ಬೆಳ್ತಂಗಡಿ ತಾ.ಪಂ ಸಾಮಾನ್ಯ ಸಭೆ

ಬೆಳ್ತಂಗಡಿ: ಬೆಳ್ತಂಗಡಿ ತಾ.ಪಂ ಸಾಮಾನ್ಯ ಸಭೆ ಅಧ್ಯಕ್ಷೆ ದಿವ್ಯಜ್ಯೋತಿ ಅವರ ಅಧ್ಯಕ್ಷತೆಯಲ್ಲಿ ಜ.2 ರಂದು ತಾ.ಪಂ ಸಭಾಂಗಣದಲ್ಲಿ ನಡೆಯಿತು. ಉಪಾಧ್ಯಕ್ಷೆ  ವೇದಾವತಿ, ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಧರ ಕಲ್ಮಂಜ, ಕಾರ್ಯನಿರ್ವಹಣಾಧಿಕಾರಿ ಜಯರಾಮ್, ಉಪಸ್ಥಿತರಿದ್ದರು.
ಸಭೆಯಲ್ಲಿ ಅಬಕಾರಿ ಇಲಾಖೆ ಬಗ್ಗೆ ದೀರ್ಘ ಚರ್ಚೆ ನಡೆಯಿತು. ಬಂದಾರು, ಮೈರೋಳ್ತಡ್ಕದಲ್ಲಿ ಅಕ್ರಮ ಮದ್ಯ ಮಾರಾಟಗಾರರ ಮೇಲೆ ಕ್ರಮ ಕೈಗೊಳ್ಳದಿರುವ ವಿಷಯವನ್ನು ಕೃಷ್ಣಯ್ಯ ಆಚಾರ್ಯ ಪ್ರಸ್ತಾವಿಸಿದರು.

ಅಬಕಾರಿ ಇಲಾಖೆಗೆ ಮಾಹಿತಿ ನೀಡಿದರೆ ಕಚೇರಿಯಿಂದ ಮಾರಾಟದಾರರಿಗೆ ಫೋನ್ ಹೋಗುತ್ತದೆ ಎಂದು ಶಶಿಧರ ಕಲ್ಮಂಜ ಆರೋಪಿಸಿದಾಗ ಮಾತನಾಡಿದ ಅಬಕಾರಿ ಇನ್ಸ್ ಸ್ಪೆಕ್ಟರ್  ಸೌಮ್ಯಲತಾ ಅವರು ನೀವು ಬಾಯಿಗೆ ಬಂದಂತೆ ಮಾತನಾಡಬೇಡಿ ಎಂದು ಹೇಳಿದಾಗ ಇದಕ್ಕೆ ಇತರ ಸದಸ್ಯರು ತೀವ್ರ ಆಕ್ಷೇಪ ಸಲ್ಲಿಸಿದರು.ಈ ಸಂದರ್ಭ ಸಭೆಯಲ್ಲಿದ್ದ ಸೌಮ್ಯಲತಾ ಅವರು ದುಃಖಿತರಾಗಿ ಸಭೆಯಿಂದ ಹೊರ ನಡೆದು ಸ್ವಲ್ಪ ಹೊತ್ತಿನ ಬಳಿಕ ಆಗಮಿಸಿದರು. ಸಭಾ ತ್ಯಾಗ ಮಾಡಿದ ಅಧಿಕಾರಿ ಮೇಲೆ ಕಾನೂನು ಕ್ರಮಕ್ಕೆ ಸದಸ್ಯರು ಆಗ್ರಹಿಸಿದರು.

ಈ ಸಂದರ್ಭ ಮಾತನಾಡಿದ ಇ.ಒ ಜಯರಾಮ್ ಅಧಿಕಾರಿಗಳು ಯಾವುದೇ ಚರ್ಚೆಯನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಬಾರದು ಅಭಿವೃದ್ಧಿ ಚರ್ಚೆಗೆ ಸಹಕರಿಸಬೇಕು ಎಂದು ಸಲಹೆಯಿತ್ತರು. ವಿವಿಧ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಯಿತು.
ತಾ.ಪಂ ಲೆಕ್ಕ ಅಧೀಕ್ಷಕ ಗಣೇಶ್ ಪೂಜಾರಿ, ತಾ.ಪಂ ಸದಸ್ಯರು. ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು. ಜಯನಂದ ಸ್ವಾಗತಿಸಿ, ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.