ದ.ಕ.ಜಿ.ಪಂ.ಉ.ಪ್ರಾಥಮಿಕ ಶಾಲೆ ತೋಟತ್ತಾಡಿ ಶಾಲಾ ವಾರ್ಷಿಕೋತ್ಸವ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ತೋಟತ್ತಾಡಿ: ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುವ ಸ್ಥಿತಿಗೆ ಬಂದಿರುವ ಈ ಕಾಲ ಘಟ್ಟದಲ್ಲಿ 93ರ ಹರೆಯ ದ.ಕ.ಜಿ.ಪಂ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ತೋಟತ್ತಾಡಿ ಇಲ್ಲಿಯ ವಾರ್ಷಿಕೋತ್ಸವವು ಡಿ.28 ರಂದು ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಜಿ.ಪಂ ಸದಸ್ಯೆ ನಮಿತಾ ಕೆ ದೀಪ ಪ್ರಜ್ವಲಿಸಿ ಚಾಲನೆ ನೀಡಿದರು. ಶಾಲಾ ಗ್ಯಾಲರಿಯನ್ನು ತಾ.ಪಂ ಸದಸ್ಯ ಕೊರಗಪ್ಪ ಗೌಡ ಉದ್ಘಾಟಿಸಿ ಶುಭ ಹಾರೈಸಿದರು. ಅಧ್ಯಕ್ಷತೆಯನ್ನು ಗ್ರಾ.ಪಂ ಸದಸ್ಯ ಹಾಗೂ ಶಾಲಾ ವಾರ್ಷಿಕೋತ್ಸವ ಸಮಿತಿ ಸದಸ್ಯ ಶಾಜಿ ಟಿ.ಎ ವಹಿಸಿದ್ದರು.


ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷ ಬೆಂದ್ರಾಳ ಗೋಪಾಲಕೃಷ್ಣ ಇರ್ವತ್ರಾಯ ಸ್ವಾಗತಿಸಿದರು. ವಾರ್ಷಿಕೋತ್ಸವ ಸಮಿತಿ ಗೌರವ ಸಲಹೆಗಾರ ಡಿ.ಎ ರಹಿಮಾನ್ ಪ್ರಾಸ್ತಾವನೆ ಗೈದರು. ಶಾಸಕ ಹರೀಶ್ ಪೂಂಜಾ, ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್, ಗ್ರಾ.ಪಂ ಅಧ್ಯಕ್ಷೆ ಶೈಲಜಾ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಇವರೆಲ್ಲರ ಅನುಪಸ್ಥಿತಿಯಲ್ಲಿ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.