ಸ್ವಾರ್ಥ ಮನೋಭಾವದ ಬದುಕು ನಿಜವಾದ ಬದುಕಲ್ಲ: ರೆ. ಫಾ ಬೇಸಿಲ್ ವಾಸ್

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1


ಮಡಂತ್ಯಾರಿನಲ್ಲಿ ಕ್ರಿಸ್ಮಸ್ ಬಂಧುತ್ವ ಸಂಭ್ರಮ

ಮಡಂತ್ಯಾರು: ನಾವು ಬದುಕಬೇಕು. ಇನ್ನೊಬ್ಬರನ್ನು ಬದುಕಿಸಿ ಬದುಕಬೇಕು. ನಮ್ಮೊಳಗಿನ ಧ್ವೇಷ ಮತ್ತು ಅಸೋಯೆ ನಮ್ಮನ್ನೇ ನಾಶ ಮಾಡುತ್ತದೆ. ಆದ್ದರಿಂದ ಹೊಸ ಸಮಾಜ ಕಟ್ಟುವಭಾವ ಮತ್ತು ಜವಾಬ್ಧಾರಿ ನಮ್ಮ ಎಲ್ಲರಿಗೂ ಇದೆ. ಸ್ವಾರ್ಥ ಮನೋಭಾವದಿಂದ ಬದುಕುವ ನಮ್ಮ ಬದುಕು ನಿಜವಾದ ಬದುಕಲ್ಲ, ಅದು ಸಾವಿಗೆ ಸಮಾನ ಎಂದು ವಿಶ್ಲೇಶಿಸಿದವರು ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್‌ನ ಪ್ರಧಾನ ಧರ್ಮಗುರುಗಳಾದ ರೆ. ಫಾ. ಬೇಸಿಲ್‌ವಾಸ್ ಅವರು.

ಸೇಕ್ರೆಡ್ ಹಾರ್ಟ್ ಚರ್ಚ್ ಮಡಂತ್ಯಾರು, ಸೇಕ್ರೆಡ್ ಹಾರ್ಟ್ ಸಮೂಹ ವಿದ್ಯಾ ಸಂಸ್ಥೆಗಳು ಮಡಂತ್ಯಾರು ಇವರ ಆಶ್ರಯದಲ್ಲಿ ಡಿ. 25 ರ ಕ್ರಿಸ್ಮಸ್ ದಿನದಂದು ಚರ್ಚ್‌ನ ವಠಾರದಲ್ಲಿ ಹಮ್ಮಿಕೊಂಡಿದ್ದ ಬಂಧುತ್ವ ಕ್ರಿಸ್ಮಸ್ ಸಂಭ್ರಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ತನ್ನ ಸುಖವನ್ನೇ ಸರ್ವಜನಕ್ಕೂ ಬಯಸುವಂತಾಗಬೇಕು:
ತಾನು ಈ ಸಮಾಜದಲ್ಲಿ ಹೇಗೆ ಸುಖವಾಗಿ ಬದುಕಬೇಕೆಂದು ಬಯಸುತ್ತೇನೋ ಅದನ್ನೇ ತನ್ನಪಕ್ಕದವರಿಗೆ, ಇತರ ಸಮಾಜಸ್ತರಿಗೆ ಬಯಸಬೇಕು. ಬಂಧುತ್ವ ಎಂದರೆ ಏನು ಎಂಬುದನ್ನು ಪುರಾಣದ ನೀತಿ ಕತೆಗಳು, ಚಿಂತನೆಗಳು, ನಮ್ಮ ಗುರು ಹಿರಿಯರು, ತಂದೆ-ತಾಯಿ ನಮಗೆ ಕಲಿಸಿಕೊಟ್ಟಿದ್ದಾರೆ. ಪರಸ್ಪರ ಧರ್ಮಗಳನ್ನು ಅರಿತು ಬಾಳಿದಾಗ ಗೊಂದಲಗಳಿಗೆ ಎಡೆಯಿಲ್ಲ.
ಪ್ರೊ. ಗಣಪತಿ ಭಟ್ ಕುಳಮರ್ವ, ಪ್ರಾಂಶುಪಾಲರು ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ.

