ಜಿಲ್ಲಾ ಯುವಜನ ಮೇಳ ಆಚರಣಾ ಸಮಿತಿ ಬಳಂಜ ಗೌರವಾಧ್ಯಕ್ಷರಾಗಿ ಶಾಸಕ ಹರೀಶ್ ಪೂಂಜ, ಅಧ್ಯಕ್ಷರಾಗಿ ವಿನು ಬಳಂಜ

ಬಳಂಜ: ದ.ಕ ಜಿಲ್ಲಾ ಪಂಚಾಯತ್ ಮಂಗಳೂರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು, ದ.ಕ ಜಿಲ್ಲಾ ಪಂಚಾಯತ್, ತಾ.ಪಂ ಬೆಳ್ತಂಗಡಿ, ಗ್ರಾ. ಪಂ ಬಳಂಜ, ದ.ಕ ಜಿಲ್ಲಾ ಯುವಜನ ಒಕ್ಕೂಟ, ತಾಲೂಕು ಯುವ ಜನ ಒಕ್ಕೂಟ ಬೆಳ್ತಂಗಡಿ, ಶ್ರೀ.ಕ್ಷೇ. ಧ. ಗ್ರಾ. ಯೋಜನೆ ಹಾಗೂ ಶ್ರೀ ಉಮಾಮಹೇಶ್ವರ ಯುವಕ ಮಂಡಲ ಬಳಂಜ ಇವರ ಸಂಯುಕ್ತ ಆಶ್ರಯದಲ್ಲಿ ನಡೆಯುವ ಜಿಲ್ಲಾ ಮಟ್ಟದ ಯುವ ಜನ ಮೇಳ ಆಚರಣಾ ಸಮಿತಿ ಬಳಂಜ ಇದರ ರಚನೆಯು ಶಾಸಕ ಹರೀಶ್ ಪೂಂಜ ಮುಂದಾಳತ್ವದಲ್ಲಿ ಡಿ.29 ರಂದು ಬಳಂಜ ಶಾಲೆಯಲ್ಲಿ ನಡೆಯಿತು.

2020 ಜ.18, 19 ರಂದು ಬಳಂಜ ಶಾಲೆಯಲ್ಲಿ ನಡೆಯುವ ಯುವಜನ ಮೇಳದ ಜಿಲ್ಲಾ ಮಟ್ಟದ ಯುವಜನ ಮೇಳ ಆಚರಣಾ ಸಮಿತಿಯ ಗೌರವಾಧ್ಯಕ್ಷರಾಗಿ ಶಾಸಕ ಹರೀಶ್ ಪೂಂಜ, ಅಧ್ಯಕ್ಷರಾಗಿ ಕಿರುತೆರೆ ನಿರ್ದೇಶಕ ವಿನು ಬಳಂಜ, ಕಾರ್ಯಧ್ಯಕ್ಷರಾಗಿ ಪ್ರಗತಿಪರ ಕೃಷಿಕ ಸಂತೋಷ್ ಕುಮಾರ್ ಕಾಪಿನಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಸುದ್ದಿ ಬಿಡುಗಡೆ ವಾರಪತ್ರಿಕೆಯ ಜಾಹೀರಾತು ವಿಭಾಗದ ಸಂತೋಷ್ ಪಿ. ಕೋಟ್ಯಾನ್ ಬಳಂಜ , ಕೋಶಾಧಿಕಾರಿಯಾಗಿ ಇಕೋಫ್ರೆಶ್ ಎಂಟರ್‌ಪ್ರೈಸಸ್‌ನ ಮಾಲಕ ರಾಕೇಶ್ ಹೆಗ್ಡೆ ಬಳಂಜ , ಜೊತೆ ಕಾರ್ಯದರ್ಶಿಯಾಗಿ ಗಣೇಶ್ ದೇವಾಡಿಗ ಸಂಭ್ರಮ ಬಳಂಜ , ಉಪಾಧ್ಯಕ್ಷರಾಗಿ ಯಶೋಧರ ಶೆಟ್ಟಿ, ವಿಶ್ವನಾಥ ಹೊಳ್ಳ ಮಜ್ಜೆನಿಬೈಲು, ಪ್ರವೀಣ್ ಕುಮಾರ್ ಹೆಚ್.ಎಸ್, ಬಾಲಕೃಷ್ಣ ಪೂಜಾರಿ ಯೈಕುರಿ, ಹೇಮಂತ್ ಕಟ್ಟೆ, ಮಂಗಳ ದೇವಾಡಿಗ ಆಯ್ಕೆಯಾಗಿದ್ದಾರೆ.

ಗೌರವ ಸಲಹೆಗಾರರಾಗಿ ಕೆ. ವಸಂತ ಸಾಲಿಯಾನ್ ಕಾಪಿನಡ್ಕ, ಹೆಚ್. ಧರ್ಣಪ್ಪ ಪೂಜಾರಿ, ಕೆ.ಎ ಉಸ್ಮಾನ್, ಪ್ರಮೋದ್ ಕುಮಾರ್ ಜೈನ್, ಸತೀಶ್ ರೈ ಬಾರ್ದಡ್ಕ, ರಾಧಾಕೃಷ್ಣ ರೈ ಅಟ್ಲಾಜೆ, ತಿಮ್ಮಪ್ಪ ಪೂಜಾರಿ ನಿಟ್ಟಡ್ಕ ನಾಲ್ಕೂರು, ಚಂದ್ರರಾಜ ಪೂವಣಿ, ಚಂದ್ರಶೇಖರ್ .ಪಿ.ಕೆ, ಸುರೇಶ್ ಶೆಟ್ಟಿ ಕುರೆಲ್ಯ, ಅನಿಲ್ ಕುಮಾರ್ ಮಾಳಿಗೆ ಮನೆ, ಸಂತೋಷ್ ಹೆಗ್ಡೆ ಕಟ್ಟೆ, ಅರ್ಕ ಕೀರ್ತಿ ಹೆಗ್ಡೆ, ಜಯ ಸಾಲಿಯಾನ್ ಬದಿನಡೆ, ಶ್ರೀ. ಕ್ಷೇ. ಧ. ಗ್ರಾ. ಯೋಜನೆ ಮೇಲ್ವಿಚಾರಕ ದಿನೇಶ್, ಯೋಜನಾಧಿಕಾರಿ ಯಶವಂತ್, ಆಯ್ಕೆಯಾಗಿದ್ದಾರೆ. ಮತ್ತು ಇತರ ಉಪಸಮಿತಿ ಅಧ್ಯಕ್ಷ, ಸಂಚಾಲಕ ಹಾಗೂ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.