ವಿಕ್ರಾಂತ ಕೇಳ್ಕರ್‌ಗೆ ರಾಷ್ಟ್ರೀಯ ಐಸಿಟಿ ಪ್ರಶಸ್ತಿ

Advt_NewsUnder_1
Advt_NewsUnder_1

ಬೆಳ್ತಂಗಡಿ: ಸೋಮವಾರ ಪೇಟೆ ತಾಲೂಕಿನ ಸರಕಾರಿ ಪ್ರೌಢ ಶಾಲೆ ಹಂಡ್ಲಿ ಇಲ್ಲಿನ ಆಂಗ್ಲ ಭಾಷಾ ಶಿಕ್ಷಕ, ಬೆಳ್ತಂಗಡಿ ಮೂಲದ ವಿಕ್ರಾಂತ ಕೇಳ್ಕರ್ ಅವರು ರಾಷ್ಟ್ರೀಯ ಐಸಿಟಿ (ಇನ್‌ಫೋರ್‍ಮೇಶನ್ ಎಂಡ್ ಕಮ್ಯುನಿಕೇಶನ್ ಟೆಕ್ನೋಲೋಜಿ) ಪ್ರಶಸ್ತಿಗೆ ಭಾಜನರಾಗಿದ್ದಾರೆ.  ಡಿ. 23 ರಂದು ನವದೆಹಲಿಯ ಡಾ| ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಾಲ ನಿಶಂಕ್ ಅವರು ಕೇಳ್ಕರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ತಂತ್ರಜ್ಞಾನವನ್ನು ಶಾಲೆಗಳಲ್ಲಿ ಉಪಯುಕ್ತವಾಗಿ ಬಳಸಿ ಬೋಧನೆ ಮಾಡುತ್ತಿರುವ ಶಿಕ್ಷಕರಿಗೆ ಭಾರತ ಸರಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ವಿಭಾಗ, ಮಾನವ ಸಂಪನ್ಮೂಲ ಸಚಿವಾಲಯವು ಈ ಪ್ರಶಸ್ತಿಯನ್ನು ಕೊಡಮಾಡುತ್ತಿದೆ.
ವಿಕ್ರಾಂತ ಕೇಳ್ಕರ್ ಇವರು ಮೂಲತಃ ಬೆಳ್ತಂಗಡಿ ತಾಲೂಕಿನ ಕರಂಬಾರು ಗ್ರಾಮದ ಕಾಜಿಮುಗೇರು ಶಂಕರ ಕೇಳ್ಕರ್ ಮತ್ತು ಭವಾನಿ ಕೇಳ್ಕರ್ ದಂಪತಿ ಪುತ್ರ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.