ಲೋಕಾಯುಕ್ತ ಅಧಿಕಾರಿಗಳಿಂದ ಅಹವಾಲು ಸ್ವೀಕಾರ; ಜಾಗದ ಪೋರ್ಜರಿ ಮ್ಯುಟೇಶನ್ ಸುಮೊಟೊ ದಾಖಲಿಸಲು ಮನವಿ

ಬೆಳ್ತಂಗಡಿ: ಕೃಷಿ ಜಾಗದ ಪೋರ್ಜರಿ ಮ್ಯುಟೇಶನ್ ಮಾಡಿದ ಬಗ್ಗೆ ಮುಖ್ಯಮಂತ್ರಿಗಳು ಸೂಕ್ತ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರೂ ಕಂದಾಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳದಿರುವ ಕುರಿತು ಅವರ ಮೇಲೆ ಸುಮೊಟೊ ದಾಖಲಿಸುವಂತೆ ಹರೀಶ್ಚಂದ್ರ ತಾಮ್ಹಣ್‌ಕರ್ ಮಂಗಳೂರು ಲೋಕಾಯುಕ್ತದ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡರು.

ಡಿ.23ರಂದು ಬೆಳ್ತಂಗಡಿ ಮಿನಿ ವಿಧಾನ ಸೌಧದಲ್ಲಿ ಲೋಕಾಯುಕ್ತ ಮಂಗಳೂರು ವಿಭಾಗದ ಅಧಿಕಾರಿ ಸುರೇಂದ್ರ ಅವರು ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದರು. ಸಂದರ್ಭದಲ್ಲಿ ತಾಮ್ಹಣ್‌ಕರ್ ಈ ಮನವಿಯನ್ನು ಮಾಡಿಕೊಂಡರು.
ತಮ್ಮ ಕೃಷಿ ಜಾಗದ ಪೋರ್ಜರಿ ಮ್ಯುಟೇಶನ್ ಮಾಡಿರುವ ಬಗ್ಗೆ ಪಿಲ್ಯ ಗ್ರಾಮದ ಹರಿಶ್ಚಂದ್ರ ತಾಮ್ಹಣ್‌ಕರ್ ಮುಖ್ಯ ಮಂತ್ರಿಗಳಿಗೆ ಸಲ್ಲಿಸಿದ ಮನವಿಯ ಹಿನ್ನಲೆಯಲ್ಲಿ ಈ ಮನವಿಯನ್ನು ನಿಯಾಮಾನುಸಾರ ಪರಿಶೀಲಿಸಿ ಸೂಕ್ತ ಕ್ರಮ ವಹಿಸುವಂತೆ ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದರು. ಕಳೆದ ತಿಂಗಳ ಲೋಕಾಯುಕ್ತ ಅಧಿಕಾರಿಗಳ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ತಾಮ್ಹಣ್‌ಕರ್ ಅವರು ಈ ವಿಷಯವನ್ನು ಅಧಿಕಾರಿಗಳ ಗಮನಕ್ಕೆ ತಂದರು. ಇದರ ಬಗ್ಗೆ ಮನವಿದಾರರಿಗೆ ಒಂದು ವಾರದೊಳಗೆ ಸೂಕ್ತ ಮಾಹಿತಿ ಅಥವಾ ಹಿಂಬರಹ ನೀಡುವಂತೆ ಸ್ಥಳದಲ್ಲಿದ್ದ ಡಿ.ಟಿಯವರಿಗೆ ಲೋಕಾಯುಕ್ತ ಮಂಗಳೂರು ವಿಭಾಗದ ಪೊಲೀಸ್ ಇನ್ಸ್‌ಪೆಕ್ಟರ್ ಭಾರತಿಯವರು ಸೂಚಿಸಿದ್ದರು.
ಆದರೆ ಒಂದು ತಿಂಗಳು ಕಳೆದರೂ ಇದರ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿರುವ ವಿಷಯವನ್ನು ತಾಮ್ಹಣ್‌ಕರ್ ಅವರು ಅಧಿಕಾರಿಗಳ ಗಮನಕ್ಕೆ ತಂದು, ವಿವಿಧ ಹಂತದ ಕಂದಾಯ ಅಧಿಕಾರಿಗಳ ಮೇಲೆ ಸುಮೊಟೊ ದಾಖಲಿಸುವಂತೆ ಮನವಿ ಮಾಡಿಕೊಂಡರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.