ಐತಿಹಾಸಿಕ ಕಾಜೂರು ಉರೂಸ್ ಪ್ರಚಾರ ಕರಪತ್ರ ಬಿಡುಗಡೆ

Advt_NewsUnder_1
Advt_NewsUnder_1


ಕಾಜೂರು: ಸುಮಾರು 800 ಕ್ಕೂ ಅಧಿಕ ವರ್ಷಗಳ ಇತಿಹಾಸ ಇರುವ, ಪ್ರಸಿದ್ಧ ಸರ್ವಧರ್ಮೀಯರ ಸೌಹಾರ್ದ ಕ್ಷೇತ್ರ ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ಕಾಜೂರು ದರ್ಗಾ ಶರೀಫ್‌ನಲ್ಲಿ 2020- ಫೆಬ್ರವರಿ 7 ರಿಂದ 16 ರ ವರೆಗೆ ನಡೆಯುವ ಐತಿಹಾಸಿಕ ಉರೂಸ್ ಮಹಾ ಸಂಭ್ರಮದ ಪ್ರಚಾರ ಕರಪತ್ರ ಬಿಡುಗಡೆ ಡಿ. 29 ರಂದು ನಡೆಯಿತು.

ಕಾಜೂರಿನ ಗೌರವಾಧ್ಯಕ್ಷರೂ ಆಗಿರುವ ಖ್ಯಾತ ವಿದ್ವಾಂಸ ಸಯ್ಯಿದ್ ಕುಂಬೋಳ್ ತಂಙಳ್ ಹಾಗು ಸಯ್ಯಿದ್ ಕಾಜೂರು ತಂಙಳ್ ನೋಟೀಸು ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಉರೂಸ್ ಸಮಿತಿ ಅಧ್ಯಕ್ಷ ಕೆ. ಯು ಇಬ್ರಾಹಿಂ, ಉಪಾಧ್ಯಕ್ಷ ಕೆ. ಮುಹಮ್ಮದ್ ಕಿಲ್ಲೂರು, ಪ್ರ. ಕಾರ್ಯದರ್ಶಿ ಜೆ.ಹೆಚ್ ಅಬೂಬಕ್ಕರ್ ಸಿದ್ದೀಕ್ ಕಾಜೂರು, ಜೊತೆ ಕಾರ್ಯದರ್ಶಿ ಎಂ.ಎ ಕಾಸಿಂ ಮಲ್ಲಿಗೆಮನೆ ಕಿಲ್ಲೂರು, ಕೋಶಾಧಿಕಾರಿ ಮುಹಮ್ಮದ್ ಕಮಾಲ್ ಕಾಜೂರು, ಅಬೂಬಕ್ಕರ್ ಮಲ್ಲಿಗೆ, ಅಬ್ದುಲ್ ರಹಿಮಾನ್ ಮುಸ್ಲಿಯಾರ್ ಕುಂತೂರು, ಎ.ಯು ಮುಹಮ್ಮದ್ ಆಲಿ ಕಾಜೂರು, ಬಿ.ಎ ಯೂಸುಫ್ ಶರೀಫ್ ಕಾಜೂರು ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.