ಬೆಳಾಲು ಮಾಯಾ ಫ್ರೆಂಡ್ಸ್ ವತಿಯಿಂದ ಸಾಧಕರಿಗೆ ಸನ್ಮಾನ

ಬೆಳಾಲು: ಮಾಯಾ ಫ್ರೆಂಡ್ಸ್ ಮಾಯಾ ಬೆಳಾಲು ಇದರ ನೇತೃತ್ವದಲ್ಲಿ ಡಿ.24 ರಂದು ಶ್ರೀ ಮಾಯಾ ಮಹಾದೇವ ದೇವಸ್ಥಾನದ ವಠಾರದಲ್ಲಿ ನಡೆದ ತಾಲೂಕು ಮಟ್ಟದ ಹೊನಲು ಬೆಳಕಿನ ಪುರುಷರ ಹಗ್ಗಜಗ್ಗಾಟ ಪಂದ್ಯಾಟದ ಸಂದರ್ಭದಲ್ಲಿ ಊರಿನ ಸಾಧಕರಾದ ಬೆಳಾಲು ಪ್ರಾ.ಕೃ.ಪತ್ತಿನ ಸಹಕಾರಿ ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರುಕ್ಮಯ್ಯ ಗೌಡ ಪರಾರಿ, ಖ್ಯಾತ ಮುಳುಗು ತಜ್ಞ ಹರೀಶ್ ಕೂಡಿಗೆ, ಜಾನಪದ ಕಲಾವಿದೆ ವಿಮಲ ದುಗ್ಗಣ್ಣ ಎಂ.ಕೆ, ಪ್ರಗತಿಪರ ಕೃಷಿಕರು ಸಮಾಜ ಸೇವಕರಾದ ನಾರ್ಣಪ್ಪ ಗೌಡ ಎಂಜಿರಿಗೆ, ಕೃಷ್ಣಪ್ಪ ಗೌಡ ಬೆರ್ಕೆಜಾಲು, ರಾಷ್ಟ್ರೀಯ ಮಟ್ಟದ ಕ್ರೀಡಾಪಟು ಸುಕೇಶ್ ಎರ್ಮಳ ಇವರುಗಳನ್ನು ಮಾಯಾ ಫ್ರೆಂಡ್ಸ್ ವತಿಯಿಂದ ಅತಿಥಿಗಳು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ತಾ. ಪಂ ಮಾಜಿ ಅಧ್ಯಕ್ಷ ಎನ್. ಜತ್ತನ್ನ ಗೌಡ, ಬೆಳಾಳು ಗ್ರಾ.ಪಂ. ಅಧ್ಯಕ್ಷ ದಿನೇಶ್ ಕೋಟ್ಯಾನ್, ಮಾಯಾ ಮಹಾದೇವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹೆಚ್.ಪದ್ಮ ಗೌಡ, ಪ್ರಗತಿಪರ ಕೃಷಿಕ ಸಂಜೀವ ಗೌಡ ಕನಿಕ್ಕಿಲ, ನಿವೃತ್ತ ಕೃಷಿ ಅಧಿಕಾರಿ ನಾರಾಯಣ ಸುವರ್ಣ, ಮಂಜನೊಟ್ಟು, ಬೆಳ್ತಂಗಡಿ ಜೆಸಿಐ ಮಂಜುಶ್ರೀ ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್, ಜನಜಾಗೃತಿ ವೇದಿಕೆ ತಾಲೂಕು ಮಾಜಿ ಅಧ್ಯಕ್ಷ ತಿಮ್ಮಪ್ಪ ಗೌಡ ಬನಂದೂರು, ಶ್ರೀ ಮಾಯಾ ಮಹೇಶ್ವರ ಭಜನಾ ಮಂಡಳಿಯ ಅಧ್ಯಕ್ಷ ವಸಂತ ಬಜಕ್ಕಳ, ಬೆಳಾಲು ಗ್ರಾ.ಪಂ. ಸದಸ್ಯರಾದ ಸುರೇಂದ್ರ ಗೌಡ ಸುರುಳಿ, ಭವಾನಿ ಮಾರ್ಪಾಲು, ವಿಶ್ವ ಹಿಂದೂ ಪರಿಷತ್ ಬೆಳಾಲು ಶ್ರೀರಾಮ ಶಾಖೆ ಅಧ್ಯಕ್ಷ ಯಶೋಧರ ಆಚಾರ್ಯ ಮಂಡಾಲು, ಪಲ್ಲಿದಡ್ಕ ಹಿದಯತ್ತುಲ್ ಇಸ್ಲಾಂ ಮದರಸದ ಅಧ್ಯಕ್ಷ ಅಬ್ದುಲ್ ರೆಹಮಾನ್, ಮಾಯಾ ಫ್ರೆಂಡ್ಸ್ ಅಧ್ಯಕ್ಷ ರಾಧಾಕೃಷ್ಣ ಗೌಡ, ಸಂಚಾಲಕ ದಯಾನಂದ.ಪಿ, ಕ್ರೀಡಾಕೂಟದ ಸಂಯೋಜಕ ಶಿವಕುಮಾರ್ ಬಾರಿತ್ತಾಯ ಪಾರಳ, ಮಾಯಾ ಫ್ರೆಂಡ್ಸ್ ಸದಸ್ಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.