಹಸಿರು ತರಕಾರಿ ಬೆಳೆಯುವುದರಲ್ಲೂ ನಿರತರಾಗಿದ್ದಾರೆ. ಕೃಷಿಯ ಬಗ್ಗೆ ಅಪಾರ ಆಸಕ್ತಿ ಮತ್ತು ಕುತೂಹಲ ಹೊಂದಿದ್ದು ಅನೇಕ ಪ್ರಯೋಗಗಳನ್ನು ಪ್ರಾರಂಭಿಸಿದ್ದಾರೆ. ಮನೆಯ ಸುತ್ತ ಗಾರ್ಡನಿಂಗ್ ಕೂಡ ಅವರ ಆಸಕ್ತಿಯ ಕ್ಷೇತ್ರ.
ಹುಟ್ಟಿದ ಊರಿನಲ್ಲಿ ಏನಾದರೊಂದು ಮಾಡಬೇಕೆಂಬ ಹಂಬಲ:
ಪದವಿ ಓದಿದವರು ವಿದೇಶದಲ್ಲಿ ಕೆಲಸ ಮಾಡಬೇಕೆಂದು ಬಯಸುವುದು ಸರ್ವೇ ಸಾಮಾನ್ಯ. ಆದರೆ ಮೋನಿಕಾ ಮಾತ್ರ ತಾನು ಹುಟ್ಟಿದ ಊರಿಗೆ ಮರಳಿ ಬಂದು ಏನಾದರೊಂದು ಸ್ವಂತ ಉದ್ಯಮ ಪ್ರಾರಂಭಿಸಬೇಕೆಂಬ ಉದ್ದೇಶದಿಂದ, ಉತ್ತಮ ವೇತನ ಕೈಸೇರುವ ಉಪನ್ಯಾಸಕಿ ವೃತ್ತಿ ತೊರೆದು ನೇರವಾಗಿ ಅಳದಂಗಡಿಯ ತನ್ನ ಹುಟ್ಟೂರು ಸೇರಿಕೊಂಡಿದ್ದಾರೆ. ಉದ್ಧೇಶದತ್ತ ಹೆಜ್ಜೆಇಡುತ್ತಿದ್ದು ಪ್ರಾರಂಭಿಕ ಯಶಸ್ಸೂ ಪಡೆದಿದ್ದಾರೆ.

ಹೆತ್ತವರ ಸೇವೆಯ ಭಾಗ್ಯವೂ ಈಡೇರಿದ ತೃಪ್ತಿ:
ಸಿಂಡಿಕೇಟ್ ಬ್ಯಾಂಕ್ ಅಧಿಕಾರಿಯಾಗಿ ಸ್ವಯಂ ನಿವೃತ್ತಿ ಪಡೆದು ಪ್ರಸ್ತುತ ಸಹಕಾರಿ ಕ್ಷೇತ್ರದಲ್ಲಿ ಉತ್ತಮ ಪ್ರಸಿದ್ಧಿ ಗಳಿಸಿಕೊಂಡಿರುವ ಗುರುವಾಯನಕೆರೆ ವಿಕಾಸ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾಗಿರುವ ತಂದೆ ಎಲೋಶಿಯಸ್ ಡಿಸೋಜಾ, ತಾಯಿ, ಗೃಹಿಣಿ ವಿನ್ನಿ ಡಿಸೋಜಾ ಅವರ ಜೊತೆ ಮೋನಿಕಾ-ಆನಂದ ಸಿಕ್ವೇರಾ ದಂಪತಿ ಇದೀಗ ನೆಲೆಸಿದ್ದಾರೆ. ಜಾನುವಾರುಗಳ ಆರೈಕೆ, ಹಟ್ಟಿ ಕೆಲಸ, ಪೂರಕ ಇತರ ಕೆಲಸಕಾರ್ಯಗಳ ಒತ್ತಡದ ನಡುವೆಯೂ ತಂದೆ ತಾಯಿಯ ಸೇವೆಯ ಜೊತೆಗೆ, ಈಗ ೯೫ ರ ಇಳಿ ವಯಸ್ಸಿನಲ್ಲಿರುವ ಅಜ್ಜಿ (ತಂದೆಯ ತಾಯಿ) ಅಪೋಲಿನ್ ಡಿಸೋಜಾ ಅವರನ್ನು ಆರೈಕೆ ಮಾಡುವ ಭಾಗ್ಯವನ್ನೂ ಪಡೆದುಕೊಂಡಿದ್ದಾರೆ. ಮೋನಿಕಾ ಪತಿ ಆನಂದ್ ಸಿಕ್ವೇರಾ ಎಲೆಕ್ಟ್ರಾನಿಕ್ಸ್ ಉಪಕರಣಗಳ ಪ್ರಖ್ಯಾತ ಕಂಪೆನಿಗಳಾದ ಓರಿಯಂಟಲ್ ಮತ್ತು ಹೇವೆಲ್ಸ್ ಕಂಪೆನಿಯಲ್ಲಿ ಕೆಲಸದಲ್ಲಿದ್ದವರು ಇದೀಗ ಬೆಂಗಳೂರು ತೊರೆದು ಪತ್ನಿಗೆ ಪೂರಕ ಸಹಕಾರ ನೀಡುತ್ತಿದ್ದಾರೆ.

ಸೆಗಣಿ ಒಣಗಿಸಿ ಗೊಬ್ಬರವಾಗಿ ಮಾರಾಟ:
ಜಾನುವಾರುಗಳ ಹಟ್ಟಿಯಿಂದ ದಿನಕ್ಕೆ 30ಬುಟ್ಟಿ ಯಷ್ಟು ಸಂಗ್ರಹವಾಗುವ ಸೆಗಣಿಯನ್ನು ಗೊಬ್ಬರದ ಗುಂಡಿ ನಿರ್ಮಿಸಿ ಅಲ್ಲಿ ಶೇಖರಿಸುತ್ತಾರೆ. ಅದನ್ನು ಬಿಸಿಲಿಗೆ ಒಣಗಿಸಿ ಪುಡಿ ಮಾಡಿ ಮಾರಾಟ ಮಾಡುತ್ತಾರೆ. ಇದಕ್ಕಾಗಿ ಇತ್ತೀಚೆಗೆ 15-20 ದಿನಗಳ ಹಿಂದೆ ಹೊಸದಾಗಿ ನಿರ್ಮಿಸಿರುವ ಸೆಗಣಿ ನಿರ್ವಹಣೆ ಹೊಂಡದಿಂದ ಕನಿಷ್ಠ ದಿನದಲ್ಲೇ 700 ರಿಂದ 800 ಬುಟ್ಟಿಯಷ್ಟು ಗೊಬ್ಬರ ಮಾರಾಟ ಮಾಡಿ ಆದಾಯ ಸಂಪಾದಿಸಿದ್ದಾರೆ.

4 ಗಂಟೆಗೆ ಪ್ರಾರಂಭವಾಗುವ ದಿನಚರಿ:
ಮೋನಿಕಾ ಡಿಸೋಜಾ ಅವರ ದಿನಚರಿ ಬೆಳಿಗ್ಗೆ 4 ಗಂಟೆಗೆ ಪ್ರಾರಂಭವಾಗುತ್ತದೆ. ಅವರ ಜೊತೆ ಹಟ್ಟಿ ನೋಡಿಕೊಳ್ಳಲು, ಹಾಲು ಕರೆಯಲು 5 ಜನ ಕೆಲಸದಾಳುಗಳು ಇದ್ದಾರೆ. ರಾಯಚೂರು ಮೂಲದ ಎರಡು ಕುಟುಂಬಕ್ಕೆ ಅವರು ತಮ್ಮ ಜಾಗದಲ್ಲೇ ಪ್ರತ್ಯೇಕ ಮನೆ ನಿರ್ಮಿಸಿ ಕೊಟ್ಟಿದ್ದಾರೆ.
