ಬೆಳ್ತಂಗಡಿಯಲ್ಲಿ ಸಾರಸ್ವತ ಸಾಂಸ್ಕೃತಿಕ ಕಲಾ ವೈಭವ; ರೈತಬಂಧು ಶಿವಪುರ ಸುಬ್ಬಣ್ಣ ನಾಯಕ್ ಸಂಸ್ಮರಣೆ


ಬೆಳ್ತಂಗಡಿ: ಭಾಲಾವಲೀಕಾರ್ ರಾಜಾಪುರ ಸಾರಸ್ವತ ಸಂಘಸಂಸ್ಥೆಗಳ ಕೇಂದ್ರೀಯ ಸಮಿತಿ ಇವರ ವತಿಯಿಂದ ಸಾರಸ್ವತ ಸಾಂಸ್ಕೃತಿಕ ಕಲಾ ವೈಭವ ಮತ್ತು ರೈತಬಂಧು ಶಿವಪುರ ಸುಬ್ಬಣ್ಣ ನಾಯಕ್ ಸಂಸ್ಮರಣೆ ಹಾಗೂ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಜಂಟಿ ಸಭೆ ಡಿ. 22 ರಂದು ಬೆಳ್ತಂಗಡಿ ಎಸ್‌ಡಿಎಂ ಕಲಾಭವನದಲ್ಲಿ ಜರುಗಿತು.
ಸಮಾರಂಭದ ಅಧ್ಯಕ್ಷತೆಯನ್ನು ಮುಂಬಯಿ ರಾಜಾಪುರ ಸಾರಸ್ವತ ಸಂಘದ ಅಧ್ಯಕ್ಷ ಪ್ರಭಾಕರ ಡಿ ಬೋರ್ಕರ್ ವಹಿಸಿದ್ದರು. ಉದ್ಘಾಟನೆಯನ್ನು ಪದ್ಮಶ್ರೀ ಪುರಸ್ಕೃತ, ನಿವೃತ ಹಿರಿಯ ವಿಜ್ಞಾನಿ ಹೆಚ್. ಸದಾನಂದ ಕಾಮತ್ ನೆರವೇರಿಸಿದರು.
ಸಾಧಕರಿಗೆ ಸನ್ಮಾನ:
ಸಮಾರಂಭದಲ್ಲಿ ಸಾಧಕರಾದ ಶಶಿಲಕಾ ಎಂ ಪ್ರಭು ಚೇರ್ಕಾಡಿ ಉಡುಪಿ (ಯಕ್ಷಗಾನ), ಡಾ. ಉಮೇಶ್ ಪ್ರಭು ಉಡುಪಿ(ವೈದ್ಯಕೀಯ ಮತ್ತು ಸಮಾಜ ಸೇವೆ), ಭವಾನಿಶಂಕರ್ ಬೋರ್ಕರ್ ಬಿ.ವಿ ವಿರಾಜಪೇಟೆ(ದೇಶ ಸೇವೆ), ಕುಂಡೇರಿ ಜಯಂತ ನಾಯಕ್(ಧಾರ್ಮಿಕ ಮತ್ತು ಸಮಾಜ ಸೇವೆ), ಕೆ.ಹೆಚ್ ಗೌರಿ ಶಂಕರ(ಸಮಾಜ ಸೇವೆ) ಇವರನ್ನು ಸನ್ಮಾನಿಸಲಾಯಿತು.
ಇಂದಿರಾ ಸುಬ್ಬಣ್ಣ ನಾಯಕ್ ಮತ್ತು ಮಕ್ಕಳು ಮಾರುತಿಪುರ ಗೌರವ ಉಪಸ್ಥಿತರಿದ್ದರು. ಶ್ರೀ ಸರಸ್ವತಿ ಸೌಹಾರ್ದ ಸಹಕಾರಿ ಪುತ್ತೂರು ಇದರ ಅಧ್ಯಕ್ಷ ಎಸ್. ಆರ್ ಸತೀಶ್ಚಂದ್ರ ಅಭಿನಂದನಾ ಮಾತುಗಳನ್ನಾಡಿದರು.
ಸಂಘ ಸಂಸ್ಥೆಗಳ ವತಿಯಿಂದ ಸಾರಸ್ವತ ಸಾಂಸ್ಕೃತಿಕ ಕಲಾ ವೈಭವ:
ಶಶಿಕಲಾ ಪ್ರಭು ಚೇರ್ಕಾಡಿ ಉಡುಪಿ ಇವರ ನಿರ್ದೇಶನದಲ್ಲಿ ಬಡಗುತಿಟ್ಟು ಯಕ್ಷಗಾನ ಪ್ರಮೀಳಾರ್ಜುನ ಸಂಪನ್ನಗೊಂಡಿತು.
ಜಂಟಿ ಸಭೆ:
ಕೇಂದ್ರೀಯ ಸಮಿತಿ ಗೌರವಾಧ್ಯಕ್ಷ ಎಸ್. ಅರ್ ಸತೀಶ್ಚಂದ್ರ ಅವರ ಅಧ್ಯಕ್ಷತೆಯಲ್ಲಿ ಸಂಘ ಸಂಸ್ಥೆಗಳ ಪ್ರತನಿಧಿಗಳ ಸಮ್ಮುಖ ಜಂಟಿ ಸಭೆ ನಡೆಯಿತು. ಶಿಕ್ಷಣ, ಧಾರ್ಮಿಕ, ಸಂಘಟನೆ, ಜನಗಣತಿ ಇತ್ಯಾಧಿ ಪ್ರಮುಖ ವಿಚಾರಗಳನ್ನು ಮುಂದಿಟ್ಟು ನಡೆದ ಸಭೆಯಲ್ಲಿ ಉಡುಪಿ, ಪುತ್ತೂರು, ಮಹಾರಾಷ್ಟ್ರ, ವಿರಾಜಪೇಟೆ, ಹೈದರಾಬಾದ್, ತೀರ್ಥಹಳ್ಳಿ, ಬೆಂಗಳೂರು, ಅಮೆರಿಕಾ, ಮುಂಬೈ, ಮಂಗಳೂರು, ಮೈಸೂರು, ಪುಣೆ, ಕಾಸರಗೋಡು, ಮಸ್ಕತ್, ಮೊದಲಾದೆಡೆಯ ಸಂಘಟನೆಯ ಪ್ರಮುಖ ಪದಾಧಿಕಾರಿಗಳು ಭಾಗಿಯಾಗಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.