ಧರ್ಮಕೇಂದ್ರಗಳು ನೀಡುವ ಸಂದೇಶ ಪಾಲಿಸುವವರಾಗಬೇಕು:
ಬೇರೆ ಧರ್ಮ ಮತ್ತು ನಂಬಿಕೆಯ ವ್ಯಕ್ತಿಗಳ ಬಳಿ ದೇಹದ ಅಂಗಾಗ, ಸುಂದರ ಪ್ರಕೃತಿ, ನೀರು-ಗಾಳಿ-ಎಲ್ಲವನ್ನೂ ಯಾರು ಕರುಣಿಸಿದ್ದೆಂದು ಕೇಳಿದರೆ ಅದು ದೇವರು ಎನ್ನುತ್ತಾನೆ. ದೇವರು ಅವುಗಳನ್ನು ಒಂದು ಜಾತಿ ದರ್ಮಕ್ಕೆ ಸೀಮಿತವಾಗಿ ಕೊಡದೆ ಎಲ್ಲರಿಗೂ ಅನುಕೂಲವಾಗಿ ಕೊಟ್ಟಿದ್ದಾನೆ. ಹಾಗಾದರೆ ದೇವರಿಗೇ ಭೇದವಿಲ್ಲದ ಮೇಲೆ ನಮಗೇಕೆ ಭೇದಗಳು? ಧರ್ಮಕೇಂದ್ರಗಳು ಸಾರುವ ಸಂದೇಶಗಳ್ನು ಅಳವಡಿಸಿಕೊಂಡು ಪಾಲಿಸುವವರಾಗಬೇಕು.
ಶರೀಫ್ ಸ’ಅದಿ ಕಿಲ್ಲೂರು, ಪ್ರಾಂಶುಪಾಲರು, ತೈಬಾ ಗಾರ್ಡನ್ ಶಿಕ್ಷಣ ಸಮೂಹ ಸಂಸ್ಥೆಗಳು ಮೂಡಬಿದಿರೆ.

ಕಾರ್ಯಕ್ರಮ ಚಿಕ್ಕದಾದರೂ ಪರಿಣಾಮ ದೊಡ್ಡದು:
ನಮ್ಮ ಬೆರಳ ತುದಿಯಲ್ಲಿ ವಿಶ್ವ ಅಡಗಿದೆ. ನಮ್ಮ ಬೆಡ್‌ರೂಮ್‌ಗಳು ಪ್ರಪಂಚವಾಗಿದೆ. ಜಾಗತೀಕರಣ ಇಷ್ಟೊಂದು ಬದಲಾವರಣೆ ತಂದರೂ ಮತ್ತೇಕ ನಮ್ಮ ನಮ್ಮೊಳಗೆ ಗಡಿಗಳು ಎಂಬುದೇ ಅರ್ಥವಾಗದ ಮಾತು. ದೇಶದಲ್ಲಿ ಕೋಟ್ಯಾಂತರ ಜನಸಂಖ್ಯೆ, 122 ಭಾಷೆಗಳು, 1600 ಉಪ ಭಾಷೆಗಳು, 7 ಪ್ರಮುಖ ಜಾತಿಗಳು ಇದ್ದರೂ ಎಲ್ಲರೂ ನೆಮ್ಮದಿಯಿಂದ ಬಾಳುವ ದೇಶವಿದ್ದರೆ ಅದು ಭಾರತ ಮಾತ್ರ.
ರೆ.ಫಾ ಜೋಕಿಮ್ ಫರ್ನಾಂಡೀಸ್, ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಗುರು.


ವೇದಿಕೆಯಲ್ಲಿ:
ಸಮಾರಂಭದ ವೇದಿಕೆಯಲ್ಲಿ ಸೇಕ್ರೆಡ್ ಹಾರ್ಟ್ ಕಾಲೇಜಿನ ಪ್ರಾಂಶುಪಾಲ ರೆ. ಫಾ. ಜೆರೋಮ್ ಡಿಸೋಜಾ, ರೆ. ಫಾ. ಸ್ಟೇನಿ ಮತ್ತು ರೆ. ಫಾ. ರೊನಾಲ್ಡ್, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ರೊನಾಲ್ಡ್ ಸಿಕ್ವೇರಾ, ಕಾರ್ಯದರ್ಶಿ ಲಿಯೋ ರೊಡ್ರಿಗಸ್ ಉಪಸ್ಥಿತರಿದ್ದರು. ವಿವೇಕ ವಿನ್ಸೆಂಟ್ ಪಾಯಿಸ್ ಮತ್ತು ಇತರರು ಸಹಕಾರ ನೀಡಿದರು. ಮೂರೂ ಧರ್ಮದ ಪ್ರತಿನಿಧಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಎಲ್ಲ ಧರ್ಮೀಯರೂ ಜೊತೆಯಾಗಿ ಕೇಕ್ ಕತ್ತರಿಸುವ ಮೂಲಕ ಹಬ್ಬಕ್ಕೆ ಚಾಲನೆ ನೀಡಿದರು. ರೋಹಣ್ ಪಾಯಿಸ್ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.