ಬೆಳಗ್ಗೆದ್ದು ಹಟ್ಟಿ ಸ್ವಚ್ಛಮಾಡಿ ಹಸುಗಳನ್ನು ತೊಳೆದು ಬಳಿಕ ಯಂತ್ರಗಳ ಮತ್ತು ಕೈಯಿಂದ ಹಾಲು ಕರೆಯುತ್ತಾರೆ. ಹುಲ್ಲುಕಟಾವು ಮಾಡಲೂ ಯಂತ್ರಗಳನ್ನೇ ಬಳಸುತ್ತಿದ್ದಾರೆ. ಬೆಳಗ್ಗೆ 7.30 ರ ವೇಳೆಗೆ ಒಂದು ಹಂತದಲ್ಲಿ ಹಟ್ಟಿಕೆಲಸ ಮುಗಿಸಿ ಹಾಲು ಸೊಸೈಟಿಗೆ ಹಾಲು ಸರಬರಾಜು ಮಾಡುತ್ತಾರೆ. ಈಗ ದಿನವಹಿ 180 ರಿಂದ 200 ಲೀಟರ್ ಹಾಲು ಉತ್ಪಾದನೆ ಮಾಡುತ್ತಾರೆ. ಡೈರಿಗೆ ಹಾಲು ಹಾಕುವುದರ ಜೊತೆಗೆ ಸ್ವಲ್ಪ ಹಾಲನ್ನು ಸ್ಥಳೀಯವಾಗಿಯೂ ಮಾರಾಟ ಮಾಡುತ್ತಿದ್ದಾರೆ.

3 ಹಸುಗಳಿಂದ ಪ್ರಾರಂಭವಾದದ್ದು ಈಗ 27 ಕ್ಕೆ ಏರಿಕೆ:
ಕೇವಲ ೩ ಹಸುಗಳೊಂದಿಗೆ ತನ್ನ ಹೈನುಗಾರಿಕೆಯ ಚೈತ್ರ ಯಾತ್ರೆ ಆರಂಭಿಸಿದ ಮೋನಿಕಾ ಅವರ ಬಳಿ ಇದೀಗ ಹೋಲ್ಸ್ಟೈನ್, ಜರ್ಸಿ, ಓಸ್ಟೀನ್ ಮತ್ತು ಗಿರ್ ಎಂಬ ೪ ತಳಿಗಳು ಇವೆ . ಈಗ ಅವರ ಹಟ್ಟಿಯಲ್ಲಿ ಇರುವ ಒಟ್ಟು ಹಸುಗಳ ಸಂಖ್ಯೆ 27. ಪ್ರಾರಂಭದಲ್ಲಿ 3 ಲೀ. ಹಾಲಿನಿಂದ ಪ್ರಾರಂಭಿಸಿದ ಅವರ ಕನಸು ಈಗ 200 ಲೀಟರ್ ಉತ್ಪಾದನೆ ಪರಿದಿ ದಾಟಿದೆ. ಈ ಎಲ್ಲ ಸಾಧನೆ ಹೇಗೆ ಸಾಧ್ಯವಾಯಿತು ಎಂದು ಕೇಳಿದರೆ ಇದಕ್ಕೆಲ್ಲಾ ಮೂಲ ಪ್ರೇರಣೆಯಾದ ತಂದೆ ಮತ್ತು ತಾಯಿ, ಪತಿ ಮತ್ತು ಬಂಧುಗಳ ಪ್ರೋತ್ಸಾಹ, ವಿಶೇಷವಾಗಿ ಹೈನುಗಾರಿಕಾ ತಜ್ಞರಾದ ಡಾ. ದಿನೇಶ್ ಸರಳಾಯ ಅವರ ಸಂಪೂರ್ಣ ಮಾರ್ಗದರ್ಶನವನ್ನು ಮನಸಾರೆ ಕೊಂಡಾಡುತ್ತಾರೆ. ಕೃತಜ್ಞತಾ ಭಾವದಿಂದ ನೆನೆಯುತ್ತಾರೆ.
