ಉಜಿರೆ ಮಹಾಲಕ್ಷ್ಮಿ ಸ್ಟೋರ್‍ಸ್ ಮಾಲಕ ಸುಂದರ ಗೌಡ-ನಿಧನ

ಉಜಿರೆ ಗ್ರಾಮದ ಎರ್ನೋಡಿ ಲಕ್ಷ್ಮೀ ನಿಲಯದ ನಿವಾಸಿ ಉಜಿರೆಯ ಮಹಾಲಕ್ಷ್ಮೀ ಸ್ಟೋರ್‍ಸ್‌ನ ಮಾಲಕ ಸುಂದರ ಗೌಡ (90.ವ) ವಯೋಸಹಜ ಅನಾರೋಗ್ಯದಿಂದ ಡಿ.24 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮೂಲತಃ ಸುಳ್ಯ ತಾಲೂಕು ಪಡ್ಪು, ಅಮರ ಮುಡ್ನೂರು ಗ್ರಾಮದವರಾದ ಇವರು ಮಂಗಳೂರು ಎಸ್.ಕೆ.ಎ.ಸಿ.ಎಂ.ಎಸ್‌ನಲ್ಲಿ ಮೇಲ್ವಿಚಾರಕರಾಗಿ ಉದ್ಯೋಗದಲ್ಲಿದ್ದರು. ನಂತರ ಸ್ವ ಉದ್ಯೋಗ ಆಸಕ್ತಿಯಿಂದ ಅಲ್ಲಿನ ಕೆಲಸ ತ್ಯಜಿಸಿ ಉಜಿರೆಗೆ ಬಂದು ಫ್ಯಾನ್ಸಿ ಅಂಗಡಿ ಪ್ರಾರಂಭಿಸಿದ್ದರು. ಇದೀಗ ಅವರು ಪ್ರಾರಂಭಿಸಿದ ಮಹಾಲಕ್ಷ್ಮೀ ಸ್ಟೋರ್  ಉಜಿರೆಯಲ್ಲಿ ಸುಮಾರು 50 ವರ್ಷಗಳನ್ನು ದಾಟಿದ್ದು, ಅಪಾರ ಜನಪ್ರಿಯತೆಗಳಿಸಿದೆ. ಸದ್ರಿ ಅಂಗಡಿ ಗ್ರಾಮಾಂತರ ಪ್ರದೇಶದಲ್ಲಿ ಇಂದಿಗೂ ಕಾಜಿಗೌಡೆರ ಅಂಗಡಿ ಎಂದೇ ಚಿರಪರಿಚಿತವಾಗಿದೆ. ಗ್ರಾಹಕರಿಗೆ ಒಂದೇ ಸೂರಿನಡಿ ಮದುವೆ ಹಾಗೂ ಇತರ ಶುಭ ಕಾರ್ಯಗಳಿಗೆ ಬೇಕಾದ ವಸ್ತುಗಳು ಸಿಗುವ ಜನರಲ್ ಸ್ಟೋರಾಗಿದೆ.

ಮೃತರು ಪತ್ನಿ ವಸಂತಿ.ಎಸ್ ಗೌಡ, ಓರ್ವ ಪುತ್ರ ಭರತ್ ಕುಮಾರ್, ಪುತ್ರಿಯರಾದ ಬಂಟ್ವಾಳ ಎ.ಪಿ.ಎಂ.ಸಿ ಕಾರ್ಯದರ್ಶಿಯಾಗಿರುವ ಭಾರತಿ, ಕೇರಳದ ಫಾಲ್ಘಾಟ್‌ನಲ್ಲಿ ಇರುವ ಡಾ| ಆರತಿ, ಸೊಸೆ, ಅಳಿಯಂದಿರು, ಕುಟುಂಬವರ್ಗ ಹಾಗೂ ಗ್ರಾಹಕರನ್ನು ಅಗಲಿದ್ದಾರೆ.
ಉಜಿರೆ ಪೇಟೆಯ ವರ್ತಕರು, ಅಭಿಮಾನಿಗಳು, ಉಜಿರೆ  ಗೌಡರ ಯಾನೆ ಒಕ್ಕಲಿಗರ ಉಜಿರೆ ಗ್ರಾಮ ಸಮಿತಿ ಪದಾಧಿಕಾರಿಗಳು ಹಾಗೂ ತಾ| ಸಂಘದ ಪದಾಧಿಕಾರಿಗಳು ಮೃತರ ಅಂತಿಮ ದರ್ಶನದಲ್ಲಿ ಪಾಲ್ಗೊಂಡರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.