ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ದ.ಕ : 163 ಕಿ.ಮೀ ರಸ್ತೆ ಅಭಿವೃದ್ಧಿ : ಸಂಸದ ನಳಿನ್

Advt_NewsUnder_1
Advt_NewsUnder_1

ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು 163 ಕಿ.ಮೀ ರಸ್ತೆಗಳನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಮೂರನೇ ಹಂತದಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಈ ಕಾಮಗಾರಿಗಳು ಅನುಮೋದನೆಗೊಂಡಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ತಿಳಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಬೀಜದಡ್ಡಿಯಿಂದ ಪಾರ್ಪಿಕಲ್ಲು ವರೆಗಿನ ಸುಮಾರು 12.51 ಕಿ.ಮೀ ಉದ್ದದ ರಸ್ತೆ ಅಭಿವೃದ್ಧಿ, ಬೆಳ್ತಂಗಡಿ ತಾಲೂಕಿನ ಪರಪ್ಪುನಿಂದ ಅರ್ದುಪ್ರಳವರೆಗಿನ 5.88 ಕಿ.ಮೀ ಉದ್ದದ ರಸ್ತೆ ಅಭಿವೃದ್ಧಿ, ಬೆಳ್ತಂಗಡಿ ತಾಲುಕಿನ ಲಾಯಿಲದಿಂದ ಕೋಟಿಕಟ್ಟೆ ವರೆಗಿನ ಸುಮಾರು 8.81ಕಿ.ಮೀ. ಉದ್ದದ ರಸ್ತೆ ಅಭಿವೃದ್ಧಿ, ಬೆಳ್ತಂಗಡಿ ತಾಲೂಕಿನ ಉಜಿರೆಯಿಂದ ಕುಪ್ಪೆಟಿನ ವರೆಗಿನ ಸುಮಾರು 25.01 ಕಿ.ಮೀ. ಉದ್ದದ ರಸ್ತೆ ಅಭಿವೃದ್ಧಿ, ಮಂಗಳೂರು ತಾಲೂಕಿನ ಕಾಯರ್ಪುಂಡುನಿಂದ ಕೆಸರಗದ್ದೆ ವರೆಗಿನ ಸುಮಾರು 5.04 ಕಿ.ಮೀ. ಉದ್ದದ ರಸ್ತೆ ಅಭಿವೃದ್ಧಿ, ಮುಂಚಿಗುಡ್ಡೆಯಿಂದ ನಿಡ್ಡೋಡಿವರೆಗಿನ ಸುಮಾರು 5.66 ಕಿ.ಮೀ. ಉದ್ದದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅನುಮೋದನೆಗೊಂಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.