ಡಿ. 26 ರಂದು NRC,CAA ವಿರೋಧಿಸಿ ಬೆಳ್ತಂಗಡಿಯಲ್ಲಿ ಮುಸ್ಲಿಂ ಒಕ್ಕೂಟ- ಸಮಾನ ಮನಸ್ಕ ಸಂಘಟನೆಗಳಿಂದ ಭಾರೀ ಪ್ರತಿಭಟನೆ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ ಆರ್ ಸಿ,) ಪೌರತ್ವ ತಿದ್ದುಪಡಿ ಮಸೂದೆ (ಸಿಎಎ) ಕಾಯ್ದೆ ವಿರುದ್ಧ ಬೆಳ್ತಂಗಡಿ ತಾಲೂಕಿನಲ್ಲಿ‌ ತಾಲೂಕು‌ ಸಂಯುಕ್ತ ಜಮಾಅತ್ ಮತ್ತು ತಾಲೂಕು ಮುಸ್ಲಿಂ ಒಕ್ಕೂಟ, ಸಮಸ್ತ ಮಹಲ್ ಫೆಡರೇಶನ್, ಎಸ್ಸೆಸ್ಸೆಫ್- ಎಸ್ ಕೆ ಎಸ್ಸೆಸ್ಸೆಫ್, ಸಿಪಿಐಎಂ ನೇತ್ರತ್ವದಲ್ಲಿ ಹಾಗೂ ಸಮಾನ ಮನಸ್ಕ ಸಂಘಟನೆಗಳ ಸಹಕಾರದೊಂದಿಗೆ ಡಿ.‌26 ರಂದು ಬೆಳ್ತಂಗಡಿ ಮಿನಿ ವಿಧಾನ ಸೌಧದ ಎದುರು‌ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಈ ಪ್ರತಿಭಟನೆಯಲ್ಲಿ ಮುಸ್ಲಿಂ ಸಮಾಜದ ಎಲ್ಲ ಸಂಘ ಸಂಸ್ಥೆಗಳು, ಪ್ರಮುಖರು ಒಗ್ಗಟ್ಟನಿಂದ ಭಾಗವಹಿಸಲಿದ್ದಾರೆ. ಈ ಬಗ್ಗೆ ಸರ್ವ ಸಂಘಟನೆಗಳ ಪ್ರಮುಖ ನೇತಾರರು ಈಗಾಗಲೇ ಹಲವು ಸುತ್ತಿನ ಮಹತ್ವದ ಸಭೆ ನಡೆಸಿ ಈ ತೀರ್ಮಾನಕ್ಕೆ ಬಂದಿದ್ದೇವೆ. ಗುರುವಾರ ಅಪರಾಹ್ನ ಗಂಟೆ 3.00 ಕ್ಕೆ ಬೆಳ್ತಂಗಡಿ ಮಿನಿ ವಿಧಾನ ಸೌಧದ ಎದುರು ನಡೆಯುವ ಈ ಬೃಹತ್ ಪ್ರತಿಭಟನೆಯಲ್ಲಿ ದ.ಕನ್ನಡ ಜಿಲ್ಲಾ ಮಾಜಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಎಸ್.ಎಸ್.ಎಫ್. ರಾಜ್ಯಸಮಿತಿ ಸದಸ್ಯ ಸಿರಾಜುದ್ದೀನ್ ಸಖಾಫಿ ಕನ್ಯಾನ, ಎಸ್.ಕೆ. ಎಸ್.ಎಸ್. ಎಫ್ ರಾಜ್ಯಾಧ್ಯಕ್ಷ ಅನೀಸ್ ಕೌಸರಿ, ಖ್ಯಾತ ನ್ಯಾಯವಾದಿ ಸುಧೀರ್‌ ಕುಮಾರ್‌ ಮುರಳ್ಯ ಮುಂತಾದವರು ಪ್ರತಿಭಟನೆಯನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಈ ಸಭೆಯಲ್ಲಿ ತಾಲೂಕಿನ ಎಲ್ಲ ಜಮಾಅತ್ ಮತ್ತು ಮೊಹಲ್ಲಾಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನ ಭಾಗವಹಿಸಲಿದ್ದಾರೆ. ಈ ಸಭೆಯಲ್ಲಿ ಮುಸ್ಲಿಂ ಸಮುದಾಯಸ್ತರು ಮಾತ್ರವಲ್ಲದೆ ಸಮಾನ ಮನಸ್ಕ ಇತರ‌ ಜಾತಿ- ಸಮುದಾಯದ ಸಂಘಟನೆಗಳಿಂದಲೂ ಜನ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ. ಪ್ರಾರಂಭದಲ್ಲಿ ಈ ಪ್ರತಿಭಟನೆ ಡಿ.‌27 ರಂದು ನಡೆಸುವುದೆಂದು ತೀರ್ಮಾನಿಸಲಾಗಿತ್ತಾದರೂ ಪೊಲೀಸ್ ಇಲಾಖೆ ಅನುಮತಿ ಮತ್ತು ಇತರ ತಾಂತ್ರಿಕ ಕಾರಣಗಳಿಂದಾಗಿ ಸಮುದಾಯ ಪ್ರತಿನಿಧಿಗಳು ಸಭೆ ಸೇರಿ ಡಿ.‌26 ರಂದೇ ನಡೆಸುವುದೆಂದು ಸರ್ವಾನುಮತದಿಂದ ತೀರ್ಮಾನಿಸಲಾಗಿದೆ.

ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸಿದವರು;

ತಾಲೂಕು ಸಂಯುಕ್ತ ಜಮಾಅತ್ ಅಧ್ಯಕ್ಷ ಸಯ್ಯಿದ್ ಇಸ್ಮಾಯಿಲ್ ತಂಙಳ್, ಎಸ್ ಕೆ ಎಸ್ಸೆಸ್ಸೆಫ್ ತಾಲೂಕು ಅಧ್ಯಕ್ಷ ನಝೀರ್ ಅಝ್ಹರಿ, ತಾಲೂಕು ಮುಸ್ಲಿಂ‌ ಒಕ್ಕೂಟದ ಅಧ್ಯಕ್ಷ ಬಿ.ಎ‌ ನಝೀರ್, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಜಿಲ್ಲಾ ಸಮಿತಿ ಸದಸ್ಯ ಹೈದರ್ ನೀರ್ಸಾಲ್, ಸಿಪಿಐಎಂ ತಾ.ಕಾರ್ಯದರ್ಶಿ ನ್ಯಾಯವಾದಿ ಶಿವಕುಮಾರ್ ಎಸ್. ಎಂ, ಮುಸ್ಲಿಂ ಒಕ್ಕೂಟದ ನಿಕಟ ಪೂರ್ವಾಧ್ಯಕ್ಷ ಚಾರ್ಮಾಡಿ ಹಸನಬ್ಬ, ಕೋಶಾಧಿಕಾರಿ ಬಿ.ಎಮ್ ಅಬ್ದುಲ್ ಹಮೀದ್ ಹಾಜಿ ಉಜಿರೆ‌ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.