ಕಲ್ಮಂಜ ಗ್ರಾಮದ ನಿಡಿಗಲ್ ಪಜಿರಡ್ಕ ನೀರಚಿಲುಮೆ ರಸ್ತೆ ಕಾಂಕ್ರೀಟೀಕರಣ ಕಾಮಗಾರಿಗೆ ಶಿಲಾನ್ಯಾಸ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಅನುಷ್ಠಾನಗೊಳ್ಳುವ ರೂ.‌ ಒಂದು ಕೋಟಿ ವೆಚ್ಚದ ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ನಿಡಿಗಲ್ ಪಜಿರಡ್ಕ ನೀರಚಿಲುಮೆ ರಸ್ತೆ ಕಾಂಕ್ರೀಟೀಕರಣ ಕಾಮಗಾರಿಗೆ ಶಿಲಾನ್ಯಾಸ ಕಾರ್ಯಕ್ರಮ ಜ.‌1 ರಂದು ಶಾಸಕ ಹರೀಶ್ ಪೂಂಜ ನೆರವೇರಿಸಿದರು.
ಸಮಾರಂಭದಲ್ಲಿ ಕಲ್ಮಂಜ ಗ್ರಾ.ಪಂ ಅಧ್ಯಕ್ಷೆ ಜಯಲಕ್ಷ್ಮಿ ವಹಿಸಿದ್ದರು.

ವೇದಿಕೆಯಲ್ಲಿ ತಾ.ಪಂ ಸ್ಥಾಯೀ ಸಮಿತಿ ಅಧ್ಯಕ್ಷ ಎಂ ಶಶಿಧರ ಕಲ್ಮಂಜ, ನಿಡಿಗಲ್ ಬದ್ರಿಯಾ ಜುಮ್ಮಾ ಮಸ್ಜಿದ್ ಧರ್ಮಗುರುಗಳಾದ ಬದ್ರುದ್ದೀನ್ ಸಖಾಫಿ, ದಯಾಳ್ ಬಾಗ್ ಕಪುಚಿನ್ ಕೃಷಿಕ ಕೇಂದ್ರದ ಧರ್ಮಗುರುಗಳಾದ ಫಾ. ಫ್ರಾನ್ಸಿಸ್,ದೆಹಲಿಯಲ್ಲಿ ಓಶಿಯನ್ ಪರ್ಲ್ಸ್ ಹೊಟೇಲ್ ವ್ಯವಸ್ಥಾಪಕ ಪ್ರಭಾಕರ ಶೆಟ್ಟಿ, ಲಕ್ಷ್ಮೀ ಗ್ರೂಪ್ ನ ಮೋಹನ್ ಕುಮಾರ್, ನಿಡಿಗಲ್ ಬಸದಿಯ ಆಡಳಿತ ಮೊಕ್ತೇಸರರಾದ ರತನ್ ಕುಮಾರ್ ಹುಣಿಪ್ಪಾಜೆ, ಹಿರಿಯರಾದ ಮೋಹನ್ ರಾವ್ ಕಲ್ಮಂಜ, ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ತುಕರಾಮ ಪೂಜಾರಿ, ಜಿ.ಪಂ ಎಇಇ ಚೆನ್ನಪ್ಪ ಮೊಯಿಲಿ, ಮಂಜುನಾಥ ಶೆಟ್ಟಿ, ಕೃಷ್ಣಪ್ಪ ಗುಡಿಗಾರ, ಶ್ರೀನಿವಾಸ ರಾವ್, ಮೊದಲಾದವರು ಉಪಸ್ಥಿತರಿದ್ದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.