ಕಾರ್ಗಿಲ್ ಪಶು ಆಹಾರ ಬಳಕೆ:
ಜಾನುವಾರುಗಳಿಗೆ ಅವರು ಪಶು ಆಹಾರವಾಗಿ ಇತ್ತೀಚೆಗೆ ಮಾರುಕಟ್ಟೆಗೆ ಬಂದಿರುವ ಅತ್ಯುತ್ತಮ ಇಳುವರಿ ಕೊಡುವ ಕಾರ್ಗಿಲ್ ಪಶು ಆಹಾರ ಬಳಸುತ್ತಾರೆ. ಇತರವಾಗಿ ನಂದಿನಿ ವರೈಟಿಯ ಲಕ್ಷ್ಮೀ, ಗೋದಿ ಬೂಸ, ಜೋಳ ಬೂಸ ಬಳಸುತ್ತಾರೆ. ತಮ್ಮ ಜಾಗದಲ್ಲೇ ಹಸುಗಳಿಗಾಗಿ ಹಸಿರು ಹುಲ್ಲು ಬೆಳೆಯುತ್ತಿದ್ದಾರೆ. ತಮ್ಮ ಬಾಬ್ತು ಗದ್ದೆಯ ಸ್ವಲ್ಪ ಭಾಗವನ್ನು ಹುಲ್ಲು ಬೆಳೆಯಲು ಮೀಸಲಿಟ್ಟಿದ್ದು, ಒಂದೆರಡು ಎಕ್ರೆ ಜಾಗ ಪಕ್ಕದವರಿಂದ ಲೀಸ್‌ಗೂ ಪಡೆದಿದ್ದಾರೆ.
ಗ್ರೀನ್ ಹೌಸ್ ಕನಸುಗಾರ್ತಿ ಮೋನಿಕಾ:
ತಂದೆ ಬ್ಯಾಂಕ್ ಅಧಿಕಾರಿಯಾಗಿದ್ದರೂ ಅವರ ಮನೆ ಹುಟ್ಟು ಕೃಷಿಕರ ಮನೆ. ಆರಂಭದಿಂದಲೇ ಕೃಷಿ ಪರಂಪರೆಯ ಸುತ್ತ ಬಳೆದು ಬಂದಿರುವ ಮೋನಿಕಾ ಇಂದು ಹೈನುಗಾರಿಕೆ ಬಗ್ಗೆ ಮೂಲ ಪ್ರೇರಣೆ ಪಡೆದು ಮುಂದಕ್ಕೆ, ಕೃಷಿ ಸಂಶೋಧನೆ, ಪ್ರಯೋಗಗಳ ಬಗ್ಗೆ ಅಪಾರ ಒಲವು ಹೊಂದಿದ್ದಾರೆ. ಈ ಭಾಗದಲ್ಲಿ ಸಾವಯವ ಗೊಬ್ಬರ ಮೂಲದಿಂದಲೇ ತಯಾರಿಸಿದ ತರಕಾರಿಗಳ ಬಗ್ಗೆ ಜನರಲ್ಲಿ ಅತೀವ ಆಸಕ್ತಿ ಇರುವುದನ್ನು ಮನಗಂಡಿರುವ ಅವರು ಮುಂದಕ್ಕೆ ತಮ್ಮ ಮನೆಯ ಪಕ್ಕದಲ್ಲೇ “ಗ್ರೀನ್ ಹೌಸ್” ನಿರ್ಮಿಸಿ ಅದರಲ್ಲಿ ತರಕಾರಿ ಬೆಳೆಯುವ ಮಹತ್ವಾಕಾಂಕ್ಷೆ ಹೊಂದಿದ್ದಾರೆ. ಅದಕ್ಕಾಗಿ ಸ್ವಲ್ಪ ಜಾಗವನ್ನು ಮೀಸಲಿರಿಸಿಕೊಂಡಿದ್ದು ಸದ್ಯದಲ್ಲೇ ಕನಸನ್ನು ಸಾಕಾರಗೊಳಿಸುವಲ್ಲಿ ಕ್ರಿಯಾಯೋಜನೆ ರೂಪಿಸಿಕೊಂಡಿದ್ದಾರೆ.
ಮೋನಿಕಾ ಡಿ ಸೋಜಾ ಮೊ.: 98808907013

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.