ಕೆಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣ ವಾಣಿಜ್ಯ ತೆರಿಗೆ ಎ.ಸಿಯಾಗಿ ಮಾಜಿ ಸೈನಿಕ ರಾಜು ನಾಯ್ಕ

ಬೆಳ್ತಂಗಡಿ: ಭಾರತೀಯ ಭೂ ಸೇನೆಯಲ್ಲಿ ಕೋರ್ ಆಫ್ ಸಿಗ್ನಲ್‌ನಲ್ಲಿ ಕಳೆದ 17 ವರ್ಷ ದೆಹಲಿ,ಕಾಶ್ಮೀರ, ರಾಜಸ್ಥಾನ, ಪಶ್ಚಿಮ ಬಂಗಾಳ, ಗೋವಾ, ರಾಂಚಿ ಹಾಗೂ ದೇಶದ ವಿವಿದ ಕಡೆಗಳಲ್ಲಿ ದೇಶಸೇವೆ ನಡೆಸಿ ನಿವೃತ್ತ ರಾಗಿ ಬಳಿಕ ಪ್ರಸ್ತುತ ಪಡಂಗಡಿ-ಮಾಲಾಡಿ ಪಂಚಾಯತ್ ವ್ಯಾಪ್ತಿಯ ಗ್ರಾಮ ಕರಣಿಕರಾಗಿ(ವಿ.ಎ) ಕರ್ತವ್ಯದಲ್ಲಿರುವ ಬೆಳ್ತಂಗಡಿ ಸುದೆಮುಗೇರು ನಿವಾಸಿ ರಾಜು ನಾಯ್ಕ ಇದೀಗ ಕೆಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ವಾಣಿಜ್ಯ ತೆರಿಗೆ ಎ.ಸಿ (ಸಹಾಯಕ ಆಯುಕ್ತ) ರಾಗಿ ಆಯ್ಕೆಯಾಗಿದ್ದಾರೆ.

ಮೂಲತಃ ಹೊನ್ನಾವರ ತಾಲೂಕು ಗುಂಡುಬಾಳ ಗ್ರಾಮದ ಗಣಪತಿ ನಾಯ್ಕ ಮತ್ತು ಸೀತಾ ದಂಪತಿ ಪುತ್ರರಾದ ರಾಜು ನಾಯ್ಕ ಪ್ರಸ್ತುತ ಬೆಳ್ತಂಗಡಿ ತಾಲೂಕಿನ ಕಸಬಾ ಗ್ರಾಮದಲ್ಲಿ ನೆಲೆಸಿದ್ದಾರೆ.
ಪೊಲಿಟಿಕಲ್ ಸೈನ್ಸ್‌ನಲ್ಲಿ ಎಂ.ಎ ಪದವೀಧರರಾಗಿರುವ ರಾಜು ನಾಯ್ಕ ಇಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಡಿಪ್ಲೋಮಾ ಪದವಿ ಪಡೆದಿದ್ದಾರೆ. ಈ ಹಿಂದೆ 2015 ರಲ್ಲಿ ಒಂದು ಬಾರಿ ಅವರು ಕೆಎಎಸ್ ಪರೀಕ್ಷೆಗೆ ಹಾಜರಾಗಿದ್ದರೂ ಅಂತಿಮ ಯಶ ಗಳಿಸುವಲ್ಲಿ ಸಫಲರಾಗಿರಲಿಲ್ಲ. ಇದೀಗ ಮತ್ತೊಮ್ಮೆ 2017 ರಲ್ಲಿ ಪರೀಕ್ಷೆ ಎದುರಿಸಿ ದ.ಕ ಜಿಲ್ಲೆಯಿಂದ ಎ ಗ್ರೇಡ್‌ನೊಂದಿಗೆ ಉತ್ತೀರ್ಣರಾಗುವ ಮೂಲಕ ದ.ಕ ಜಿಲ್ಲೆಯ ಏಕೈಕ ವ್ಯಕ್ತಿಯಾಗಿ ಮೂಡಿ ಬಂದಿದ್ದಾರೆ.

ವಿ.ಎ ಆಗಿ ಕಂದಾಯ ಇಲಾಖೆಯ ಉದ್ಯೋಗಿಯಾಗಿರುವ ಅವರು ಈ ಹಿಂದೆ ಇಂದಬೆಟ್ಟು, ಬಳಂಜ, ಪಡಂಗಡಿ ಇಲ್ಲಿ ಒಟ್ಟು ೬ ವರ್ಷಗಳಿಂದ ಸೇವೆಯಲ್ಲಿದ್ದು ಜನರ ಪ್ರೀತಿ ವಿಶ್ವಾಸ ಗಳಿಸಿದ್ದಾರೆ. ಇವರು ಪತ್ನಿ ಪಲ್ಲವಿರಾಜು, ಪುತ್ರ ಪ್ರತೀಕ್ ಆರ್.ಎನ್ ಜೊತೆ ಸುಖಿ ಕುಟುಂಬವನ್ನು ಹೊಂದಿದ್ದಾರೆ.

About The Author

Related posts

2 Comments

Leave a Reply

Your email address will not be published. Required fields are marked *

Copy Protected by Chetan's WP-Copyprotect.